For Quick Alerts
ALLOW NOTIFICATIONS  
For Daily Alerts

ವಾವ್! ಮಜ್ಜಿಗೆ ಹುಳಿ: ಯುಗಾದಿ ಸ್ಪೆಶಲ್

|

ನಿಮಗಾಗಿ ನಾವಿಂದು ಇನ್ನೊಂದು ಯುಗಾದಿ ಸ್ಪೆಶಲ್ ಖಾದ್ಯವನ್ನು ಮುಂದಿರಿಸುತ್ತಿದ್ದೇವೆ. ಅದುವೇ ಮಜ್ಜಿಗೆ ಹುಳಿ. ದಕ್ಷಿಣ ಭಾರತದ ಮೊಸರಿನಿಂದ ತಯಾರಿಸಲ್ಪಡುವ ಜನಪ್ರಿಯ ಪದಾರ್ಥವಾಗಿದೆ ಮಜ್ಜಿಗೆ ಹುಳಿ.

ಮಜ್ಜಿಗೆ ಹಾಗೂ ತರಕಾರಿಯನ್ನು ಬಳಸಿಕೊಂಡು ಮಜ್ಜಿಗೆ ಹುಳಿಯನ್ನು ಸಿದ್ಧಪಡಿಸಲಾಗುತ್ತದೆ. ಮಸಾಲಾ ಸಾಮಾಗ್ರಿಗಳೊಂದಿಗೆ ಬೆರೆತ ಈ ಹುಳಿ ಪದಾರ್ಥ ಅಭೂತಪೂರ್ವ ಸ್ವಾದವನ್ನು ನೀಡುತ್ತದೆ.

ಇದನ್ನು ತಯಾರಿಸಲು ನಿಮಗೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಆರೋಗ್ಯಪೂರ್ಣವಾದ ಮಜ್ಜಿಗೆ ಹುಳಿ ನಿಮ್ಮನ್ನು ಹೆಲ್ದಿಯಾಗಿರಿಸುತ್ತದೆ. ಮೊಸರೂ ಕೂಡ ಯುಗಾದಿಯ ಹಬ್ಬಕ್ಕಾಗಿ ಬೇಸಿಗೆಗೆ ನಿಮ್ಮನ್ನು ತಂಪಾಗಿರಿಸುತ್ತದೆ. ಹಾಗಿದ್ದರೆ ಮತ್ತೇಕೆ ತಡ, ಮಜ್ಜಿಗೆ ಹುಳಿಯನ್ನು ತಯಾರಿಸಲು ಸನ್ನದ್ಧರಾಗಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಯುಗಾದಿಗಾಗಿ ರುಚಿಯಾದ ಚನ್ನಾ ಉಸಾಲ್ ರೆಸಿಪಿ

Mor Kuzhambu: Ugadi Recipe

ಪ್ರಮಾಣ: 4
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು:
.ಮೊಸರು - 1 ಕಪ್
.ಬೂದು ಕುಂಬಳಕಾಯಿ - 1 ಕಪ್ (ಕತ್ತರಿಸಿದ್ದು)
.ತೆಂಗಿನ ತುರಿ - 1/2 ಕಪ್ (ತುರಿದದ್ದು)
.ಜೀರಿಗೆ - 1/2 ಸ್ಪೂನ್
.ಹಸಿಮೆಣಸು - 2 (ಸೀಳಿದ್ದು)
.ಮೆಂತೆ - 1/4 ಕಪ್
.ಉಪ್ಪು - ರುಚಿಗೆ ತಕ್ಕಷ್ಟು
.ಅರಶಿನ ಹುಡಿ - 1/2 ಸ್ಪೂನ್
.ನೀರು - 1/2 ಕಪ್

ಒಗ್ಗರಣೆಗೆ:
.ಸಾಸಿವೆ - 1/4 ಸ್ಪೂನ್
.ಜೀರಿಗೆ - 1/4 ಸ್ಪೂನ್
.ಕರಿಬೇವಿನೆಲೆ - 6-7
.ಕೊತ್ತಂಬರಿ ಸೊಪ್ಪು - 2 ಸ್ಫೂನ್ (ಕತ್ತರಿಸಿದ್ದು)
.ಎಣ್ಣೆ - 1 ಸ್ಪೂನ್

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಈ ಯುಗಾದಿ ಗರಿಗರಿ ಬಾಳೆಕಾಯಿ ಬಜ್ಜಿಯೊಂದಿಗೆ ಆಚರಿಸಿ!

ಮಾಡುವ ವಿಧಾನ:
1. ತೆಂಗಿನ ತುರಿ, ಹಸಿಮೆಣಸು ಮತ್ತು ಜೀರಿಗೆಯನ್ನು ಮಿಕ್ಸರ್‌ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.

2.ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಂಡು ಅದು ನುಣ್ಣಗೆ ಆಗುವವರೆಗೆ ಸ್ಪೂನ್‌ನಲ್ಲಿ ಕಲಸಿ.

3.ಮೆಂತೆ, ನೀರು ಮತ್ತು ಕಡೆದ ಪೇಸ್ಟ್ ಅನ್ನು ಮೊಸರಿಗೆ ಸೇರಿಸಿ.

4.ತಳವುಳ್ಳ ಪ್ಯಾನ್ ಅನ್ನು ತೆಗೆದುಕೊಂಡು ಅದನ್ನು ಬಿಸಿ ಮಾಡಿ ಮತ್ತು ಮೊಸರನ್ನು ಅದಕ್ಕೆ ಹಾಕಿ.

5.ಬೂದು ಕುಂಬಳಕಾಯಿ ಹೋಳುಗಳನ್ನು ಕಡಿಮೆ ಉರಿಯಲ್ಲಿ 5-6 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

6.ಉಪ್ಪು ಮತ್ತು ಅರಶಿನ ಹುಡಿಯನ್ನು ಅದಕ್ಕೆ ಹಾಕಿ. ಮಧ್ಯಮ ಉರಿಯಲ್ಲಿ 2-3 ನಿಮಿಷಗಳ ಕಾಲ ಬೇಯಿಸಿ.

7.ಗ್ಯಾಸ್ ಆಫ್ ಮಾಡಿ ಒಂದೆಡೆ ಅದನ್ನಿಡಿ.

8.ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ ಮತ್ತು ಸಾಸಿವೆ, ಜೀರಿಗೆ, ಕರಿಬೇವಿನೆಲೆ ಸೇರಿಸಿ ಸೌಟಾಡಿಸಿ.

9.ಮಜ್ಜಿಗೆ ಪದಾರ್ಥಕ್ಕೆ ಈ ಒಗ್ಗರಣೆಯನ್ನು ಹಾಕಿ.

10.ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಮಜ್ಜಿಗೆ ಹುಳಿ ರೆಸಿಪಿ ತಯಾರಾಗಿದೆ. ಬಿಸಿ ಹಬೆಯಾಡುವ ಅನ್ನಕ್ಕೆ ಈ ಮಜ್ಜಿಗೆ ಹುಳಿ ಉತ್ತಮ ಕಾಂಬಿನೇಶನ್ ಆಗಿದೆ.

English summary

Mor Kuzhambu: Ugadi Recipe

Today we have another Ugadi special recipe for you. It is known as the Mor Kuzhambu. It is one of the traditional recipes of South India which is prepared with yogurt.Mor means buttermilk and kuzhambu means stew. The stew is prepared with buttermilk and a few other spices and ingredients which make this recipe an absolute delight.
X
Desktop Bottom Promotion