Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ದಟ್ಸ್ ಕನ್ನಡ ಪಾಕಶಾಲೆ: ಟೊಮ್ಯಾಟೋ ಖಾದ್ಯ
ಕೋಲಾರದಲ್ಲಿ ಟೋಮ್ಯಾಟೋ ಧಾರಣೆ ಕುಸಿದಿದೆ . ಕೆ.ಜಿ. ಟೊಮ್ಯಾಟೋ 30 ಪೈಸೆಗಳಿಗೆ ಬಿಕರಿಯಾಗುತ್ತಿದೆ. ಸೂಕ್ತ ಬೆಂಬಲ ಬೆಲೆಯೂ ಸಿಗದೆ ರೈತರು ಪರಿತಪಿಸುತ್ತಿದ್ದಾರೆ. ಟೊಮ್ಯಾಟೋ ಬಳಕೆಯನ್ನು ಹೆಚ್ಚು ಮಾಡಿ ನಮ್ಮ ಕೈಲಾದ ಸಹಾಯ ಮಾಡೋಣ. ಇದನ್ನು ಅಳಿಲು ಸೇವೆ ಎಂದು ತಿಳಿದರೂ ಅಡ್ಡಿಯಿಲ್ಲ. ನಿರುಪಮಾ ರಾವ್ ಕಳುಹಿಸಿರುವ ಈ ಟೊಮ್ಯಾಟೋ ಖಾದ್ಯ ನಿಮಗಿಷ್ಟವಾಗಬಹುದು.
ಬೇಕಾಗುವ ಪದಾರ್ಥಗಳು:
ಹಣ್ಣಾದ ಟೊಮೆಟೋ: 500 ಗ್ರಾಂ.
ಆಲೂಗಡ್ಡೆ: 3
ಗರಂ ಮಸಾಲೆ: 1 ಟೇಬಲ್ ಚಮಚ
ಪುಡಿ ಮಾಡಿದ ಗೋಡಂಬಿ: 2 ಟೇಬಲ್ ಚಮಚ
ಸಕ್ಕರೆ: 1 ಟೇಬಲ್ ಚಮಚ
ಬೆಣ್ಣೆ: 1 ಟೇಬಲ್ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಗ್ರೇವಿಗಾಗಿ
ನುಣ್ಣಗೆ ಅರೆದ ಟೊಮೆಟೋ: 250 ಗ್ರಾಂ.
ಬೆಣ್ಣೆ: 1 ಟೇಬಲ್ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಮಸಾಲೆ ಮಾಡಿಕೊಳ್ಳಲು
ಕೆಂಪು ಮೆಣಸಿನಕಾಯಿ: 3
ಚಕ್ಕೆ: 3 ಪಟ್ಟೆಗಳು
ಶುಂಠಿ: ಅರ್ಧ ಬೆರಳುದ್ದ
ಚಕ್ಕೆ ಮೊಗ್ಗು:3
ಬೆಳ್ಳುಳ್ಳಿ ಎಸಳು: 4
ಕೊತ್ತಂಬರಿ ಬೀಜಗಳು: 1 ಟೇಬಲ್ ಚಮಚ
ಈರುಳ್ಳಿ: 2
ಮಾಡುವ ವಿಧಾನ:
ಮೊದಲು ಮಸಾಲೆ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಬಜ್ಜಿ ಮಾಡಿ ಪಕ್ಕಕ್ಕಿಡಿ. ಬಿಸಿನೀರಿಗೆ ಟೋಮ್ಯಾಟೋಗಳನ್ನು ಹಾಕಿ ನಂತರ ಸಿಪ್ಪೆ ತೆಗೆದು ಎರಡು ಹೋಳುಗಳಾಗಿ ಸಮವಾಗಿ ಕತ್ತರಿಸಿ. ಹಣ್ಣಿನ ತಿರುಳನ್ನು ಬೇರ್ಪಡಿಸಿ. ಇದನ್ನು ಪಕ್ಕಕ್ಕಿಟ್ಟು ಗ್ರೇವಿಗೆ ಉಪಯೋಗಿಸಿಕೊಳ್ಳಬೇಕು.
ಬಾಣಲಿಯಲ್ಲಿ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿ ಅದಕ್ಕೆ ಮೆಣಸಿನಕಾಯಿ ಹಾಗೂ ಶುಂಠಿ ಪೇಸ್ಟ್‌ನ ಮಿಶ್ರಣವನ್ನು ಬೆರಸಿ. ಪುಡಿ ಮಾಡಿದ ಗೋಡಂಬಿ, ಆಲೂಗಡ್ಡೆ, ಉಪ್ಪು, ಸಕ್ಕರೆ ಮತ್ತು ಗರಂ ಮಸಾಲೆ ಹಾಕಿ ಚೆನ್ನಾಗಿ ಕಲಸಿ. ಎರಡು ಹೋಳುಗಳಾಗಿ ಹೆಚ್ಚಿಕೊಂಡ ಟೊಮ್ಯಾಟೋಗಳಿಗೆ ಈ ಮಸಾಲೆಯನ್ನು ತುಂಬಿ.
ಮತ್ತೆ ಬಾಣಲೆಯಲ್ಲಿ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿ ಮಸಾಲೆ ಮಿಶ್ರಣವನ್ನು ಸೇರಿಸಿ. 3 ನಿಮಿಷಗಳ ಕಾಲ ಕರಿಯಬೇಕು. ನುಣ್ಣಗೆ ಅರೆದ ಟೊಮ್ಯಾಟೋ, ಉಪ್ಪು, ಟೊಮ್ಯಾಟೋ ತಿರುಳು, ಸಕ್ಕರೆ ಹಾಕಿ ನೀರಿನ ಅಂಶ ಹೋಗುವವರೆಗೂ ಚೆನ್ನಾಗಿ ಕಲಕುತ್ತಿರಿ. ನಂತರ 1 ಕಪ್ ನೀರು ಹಾಕಿ ಕುದಿಯಲು ಬಿಡಿ. ಗ್ರೇವಿ ಸಿದ್ಧವಾಗುತ್ತದೆ.
ಮಸಾಲೆ ತುಂಬಿದ ಟೊಮ್ಯಾಟೋಗಳ ಮೇಲೆ ಈ ಗೇವಿಯನ್ನು ಹಾಕಿ. 20 ನಿಮಿಷಗಳ ಕಾಲ ಚೆನ್ನಾಗಿ ಕಾಯಿಸಬೇಕು. ಬಿಸಿಬಿಸಿಯಾಗಿ ಸವಿಯುತ್ತಿದ್ದರೆ ರುಚಿ ಅದ್ಭುತವಾಗಿರುತ್ತದೆ.