For Quick Alerts
ALLOW NOTIFICATIONS  
For Daily Alerts

ಸ್ವಾದವನ್ನು ಹೆಚ್ಚಿಸುವ ಕೊಂಕಣಿ ಶೈಲಿಯ ಆಲೂಗಡ್ಡೆ ಸಾಗು ರೆಸಿಪಿ

|

ಕೊಂಕಣಿ ರೆಸಿಪಿಗಳನ್ನು ಸಾಮಾನ್ಯವಾಗಿ ಎರಡು ಬಗೆಯಲ್ಲಿ ವರ್ಗೀಕರಿಸಲಾಗಿರುತ್ತದೆ: ಅವುಗಳಲ್ಲಿ ಒಂದನ್ನು ತೆಂಗಿನಕಾಯಿ ತಿಂಡಿಗಳು, ಮತ್ತೊಂದನ್ನು ಸಮುದ್ರ ಜನ್ಯ ಪದಾರ್ಥಗಳಿಂದ ಮಾಡಿದ ತಿಂಡಿಗಳು. ಹೇಳಿ ಕೇಳಿ ತೀರ ಪ್ರದೇಶ ಇಲ್ಲಿ ತೆಂಗಿನಕಾಯಿ ಬಹುತೇಕ ಸುಮ್ಮನೆ ದೊರೆಯುವ ಆಹಾರ ಪದಾರ್ಥವಾಗಿರುವುದರಿಂದ ಇಲ್ಲಿ ತೆಂಗಿನಕಾಯಿ ಮತ್ತು ತೆಂಗಿನ ಕಾಯಿ ಹಾಲನ್ನು ಹಾಕಿ ತಯಾರಿಸುವ ಆಹಾರಗಳನ್ನು ಹೆಚ್ಚಾಗಿ ಕಾಣಬಹುದು.

ಕೊಂಕಣಿ ಆಹಾರ ಪದಾರ್ಥಗಳ ವಿಶೇಷತೆಯೇನೆಂದರೆ ಇವು ಭಾರತದ ಇತರ ತೀರ ಪ್ರದೇಶದ ಆಹಾರಗಳಂತಲ್ಲದೆ, ಸ್ವಲ್ಪ ಸಿಹಿಯಾದ ರುಚಿಯನ್ನು ಒಳಗೊಂಡಿರುತ್ತವೆ. ಇದರ ಜೊತೆಗೆ ಇವುಗಳಲ್ಲಿ ತಾಜಾ ಮಸಾಲೆ ಪದಾರ್ಥಗಳು ಮತ್ತು ಸವಿಯಾದ ತೆಂಗಿನಕಾಯಿ ಸ್ವಾದವು ಸಹ ಇರುತ್ತದೆ. ಇಂದು ನಾವು ನಿಮಗಾಗಿ ತರಕಾರಿಯಿಂದ ತಯಾರಿಸಿಸಿದ ವಿಶೇಷವಾದ ಕೊಂಕಣಿ ರೆಸಿಪಿಯನ್ನು ತಿಳಿಸಿಕೊಡಲಿದ್ದೇವೆ.

Konkani Batata Song Recipe (Without Onions)

ಇದು ನಿಜಕ್ಕು ನಿಮಗೆ ಒಂದು ವಿಶೇಷವಾದ ಖಾದ್ಯವಾಗಿರುತ್ತದೆ. ಆಲೂಗಡ್ಡೆ ಸಾಗು ಅಥವಾ ಬಟಾಟೆ ಸಾಂಗ್ ಎಂಬುದು ಹೆಸರೆ ಹೇಳುವಂತೆ ಇದನ್ನು ಆಲೂಗಡ್ಡೆ ಮತ್ತು ತಾಜಾ ತೆಂಗಿನಕಾಯಿಂದ ತಯಾರಿಸುತ್ತಾರೆ. ಈ ಖಾದ್ಯದ ಹಲವಾರು ಆವೃತ್ತಿಗಳು ಚಾಲ್ತಿಯಲ್ಲಿವೆ. ಕೆಲವರು ಇದನ್ನು ಈರುಳ್ಳಿಗಳ ಸಹಿತ ತಯಾರಿಸುತ್ತಾರೆ, ಇನ್ನೂ ಕೆಲವರು ಇದನ್ನು ಈರುಳ್ಳಿಗಳಿಲ್ಲದೆ ತಯಾರಿಸುತ್ತಾರೆ.

ಬನ್ನಿ ನಾವು ಈರುಳ್ಳಿಗಳಿಲ್ಲದೆ ತಯಾರಿಸಬಹುದಾದ ಕೊಂಕಣಿ ಶೈಲಿಯ ಬಟಾಟೆ ಸಾಗು ಕುರಿತು ತಿಳಿಸಿಕೊಡುತ್ತೇವೆ. ಇದು ಶಾಖಾಹಾರಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿರುತ್ತದೆ. ನವರಾತ್ರಿಗಳ ಸಂದರ್ಭದಲ್ಲಿ ಉಪವಾಸ ಮಾಡುವವರು ತುಪ್ಪದ ಬದಲಿಗೆ ಎಣ್ಣೆಯನ್ನು ಹಾಗು ಕಲ್ಲು ಉಪ್ಪನ್ನು ಹಾಕಿ ಇದನ್ನು ತಯಾರಿಸುತ್ತಾರೆ. ಬನ್ನಿ ಇಲ್ಲಿದೆ ಕೊಂಕಣಿ ಶೈಲಿಯ ಬಟಾಟೆ ಸಾಗು ರೆಸಿಪಿ. ಒಮ್ಮೆ ಪ್ರಯತ್ನಿಸಿ ನೋಡಿ. ಇತರ ಸಾಂಬಾರ್ ಗಿಂತ ಭಿನ್ನ, ಕೊಂಕಣಿ ಸಾಂಬಾರ್

*ಇಬ್ಬರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 10 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 20 ನಿಮಿಷಗಳು

ಅಗತ್ಯವಾಗಿರುವ ಪದಾರ್ಥಗಳು
*ಆಲೂಗಡ್ಡೆಗಳು- 4 (ಹೋಳು ಮಾಡಿದಂತಹುದು)
*ತಾಜಾ ತೆಂಗಿನಕಾಯಿ- 1 ಕಪ್ (ತುರಿದಂತಹುದು)
*ಕೆಂಪು ಮೆಣಸಿನಕಾಯಿ- 3
*ಕೊತ್ತೊಂಬರಿ ಬೀಜ - 1 ಟೀ.ಚಮಚ
*ಇಂಗು - ಒಂದು ಚಿಟಿಕೆ
*ಅರಿಶಿಣ ಪುದಿ- 1 ಟೀ. ಚಮಚ
*ಉಪ್ಪು-ರುಚಿಗೆ ತಕ್ಕಷ್ಟು
*ಹುಣಸೆಹಣ್ಣು - 1 ಟೀ. ಚಮಚ
*ತೆಂಗಿನ ಕಾಯಿ - 2 ಟೀ. ಚಮಚ

ಮಾಡುವ ವಿಧಾನ
1. ಒಂದು ಟೇಬಲ್ ಚಮಚ ತೆಂಗಿನಕಾಯಿ ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ಇಂಗು, ಕೊತ್ತೊಂಬರಿ ಬೀಜಗಳು, ಅರಿಶಿಣ ಪುಡಿ ಮತ್ತು ಕೆಂಪು ಮೆಣಸಿನಕಾಯಿಯನ್ನು ಒಟ್ಟಿಗೆ ಹಾಕಿ. ಇವುಗಳನ್ನೆಲ್ಲ ಒಂದು ನಿಮಿಷ ಉರಿಯಿರಿ, ನಂತರ ಉರಿಯನ್ನು ಆರಿಸಿ.
2. ತದನಂತರ ಇವುಗಳನ್ನೆಲ್ಲವನ್ನು ತೆಂಗಿನಕಾಯಿ ಮತ್ತು ಹುಣಸೆ ಹಣ್ಣಿನ ಜೊತೆಗೆ ಸೇರಿಸಿ ಪೇಸ್ಟಿನಂತೆ ರುಬ್ಬಿಕೊಳ್ಳಿ. ಅಗತ್ಯವಾದರೆ ಸ್ವಲ್ಪ ನೀರನ್ನು ಬೆರೆಸಿ.
3. ಅದೇ ಬಾಣಲೆಯಲ್ಲಿ ಒಂದು ಟೇಬಲ್ ಚಮಚ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿ ಹಾಗು ಇದರಲ್ಲಿ ಆಲೂಗಡ್ಡೆಯ ಹೋಳುಗಳನ್ನು ಹಾಕಿಕೊಂಡು 5-6 ನಿಮಿಷಗಳ ಕಾಲ ಮಧ್ಯಮ ಗಾತ್ರದ ಉರಿಯಲ್ಲಿ ಕಾಯಿಸಿ.
4. ಇನ್ನು ಇದಕ್ಕೆ ರುಬ್ಬಿದ ಮಸಾಲೆ ಪೇಸ್ಟನ್ನು ಸೇರಿಸಿ ಮತ್ತು ಆಲೂಗಡ್ಡೆ ಮತ್ತು ಉಪ್ಪನ್ನು ಸಹ ಬೆರೆಸಿ. 4-5 ನಿಮಿಷಗಳ ಕಾಲ ಇದನ್ನು ಬೇಯಿಸಿ.
5. ನಂತರ ಇದಕ್ಕೆ ನೀರನ್ನು ಹಾಕಿ, ಮುಚ್ಚಳವನ್ನು ಮುಚ್ಚಿ. ಆಲೂಗಡ್ಡೆಗಲು ಬೇಯುವವರೆಗೆ ಇದನ್ನು ಒಲೆಯ ಮೇಲೆ ಇಡಿ.
6. ಇದಾದ ಮೇಲೆ, ಉರಿಯನ್ನು ಆರಿಸಿ. ಈಗ ಆಲುಗಡ್ಡೆ ಸಾಗು ಬಡಿಸಲು ಸಿದ್ಧವಾಗಿದೆ. ಈ ಶಾಖಾಹಾರಿ ಖಾದ್ಯವು ಅನ್ನ ಮತ್ತು ರೋಟಿಯ ಜೊತೆಗೆ ಸುಲಭವಾಗಿ ಸೇವಿಸಬಹುದು.

ಪೋಷಕಾಂಶದ ಪ್ರಮಾಣ
ಆಲೂಗಡ್ಡೆ ಸಾಗು ಎಲ್ಲಾ ವಯೋಮಾನದವರಿಗು ಸರಿಹೊಂದುವಂತಹ ಆಹಾರ ಪದಾರ್ಥವಲ್ಲ. ಒಂದು ವೇಳೆ ನಿಮಗೆ ಮಸಾಲೆ ಪದಾರ್ಥಗಳು ಇಷ್ಟವಾಗದಿದ್ದಲ್ಲಿ, ಹಸಿ ಮೆಣಸಿನಕಾಯಿಗಳನ್ನು ಬಳಸೇಡಿ.

English summary

Konkani Batata Song Recipe (Without Onions)

Konkani recipes are usually characterised by two things; coconut and seafood. Coconut is one of the most freely available ingredients on the coasts. That is why, Konkani recipes use fresh coconut and coconut milk in them. So, here is the Konkani batata song recipe. Do give it a try.
Story first published: Saturday, January 3, 2015, 16:20 [IST]
X
Desktop Bottom Promotion