For Quick Alerts
ALLOW NOTIFICATIONS  
For Daily Alerts

ಈರುಳ್ಳಿ, ಬೆಳ್ಳುಳ್ಳಿ ಹಾಕದ ಸೌತೆಕಾಯಿ ಸಾರು

|

ಈರುಳ್ಳಿ ಬೆಲೆ ಏರುತ್ತಿರುವುದು ನೋಡಿದರೆ ಈರುಳ್ಳಿ ಹಾಕದೆ ಅಡುಗೆ ಮಾಡುವ ಪ್ರಸಂಗ ಬಂದರೂ ಬರಬಹುದು. ಈರುಳ್ಳಿ ಹಾಕಿ ಅಡುಗೆ ಮಾಡಿ ಅಭ್ಯಾಸ ಇರುವವರಿಗೆ ಈರುಳ್ಳಿ ಹಾಕದೆ ಅಡುಗೆ ಮಾಡು ಅಂದರೆ ಈರುಳ್ಳಿ ಇಲ್ಲದೆ ಸಾರು ಮಾಡುವುದು ಹೇಗೆ? ಒಂದು ವೇಳೆ ಮಾಡಿದರೂ ಆ ಅಡುಗೆ ರುಚಿಯಾಗಿರುತ್ತದೆಯೇ? ಎಂಬ ಸಂಶಯವಿರುತ್ತದೆ.

ಈರುಳ್ಳಿ- ಬೆಳ್ಳುಳ್ಳಿ ಹಾಕದೆ ಮಾಡುವ ಜೈನ್ ಅಡುಗೆಗಳು ತಿನ್ನಲು ರುಚಿಕರವಾಗಿರುತ್ತವೆ. ಆದ್ದರಿಂದ ಇಲ್ಲಿ ನಾವು ಜೈನ್ ಶೈಲಿಯ ಈರುಳ್ಳಿ ಬೆಳ್ಳುಳ್ಳಿ ಹಾಕದ ಸೌತೆಕಾಯಿ ಸಾರಿನ ರೆಸಿಪಿ ನೀಡಿದ್ದೇವೆ. ಈ ಅಡುಗೆಯನ್ನು ಟ್ರೈ ಮಾಡಿ ನೋಡಿ ರುಚಿ ಇಲ್ಲದಿದ್ದರೆ ಮತ್ತೆ ಕೇಳಿ.

Cucumber Curry Recipe-Jain Food

ಬೇಕಾಗುವ ಸಾಮಾಗ್ರಿಗಳು
* 6-7 ಸಾಮಾನ್ಯ ಗಾತ್ರದ ಸೌತೆಕಾಯಿ
* 4 ಚಮಚ ಎಣ್ಣೆ
* 4 ಚಮಚ ಹೆಸರು ಬೇಳೆ
* 2 ಹಸಿ ಏಲಕ್ಕಿ
* 1 ಚಕ್ಕೆ
* 5-6 ಲವಂಗ
* ಅರ್ಧ ಚಮಚ ಅರಿಶಿಣ ಪುಡಿ
* ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಸಾಧಾರಣ ಗಾತ್ರದ ಸೌತೆಕಾಯಿಯ ಸಿಪ್ಪೆ ಸುಲಿದು ಒಂದು ಇಂಚಿನಷ್ಟು ಉದ್ದದ ತುಂಡುಗಳಾಗಿ ಕತ್ತರಿಸಿ ಒಂದು ಪಾತ್ರೆಯಲ್ಲಿಡಿ.

* ಈಗ ಪಾತ್ರೆಯನ್ನು ತೆಗೆದು 4 ಚಮಚ ಎಣ್ಣೆ ಹಾಕಿ ಅದರಲ್ಲಿ ಹೆಸರು ಬೇಳೆ ಹಾಕಿ 4-5 ನಿಮಿಷ ಹುರಿಯಿರಿ. ನಂತರ ಏಲಕ್ಕಿಯ ಸಿಪ್ಪೆ ಸುಲಿದು ಏಲಕ್ಕಿ ಬೀಜಗಳನ್ನು ಹಾಕಿ. ನಂತರ ಚಕ್ಕೆ ಮತ್ತು ಲವಂಗ ಹಾಕಿ ಸೌಟ್ ನಿಂದ ಎರಡು ನಿಮಿಷ ಆಡಿಸಿ.

* ನಂತರ ಕತ್ತರಿಸಿ ಸೌತೆಕಾಯಿ, ರುಚಿಗೆ ತಕ್ಕ ಉಪ್ಪು ಮತ್ತು ಅರಿಶಿಣ ಪುಡಿ ಹಾಕಿ ಸೌತೆಕಾಯಿ ಸ್ವಲ್ಪ ಮೆತ್ತಗಾಗುವವರೆಗೆ ಬೇಯಿಸಿ(ಆಗಾಗ ಸೌಟ್ ನಿಂದ ಆಡಿಸುತ್ತಾ ಇರಿ).

* ಸೌತೆಕಾಯಿ ಬೆಂದು ಸ್ವಲ್ಪ ಮೆತ್ತಗಾದ ಮೇಲೆ ಉರಿಯಿಂದ ಇಳಿಸಿದರೆ ರುಚಿಕರವಾದ ಸೌತೆಕಾಯಿ ಸಾರು ರೆಡಿ.

English summary

Cucumber Curry Recipe-jain Food | Variety Of Curry Recipe | ಸೌತೆಕಾಯಿ ಸಾರಿನ ರೆಸಿಪಿ- ಜೈನ್ ಆಹಾರ | ಅನೇಕ ಬಗೆಯ ಸಾರಿನ ರೆಸಿಪಿ

Cucumber Curry is a unique vegetarian recipe using cucumbers main ingredient. This dish is simple to prepare with not many ingredients needed. 
X
Desktop Bottom Promotion