For Quick Alerts
ALLOW NOTIFICATIONS  
For Daily Alerts

ಕ್ಯಾಲೋರಿ ಕಡಿಮೆ ಇರುವ ಅಲಸಂದೆ ಕಾಳಿನ ಸಾರು

|

ಕಾಳುಗಳು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಪೋಷಕಾಂಶಗಳು ಅಧಿಕವಿರುವುದರಿಂದ ಇವುಗಳನ್ನು ತಿಂದರೆ ದೇಹದಲ್ಲಿ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ.

ಕಡಿಮೆ ಕ್ಯಾಲೋರಿಯ, ರುಚಿಕರವಾದ ಆಹಾರವನ್ನು ತಿನ್ನ ಬಯಸುವುದಾದರೆ ಈ ಅಲಸಂದೆ ಕಾಳಿನ ಸಾರು ಮಾಡಬಹುದು. ಇದನ್ನು ಸುಲಭವಾಗಿ ಮಾಡಬಹುದಾಗಿದ್ದು ಈ ಆರೋಗ್ಯಕರವಾದ ಸಾರಿನ ರೆಸಿಪಿ ನೋಡಿ ಇಲ್ಲಿದೆ.

Red Beans Curry Recipe

ಬೇಕಾಗುವ ಸಾಮಾಗ್ರಿಗಳು

ಅಲಸಂದೆ ಕಾಳು 1 ಕಪ್
ಈರುಳ್ಳಿ 1 (ಕತ್ತರಿಸಿದ್ದು)
ಕ್ಯಾರೆಟ್ 2 (ಕತ್ತರಿಸಿದ್ದು)
ಬೆಳ್ಳುಳ್ಳಿ 4-5 ಎಸಳು
ಅರ್ಧ ಇಂಚಿನಷ್ಟು ದೊಡ್ಡದಿರುವ ಶುಂಠಿ
ಟೊಮೆಟೊ 1
ಜೀರಿಗೆ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಖಾರಕ್ಕೆ ತಕ್ಕ ಮೆಣಸಿನ ಪುಡಿ
ಚಿಟಕೆಯಷ್ಟು ಇಂಗು
ಪಲಾವ್ ಎಲೆ 1
ತುಪ್ಪ 1 ಚಮಚ
ನೀರು 3 ಕಪ್
ರುಚಿಗೆ ತಕ್ಕ ಉಪ್ಪು
ಅರ್ಧ ಚಮಚ ನಿಂಬೆ ರಸ
ಸ್ವಲ್ಪಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

1. ಅಲಸಂದೆ ಕಾಳನ್ನು ರಾತ್ರಿಯಲ್ಲಿ ನೆನೆ ಹಾಕಬೇಕು. ನಂತರ ಅಲಸಂದೆ ಕಾಳು ಮತ್ತು ಕ್ಯಾರೆಟ್ ಸ್ವಲ್ಪ ಉಪ್ಪು ಹಾಕಿ ಬೇಯಿಸಬೇಕು.

2. ಪಾತ್ರೆಯನ್ನು ಅನ್ನು ಉರಿ ಮೇಲೆ ಇಟ್ಟು ತುಪ್ಪ ಹಾಕಬೇಕು. ತುಪ್ಪ ಬಿಸಿಯಾದಾಗ ಜೀರಿಗೆ ಹಾಕಬೇಕು. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

3. ನಂತರ ಬೆಳ್ಳುಳ್ಳಿ, ಶುಂಠಿ, ಪಲಾವ್ ಎಲೆ ಹಾಕಿ ಸ್ವಲ್ಪ ಹುರಿದು, ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಬೇಕು. ಚಿಟಿಕೆಯಷ್ಟು ಇಂಗು ಹಾಕಬೇಕು. ನಂತರ ಬೇಯಿಸಿದ ಅಲಸಂಡೆ ಮತ್ತು ಕ್ಯಾರೆಟ್ ಹಾಕಿ ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ, ಖಾರದ ಪುಡಿ ಹಾಕಿ ಕುದಿಸಬೇಕು. ನಂತರ ಸ್ವಲ್ಪ ನಿಂಬೆ ರಸ ಹಿಂಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಅಲಸಂದೆ ಕರಿ ರೆಡಿ.

English summary

Red Beans Curry Recipe | Variety Of Curry Recipe | ಅಲಸಂದೆ ಕರಿ ರೆಸಿಪಿ | ಅನೇಕ ಬಗೆಯ ಸಾರಿನ ರೆಸಿಪಿ

Today we give you a boiled red beans curry recipe that is yummy, healthy and is suited for people who are advised to eat low calories and non-spicy food.
X
Desktop Bottom Promotion