For Quick Alerts
ALLOW NOTIFICATIONS  
For Daily Alerts

ನಾಲಿಗೆಯ ರುಚಿತಣಿಸುವ ಸ್ವಾದ ಭರಿತ ಚಿಲ್ಲಿ ಪನ್ನೀರ್!

|

ನಾವು ಭಾರತೀಯರು ಖಾರವನ್ನು ಇಷ್ಟಪಡುತ್ತೇವೆ. ನಮ್ಮ ನಾಲಿಗೆ ಖಾರವನ್ನು ಸೋಕಿಸುವ ಯಾವ ಆಹಾರವನ್ನು ಬೇಕಾದರು ನಾವು ಇಷ್ಟಪಡುತ್ತೇವೆ. ನಮ್ಮ ಕೈ ಚಳಕದಿಂದ ನಾವು ಯಾವ ಖಾದ್ಯವನ್ನು ನಮಗೆ ಬೇಕಾದಂತಹ ವರ್ಣರಂಜಿತವಾದ ಮತ್ತು ಖಾರ ಹೊಂದಿರುವ ಖಾದ್ಯವಾಗಿ ಪರಿವರ್ತಿಸಿ ಬಿಡುತ್ತೇವೆ. ಇದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ, ರಸ್ತೆ ಬದಿಗಳಲ್ಲಿ ದೊರೆಯುವ ಚೈನೀಸ್ ಆಹಾರಗಳು. ಇವುಗಳು ನಮ್ಮ ಬಾಯಿಯಲ್ಲಿ ನೀರೂರಿಸುವುದರ ಜೊತೆಗೆ, ನಮ್ಮ ನಾಲಿಗೆ ಚಪಲವನ್ನು ಸಹ ತೀರಿಸುತ್ತವೆ. 8 ಬಗೆಯ ಸ್ವಾದಿಷ್ಟಕರ ಪನ್ನೀರ್ ರೆಸಿಪಿ

ಮೂಲತಃ ಚೈನೀಸ್ ಆಹಾರಗಳು ಅತ್ಯಂತ ಮೃದುವಾದ ಆಹಾರ ಪದಾರ್ಥಗಳಿಂದ ತಯಾರಿಸಲಾಗುತ್ತಿತ್ತು ಮತ್ತು ಅದಕ್ಕೆ ಕಡಿಮೆ ಮಸಾಲೆಗಳನ್ನು ಹಾಕಲಾಗುತ್ತಿತ್ತು. ಆದರೆ ಈ ಚೈನೀಸ್ ತಿನಿಸುಗಳು ಭಾರತೀಯ ರುಚಿಯನ್ನು ಪಡೆದಾಗ, ಅವುಗಳು ತಮ್ಮದೇ ಆದ ರುಚಿಕರವಾದ ಇಂಡೋ-ಚೀನಾ ರುಚಿಯನ್ನು ಹೊಂದಿರುವ ಖಾದ್ಯಗಳಾಗಿ ಪರಿವರ್ತನೆ ಹೊಂದಿತು. ಇಂತಹ ಖಾದ್ಯಗಳಲ್ಲಿ ಚಿಲ್ಲಿ ಪನ್ನೀರ್ ಅತ್ಯಂತ ಜನಪ್ರಿಯವಾಗಿದೆ.

Tasty & Spicy Chilli Paneer Recipe

ಚಿಲ್ಲಿ ಪನ್ನೀರ್ ಎಂಬ ಖಾದ್ಯವು ಶಾಖಾಹಾರಿ ಮತ್ತು ಮಾಂಸಾಹಾರಿ ಎಂಬ ಭೇದ ಭಾವವಿಲ್ಲದೆ ಎಲ್ಲರಿಗು ಪ್ರಿಯವಾಗಿದೆ. ಭಾರತೀಯ ಮನೆಗಳಲ್ಲಿ ತಯಾರಿಸಿದ ಚೀಸ್‍ನ ಸಣ್ಣ ಸಣ್ಣ ತುಂಡುಗಳ ಮೂಲಕ ಮಾಡಲಾದ ಈ ಆಹಾರವು ಸಾಸ್ ಜೊತೆಗೆ ಸವಿಯುತ್ತಿದ್ದರೆ, ತಟ್ಟೆ ಖಾಲಿಯಾದ ಮೇಲೆಯೇ ಗೊತ್ತಾಗುವುದು!. ಮತ್ತೆ ಇನ್ನೇಕೆ ತಡ, ಎತ್ತಿಕೊಳ್ಳಿ ಪದಾರ್ಥಗಳನ್ನು ಕೈಗೆ ಇಂದು ಸ್ಪೈಸಿಯಾದ ಚಿಲ್ಲಿ ಪನ್ನೀರ್ ಮಾಡುವಿರಂತೆ, ಏನೇನು ಬೇಕು ಎಂಬುದನ್ನು ಮುಂದೆ ನೀಡಿದ್ದೀವಿ, ಹೇಗೆ ಮಾಡಬೇಕು ಎಂಬುದನ್ನು ಸಹ!. ಪನ್ನೀರ್ ಟೊಮೆಟೊ ಗ್ರೇವಿ -ಸೈಡ್ ಡಿಶ್ ರೆಸಿಪಿ

ಪ್ರಮಾಣ: 4 ಜನರಿಗೆ
ಸಿದ್ಧತೆಗೆ ತಗುಲುವ ಸಮಯ: 10 ನಿಮಿಷಗಳು
ಅಡುಗೆಗೆ ತಗುಲುವ ಸಮಯ: 20 ನಿಮಿಷಗಳು

ಪದಾರ್ಥಗಳು
*ಪನ್ನೀರ್ - 500ಗ್ರಾಂಗಳು
*ಜೋಳದ ಹಿಟ್ಟು - 2 ಟೀ ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಕರಿ ಮೆಣಸಿನ ಪುಡಿ- ½ ಟೀ. ಚಮಚ
*ಬೆಳ್ಳುಳ್ಳಿ- 5 ತುಂಡುಗಳು (ಜಜ್ಜಿದಂತಹವು)
*ಈರುಳ್ಳಿ- 2 (ತುಂಡು ಮಾಡಿದಂತಹವು)
*ದಪ್ಪ ಮೆಣಸಿನಕಾಯಿ- 2 (ಚೌಕಾಕರದಲ್ಲಿ ಕತ್ತರಿಸಿದಂತಹವು)
*ಹಸಿ ಮೆಣಸಿನಕಾಯಿ- 4 (ತುಂಡು)
*ತರಕಾರಿ- ½ ಕಪ್
*ಸೊಯಾ ಸಾಸ್- 2 ಟೀ ಚಮಚ
*ಚಿಲ್ಲಿ ಸಾಸ್- 1 ಟೀ ಚಮಚ
*ಟೊಮೇಟೊ ಸಾಸ್- ಟೀ ಚಮಚ
ಎಣ್ಣೆ- ಸ್ವಲ್ಪ

ಮಾಡುವ ವಿಧಾನ
1. ಒಂದು ಚಮಚ ಜೋಳದ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಉಪ್ಪು, ಕರಿ ಮೆಣಸು ಮತ್ತು ಸ್ವಲ್ಪ ನೀರನ್ನು ಹಾಕಿ ಗಟ್ಟಿಯಾದ ಪೇಸ್ಟ್ ರೀತಿ ಕಲೆಸಿಕೊಳ್ಳಿ.
2. ಇನ್ನು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ, ಡೀಪ್ ಫ್ರೈ ಮಾಡಲು ಸಹಕಾರಿಯಾಗಿರಬೇಕು.
3. ಜೋಳದ ಹಿಟ್ಟಿನ ಮಿಶ್ರಣದಲ್ಲಿ ಪನ್ನೀರ್ ತುಂಡುಗಳನ್ನು ಅದ್ದಿ ಮತ್ತು ಅದನ್ನು ಎಣ್ಣೆಯಲ್ಲಿ ಬಿಟ್ಟು, ಚಿನ್ನದ ಬಣ್ಣಕ್ಕೆ ತಿರುಗುವವರೆಗು ಫ್ರೈ ಮಾಡಿ.
4. ಹೀಗೆ ಫ್ರೈ ಆದ ಪನ್ನೀರ್ ಅನ್ನು ಇನ್ನೊಂದು ಪಾತ್ರೆಯಲ್ಲಿ ಇಡಿ.
5. ತದನಂತರ ಎರಡು ಚಮಚ ಎಣ್ಣೆಯನ್ನು ತೆಗೆದುಕೊಳ್ಳಿ. ಅದಕ್ಕೆ ಜಜ್ಜಿದ ಬೆಳ್ಳುಳ್ಳಿಯನ್ನು ಬೆರೆಸಿ. ಇದನ್ನು ಕೆಲವು ಸೆಕೆಂಡ್‍ಗಳ ಕಾಲ ಫ್ರೈ ಮಾಡಿ.
6. ನಂತರ ಈರುಳ್ಳಿ ಮತ್ತು ದಪ್ಪ ಮೆಣಸಿನಕಾಯಿಗಳನ್ನು ಪಾತ್ರೆಗೆ ಹಾಕಿ. ಮಧ್ಯಮ ಗಾತ್ರದ ಉರಿಯಲ್ಲಿ, ಇದನ್ನು ಸಹ ಚಿನ್ನದ ಬಣ್ಣಕ್ಕೆ ಬರುವವರೆಗು ಉರಿಯಿರಿ.
7. ಇದಕ್ಕೆ ಹಸಿ ಮೆಣಸಿನಕಾಯಿಯನ್ನು ಸೇರಿಸಿ, ತರಕಾರಿಗಳನ್ನು ಮತ್ತು ಉಪ್ಪನ್ನು ಹಾಕಿ ಬಾಣಲೆಯಲ್ಲಿ ಬೇಯಿಸಿ.
8. ನಂತರ ಸೋಯಾ ಸಾಸ್, ಟೊಮೇಟೊ ಸಾಸ್, ಚಿಲ್ಲಿ ಸಾಸ್ ಸೇರಿಸಿ 3-4 ನಿಮಿಷಗಳ ಕಾಲ ಕಲೆಸಿಕೊಡಿರಿ.
9. ಇನ್ನು ¼ ಕಪ್ ನೀರಿಗೆ ಒಂದು ಟೀ ಚಮಚ ಜೋಳದ ಹಿಟ್ಟನ್ನು ಬೆರೆಸಿ ಮತ್ತು ಇದನ್ನು ಬಾಣಲೆಗೆ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
10. 4-5 ನಿಮಿಷಗಳ ಕಾಲ ಇದನ್ನು ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸಿ. ನೀರು ಒಣಗುವವರೆಗೆ ಇದನ್ನು ಹಾಗೆಯೇ ಬಿಡಿ.
11. ಈಗ ಪನ್ನೀರ್ ತುಂಡುಗಳನ್ನು ಇದಕ್ಕೆ ಸೇರಿಸಿ ಮತ್ತು ಚೆನ್ನಾಗಿ ಕಲೆಸಿ.
12. ಇದೆಲ್ಲ ಮುಗಿದ ಮೇಲೆ, ಒಲೆಯನ್ನು ಆರಿಸಿ ಮತ್ತು ಇದನ್ನು ಬಡಿಸಿ.
ಈಗ ಖಾರವಾಗಿರುವ ಮತ್ತು ಮಸಾಲೆಗಳಿಂದ ಕೂಡಿದ ಚಿಲ್ಲಿ ಪನ್ನೀರ್ ಸೇವಿಸಲು ತಯಾರಾಗಿದೆ. ನಿಮ್ಮ ಮನೆಯವರ ಜೊತೆ ಕುಳಿತು ಈ ಇಂಡೋ-ಚೀನಾದ ಸ್ವಾದಿಷ್ಟವಾದ ಖಾದ್ಯವನ್ನು ಫ್ರೈಡ್ ರೈಸ್ ಅಥವಾ ನೂಡಲ್ಸ್ ಜೊತೆಗೆ ಸೇವಿಸಿ.

English summary

Tasty & Spicy Chilli Paneer Recipe

We Indians love spicy food. We fall in love with any food which sets our tongue on fire. We can convert the most bland dish into the the most colourful and fiery dish through our culinary skills. So, what are you waiting for? Check out the recipe for hot and spicy chilli paneer and give it a try. It's simple, quick and fiery!
Story first published: Monday, October 20, 2014, 11:53 [IST]
X
Desktop Bottom Promotion