For Quick Alerts
ALLOW NOTIFICATIONS  
For Daily Alerts

ಹಸಿವಾದಾಗ ಈ ಆರೋಗ್ಯಕರ ಸೂಪ್ ಕುಡಿಯಿರಿ

|
Carrot Soup Recipe
ಚಳಿಗಾಲದಲ್ಲಿ ಬಿಸಿ ಬಿಸಿಯಾದ ಸೂಪ್ ಕುಡಿಯುವುದೆಂದರೆ ಹಿತವಾಗಿರುತ್ತೆ. ಸೂಪ್ ಆರೋಗ್ಯಕರ ಮಾತ್ರವಲ್ಲ, ಸುಲಭವಾಗಿಯೂ ತಯಾರಿಸಬಹುದು. ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಕ್ಯಾರೆಟ್ ಸೂಪ್ ಮಾಡಿ ಕುಡಿಯುವುದರಿಂದ ತ್ವಚೆ ಮತ್ತು ದೇಹಕ್ಕೂ ಪೋಷಣೆ ನೀಡಬಹುದು. ಕ್ಯಾರೆಟ್ ಸೂಪ್ ಮಾಡೋದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.

ಕ್ಯಾರೆಟ್ ಸೂಪ್ ಗೆ ಏನೇನು ಬೇಕು?
* 5-7 ಕ್ಯಾರೆಟ್
* 1 ಟೊಮೆಟೊ
* 2 ಚಮಚ ಬೆಳ್ಳುಳ್ಳಿ ಪೇಸ್ಟ್
* ಮೆಣಸಿನ ಪುಡಿ, ಉಪ್ಪು
* ಗರಂ ಮಸಲಾ ಪುಡಿ
* ಬೆಣ್ಣೆ
* ಕೊತ್ತಂಬರಿ ಸೊಪ್ಪು

ಕ್ಯಾರೆಟ್ ಸೂಪ್ ಮಾಡುವ ವಿಧಾನ:
* ಕ್ಯಾರೆಟ್ ಸಿಪ್ಪೆ ತೆಗೆದು, ಸ್ವಚ್ಛಗೊಳಿಸಿ ತುರಿದು ಬಟ್ಟಲಿನಲ್ಲಿಡಬೇಕು.

* ಕ್ಯಾರೆಟ್ ಮತ್ತು ಟೊಮೆಟೊ ಬೇಯಿಸಿ ಮಿಕ್ಸಿಯಲ್ಲಿ ಪೇಸ್ಟ್ ನಂತೆ ರುಬ್ಬಿಕೊಳ್ಳಬೇಕು.

* ಬಾಣಲೆಯಲ್ಲಿ ಬೆಣ್ಣೆ ಕಾಯಿಸಿ ಅದಕ್ಕೆ ಬೆಳ್ಳುಳ್ಳಿ ಮತ್ತು ಟೊಮೆಟೊ ಕ್ಯಾರೆಟ್ ಪೇಸ್ಟನ್ನು ಹಾಕಬೇಕು. ಒಂದು ನಿಮಿಷ ತಿರುಗಿಸಿ ಉಪ್ಪು, ಗರಂ ಮಸಾಲಾ ಪುಡಿ ಹಾಕಿ ಚೆನ್ನಾಗಿ ತಿರುಗಿಸಬೇಕು.

* ಒಂದು ನಿಮಿಷ ಬೇಯಿಸಿ ಉರಿಯನ್ನು ಆರಿಸಬೇಕು. ಒಂದು ಬಟ್ಟಲಿಗೆ ಸುರಿದು ಅದರ ಮೇಲೆ ಮೆಣಸಿನ ಪುಡಿ ಮತ್ತು ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹರಡಿದರೆ ಕ್ಯಾರೆಟ್ ಸೂಪ್ ತಿನ್ನಲು ರೆಡಿಯಾಗಿರುತ್ತೆ.

English summary

Carrot Soup Recipe | Healthy Soup | ಕ್ಯಾರೆಟ್ ಸೂಪ್ ರೆಸಿಪಿ | ಆರೋಗ್ಯಕರ ಸೂಪ್

Soups are healthy and filling snacks which can be made easily too! During winter, you get ample of vegetables to make healthy soup of different flavors. Carrots are not only nutritious but used to make soup. It is time to try something different which is not only tasty but filling and healthy for the body and skin! Here is the recipe to make carrot soup.
Story first published: Monday, December 12, 2011, 18:10 [IST]
X
Desktop Bottom Promotion