For Quick Alerts
ALLOW NOTIFICATIONS  
For Daily Alerts

ಬಾಯಿಗೂ ರುಚಿ, ಆರೋಗ್ಯಕ್ಕೂ ಹಿತ- ಸೌತೆಬೀಜದ ತಂಬುಳಿ

By Su.Ra
|

ಸೌತೆಕಾಯಿಯ ತೃಣವೂ ಕೂಡ ವೇಸ್ಟ್ ಅಲ್ಲ. ಸಿಪ್ಪೆ, ತಿರುಳು ಎಲ್ಲದರಿಂದಲೂ ಅಡುಗೆ ಮಾಡ್ಬಹುದು. ಅಷ್ಟೇ ಅಲ್ಲ, ಬೀಜವೂ ಕೂಡ ಒಂದು ದಿನ ರುಚಿರುಚಿ ಅಡುಗೆ ಮಾಡಲು ಬಳಕೆ ಮಾಡ್ಬಹುದು. ಸೌತೆ ಕಾಯಿಯನ್ನು ಅಡುಗೆ ಮಾಡಿದ ನಂತ್ರ ಅದ್ರ ತಿರುಳಿನಲ್ಲಿರುವ ಬೀಜವನ್ನು ಸಂಗ್ರಹ ಮಾಡಿ ಇಡಿ..ಅದನ್ನು ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳಿ.. ಯಾವತ್ತಾದರೂ ಒಂದು ದಿನ ಫಟಾಫಟ್ ಅಡುಗೆ ಮಾಡುವ ಸಂದರ್ಭ ಬಂದಾಗ ಈ ಸೌತೆಬೀಜ ನಿಮ್ಗೆ ಸಹಾಯಕ್ಕೆ ಬರುತ್ತೆ. ಸೌತೆಬೀಜದಿಂದ ತಯಾರಿಸುವ ತಂಬುಳಿ ನಾಲಗೆಗೆ ರುಚಿ ಮಾತ್ರವಲ್ಲ ನಿಮ್ಮ ಆರೋಗ್ಯಕ್ಕೂ ಹಿತವಾದ ಅಡುಗೆ. ನಾನಾ ಪತ್ರೆಗಳ ತಂಬ್ಳಿ ಅಥವಾ ತಂಬುಳಿ

Mouthwatering Cucumber seeds tambli recipe

ಸೌತೆಬೀಜದ ತಂಬುಳಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
*ಸೌತೆಬೀಜ - ಒಂದು ಸೌತೆಕಾಯಿಯಲ್ಲಿ ಎಷ್ಟು ಬೀಜ ಸಿಗುತ್ತೋ ಅಷ್ಟನ್ನು ಸಂಗ್ರಹಿಸಿ ಇಟ್ಟುಕೊಳ್ಳಿ 50 ರಿಂದ 60 ಬೀಜಗಳು ಒಂದು ಸೌತೆಕಾಯಿಯಲ್ಲಿ ಲಭ್ಯವಾಗುತ್ತೆ.
*ಜೀರಿಗೆ - ಅರ್ಧ ಚಮಚ
*ತೆಂಗಿನ ತುರಿ - ಒಂದು ಚಿಕ್ಕ ಕಪ್‌ನಷ್ಟು
*ಉಪ್ಪು - ರುಚಿಗೆ ತಕ್ಕಷ್ಟು
*ಮಜ್ಜಿಗೆ -ಒಂದರಿಂದ ಎರಡು ಲೋಟ
*ಎಣ್ಣೆ ಅಥವಾ ತುಪ್ಪ - ಒಂದರಿಂದ ಎರಡು ಸ್ಪೂನ್
*ಕೆಂಪು ಬ್ಯಾಡಗಿ ಮೆಣಸು - ಎರಡು ಎಸಳು

ಮಾಡುವ ವಿಧಾನ
*ಮೊದಲು ನಿಮ್ಮಲ್ಲಿರುವ ಸೌತೆಬೀಜಗಳನ್ನು ಸೋಸಿಕೊಳ್ಳಿ ಅಂದ್ರೆ ಎಲ್ಲವೂ ಶುದ್ಧವಾಗಿದ್ಯಾ ಅನ್ನೋದನ್ನು ಪರಿಶೀಲಿಸಿಕೊಳ್ಳಿ. ನಂತ್ರ ಅದಕ್ಕೆ ಕಾಲು ಚಮಚ ಜೀರಿಗೆ, ತೆಂಗಿನತುರಿ ಹಾಕಿ ಮಿಕ್ಸಿ ಮಾಡ್ಕೊಳ್ಳಿ. ಮಿಕ್ಸಿಮಾಡುವಾಗ ಸ್ವಲ್ಪ ನೀರು ಹಾಕಲೇಬೇಕಾಗುತ್ತೆ. ತರಿತರಿಯಾಗಿರುವ ತಂಬುಳಿ ನಿಮ್ಗೆ ಇಷ್ಟ ಅನ್ನೋದಾದ್ರೆ ಮಿಶ್ರಣವನ್ನು ನುಣ್ಣಗೆ ರುಬ್ಬಿಕೊಂಡು ಜಿಗುಟು ಬೇರ್ಪಡಿಸದೇ ಇಟ್ಟುಕೊಳ್ಳಬಹುದು.
*ಆದ್ರೆ ರುಬ್ಬಿದ ಮಿಶ್ರಣದಿಂದ ಹಾಲನ್ನು ಬೇರ್ಪಡಿಸಿಕೊಂಡ್ರೆ ತಂಬುಳಿ ರುಚಿ ಅನ್ನಿಸುತ್ತೆ. ನಂತ್ರ ಆ ಮಿಶ್ರಣಕ್ಕೆ ಮಜ್ಜಿಗೆ ಮತ್ತು ಉಪ್ಪು ಸೇರಿಸಿ ಒಮ್ಮೆ ಕದಡಿಕೊಳ್ಳಿ. ನಂತ್ರ ಒಗ್ಗರಣೆ ನೀಡುವ ಸಮಯ.. ಎಣ್ಣೆ ಕಾದ ಬಳಿಗೆ ಜೀರಿಗೆ ಮತ್ತು ಕೆಂಪುಬ್ಯಾಡಗಿ ಮೆಣಸನ್ನು ಹಾಕಿ ಚಟಿಪಟಿ ಮಾಡಿ ತಂಬುಳಿಗೆ ಹಾಕಿ.. ರುಚಿರುಚಿಯಾದ ತಂಬುಳಿ ಸಿದ್ಧವಾಗುತ್ತೆ. ಹಾಗೆಯೇ ಕುಡಿಯಲೂ ಇದು ಮಸ್ತಾಗಿರುತ್ತೆ. ಅಷ್ಟೇ ಅಲ್ಲ ಅನ್ನಕ್ಕೆ ಕಲಸಿಕೊಂಡು ಊಟ ಮಾಡಲು ಕೂಡ ಟೇಸ್ಟಿಯಾಗಿರುತ್ತೆ.

ಸೌತೆತಂಬುಳಿಯ ಪ್ರಯೋಜನಗಳು
*ಸೌತೆಬೀಜದ ತಂಬುಳಿಯನ್ನು ಜಟ್‌ಫಟ್ ಅಂತ ತಯಾರಿಸ್ಬಹುದು.
*ಸೌತೆಬೀಜದ ತಂಬಳಿ ದೇಹಕ್ಕೆ ತಂಪು ನೀಡುತ್ತೆ. ಬಾಡಿ ಹೀಟ್‌ ಸಮಸ್ಯೆಯಿಂದ ಬಳಲುವವರಿಗೆ ಇದೊಂದು ಬೆಸ್ಟ್ ಮೆಡಿಸಿನ್
ಬಾಯಾರಿಕೆ ನಿಯಂತ್ರಣಕ್ಕೂ ಕೂಡ ಇದು ಸಹಕಾರಿ ಡಿಹೈಡ್ರೇಷನ್‌ ಸಮಸ್ಯೆಯಿಂದ ಬಳಲ್ತಾ ಇರುವವರು ಸೌತೆಬೀಜದ ತಂಬುಳಿ ಸವಿಯೋದ್ರಿಂದ ಸಮಸ್ಯೆ ನಿವಾರಣೆಯಾಗುತ್ತೆ.

English summary

Mouthwatering Cucumber seeds tambli recipe

Tambuli in Kannada language related to some kind of sambar which will be prepared especially either with little butter milk or with little curds, so today boldsky kannada share how to make Cucumber seeds tambli have a look
X
Desktop Bottom Promotion