For Quick Alerts
ALLOW NOTIFICATIONS  
For Daily Alerts

ಮಕ್ಕಳ ಆರೋಗ್ಯಕ್ಕಾಗಿ ತೊಗರಿಬೇಳೆ ಸೂಪ್

By Prasad
|
ಕರ್ನಾಟಕದಲ್ಲಿ ಪರೀಕ್ಷೆ ಪರ್ವ ಪ್ರಾರಂಭವಾಗಿದೆ. ಪರೀಕ್ಷೆ ಮಕ್ಕಳಿಗೆ ಮಾತ್ರವಲ್ಲ ತಾಯಂದಿರಿಗೂ. ಮಕ್ಕಳ ಆರೋಗ್ಯ ಉತ್ತಮವಾಗಿರುವಂತೆ ನೋಡಿಕೊಳ್ಳುವುದು ಮತ್ತು ಆರೋಗ್ಯದಿಂದಿರಲು ಯಾವ್ಯಾವ ಆಹಾರ ನೀಡಬೇಕು ಎಂಬುದನ್ನು ತಿಳಿದುಕೊಂಡಿರುವುದು ಪಾಲಕರ ಆದ್ಯ ಕರ್ತವ್ಯ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಮಕ್ಕಳ ಭವಿಷ್ಯಕ್ಕೆ ಧಕ್ಕೆ ಬೀಳುತ್ತದೆ.

ಎಲ್ಲಕ್ಕಿಂತ ಮಿಗಿಲಾಗಿ ಉತ್ತಮ ಆರೋಗ್ಯವೇ ಮಕ್ಕಳು ಏಕಾಗ್ರಚಿತ್ತದಿಂದ ಓದಲು ಮತ್ತು ಚೈತನ್ಯದಿಂದ ಇರಲು ಇಂಬು ನೀಡುತ್ತದೆ. ಕಾಲಕಾಲಕ್ಕೆ ಪೌಷ್ಟಿಕತೆಯಿಂದ ಕೂಡಿದ ಸಮತೋಲಿತ ಆಹಾರ ಮತ್ತು ಏಕಾಗ್ರತೆಯ ಓದು ಒಳ್ಳೆಯ ಫಲಿತಾಂಶ ನೀಡುವುದರಲ್ಲಿ ಸಂಶಯವೇ ಇಲ್ಲ.

ಅತ್ಯಧಿಕ ಪ್ರೊಟೀನ್ ಇರುವ ತೊಗರಿಬೇಳೆಯಿಂದ ತಯಾರಿಸಿದ ಸ್ವಾದಿಷ್ಟಕರವಾದ ಸೂಪ್ ಗಿಂತ ಉತ್ತಮವಾದ ಆಹಾರ ವಿದ್ಯಾರ್ಥಿಗಳಿಗೆ ಇನ್ನೊಂದಿಲ್ಲ. ಈ ಸೂಪಿನಲ್ಲಿ ಬಳಸುವ ಹೆಚ್ಚು ನಾರಿನಂಶ ಇರುವ ಹೀರೆಕಾಯಿಯಲ್ಲಿ ಅಧಿಕ ವಿಟಾಮಿನ್, ಕಬ್ಬಿಣದಂಶ ಇರುತ್ತದೆ. ಈ ಸೂಪ್ ಕುಡಿಯುವುದರಿಂದ ಜೀರ್ಣಕ್ರಿಯೆಯೂ ವೃದ್ಧಿಗೊಳ್ಳುತ್ತದೆ. ಇದನ್ನು ತಯಾರಿಸಲು ಅಮ್ಮಂದಿರು ಹೆಚ್ಚಿನ ಕಷ್ಟಪಡಬೇಕಾಗೂ ಇಲ್ಲ.

ಬೇಕಾಗುವ ಪದಾರ್ಥಗಳು :
ಒಂದು ಕಪ್ ತೊಗರಿ ಬೇಳೆ | ಅರ್ಧ ಕಪ್ ಕತ್ತರಿಸಿದ ಹೀರೆಕಾಯಿ | ಅರ್ಧ ಕಪ್ ಕತ್ತರಿಸಿದ ಸೌತೆಕಾಯಿ | ಅರ್ಧ ಚಮಚ ನಿಂಬೆಹಣ್ಣಿನ ರಸ | ಒಂದು ಚಮಚ ಜೀರಿಗೆ | ಉಪ್ಪು, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ವಿಧಾನ : ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಚೆನ್ನಾಗಿ ಬೇಯಿಸಿಟ್ಟುಕೊಳ್ಳಿ. ಸ್ವಲ್ಪೇಸ್ವಲ್ಪ ಒಗ್ಗರಣೆ ತಯಾರಿಸಿಕೊಂಡು ಹೀರೆಕಾಯಿ ಮತ್ತು ಸೌತೆಕಾಯಿ ಒಂದು ನಿಮಿಷ ತಾಳಿಸಿ ಅದಕ್ಕೆ ಬೇಯಿಸಿಟ್ಟುಕೊಂಡ ಬೇಳೆ ಸುರಿಯಿರಿ. ಅದಕ್ಕೆ ಉಪ್ಪು, ನಿಂಬೆ ರಸ, ಉಪ್ಪು ಹಾಕಿ ಹದಿನೈದಿಪ್ಪತ್ತು ನಿಮಿಷ ಚೆನ್ನಾಗಿ ಕುದಿಸಿರಿ. ಅದಕ್ಕೆ ಮೆಣಸಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಕೈಯಾಡಿಸಿ. ಅಷ್ಟೇ ತೊಗರಿಬೇಳೆ ಸೂಪ್ ತಯಾರ್.

English summary

Toor dal, ridge gourd soup | Healthy food for children | Exam diet for kids | ತೊಗರಿಬೇಳೆ ಸೂಪ್ | ಆರೋಗ್ಯಕರ ತಿನಿಸು | ಪರೀಕ್ಷೆ ಸಮಯ

This is examination time for the kids. Take utmost care to see that your children keep good health and eat healthy food. Toor dal soup is the perfect exam diet for you kid.
Story first published: Monday, March 21, 2011, 17:34 [IST]
X
Desktop Bottom Promotion