For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳಿಗೆ ಉತ್ತಮ ಈ ದಾಲ್ ಕಬಿಲ

|

ಮಧುಮೇಹ ನಿಮ್ಮನ್ನು ತಿನ್ನಬಯಸುವ ಆಹಾರಗಳಿಂದ ದೂರವಿಡುತ್ತದೆ. ಅದರರ್ಥ ನೀವು ನಿಮ್ಮಿಷ್ಟದ ಆಹಾರ ತಿನ್ನಲೇ ಬಾರದು ಎಂದಲ್ಲ. ನಾವಿಲ್ಲಿ ನಿಮ್ಮ ಆರೋಗ್ಯ ಮತ್ತು ರುಚಿ ಎರಡಕ್ಕೂ ಹೊಂದುವಂತಹ ಹೊಸ ರೆಸಿಪಿಯನ್ನು ಇಂದು ನಿಮ್ಮ ಮುಂದೆ ಇಡುತ್ತಿದ್ದೇವೆ.

ಮಧುಮೇಹಿಗಳಿಗಾಗಿಯೇ ಈ ವಿಶೇಷ ರೆಸಿಪಿ ದಾಲ್ ಕಬಿಲ. ಇದು ಮೊಘಲರ ಆಹಾರ ಶೈಲಿಗೆ ಸಂಬಂಧಿಸಿದ್ದು. ಇದನ್ನು ಮಧುಮೇಹಿಗಳ ಅಗತ್ಯಕ್ಕೆ ತಕ್ಕಂತೆ ಸಿದ್ಧಪಡಿಸಲಾಗಿದೆ. ಇದಕ್ಕೆ ಕಡಿಮೆ ಮಸಾಲೆ ಪದಾರ್ಥ ಮತ್ತು ಕಡಿಮೆ ಬೇಳೆಯನ್ನು ಬಳಸುವುದರಿಂದ ಮಧುಮೇಹಿಗಳು ಯಾವುದೇ ಆತಂಕವಿಲ್ಲದೆ ಸವಿಯಬಹುದು. ಹಾಗಿದ್ದರೆ ಒಮ್ಮೆ ಮಾಡಿ ರುಚಿ ನೋಡಿ.

Tasty Dal Kabila For Diabetics

ಬೇಕಾಗುವ ಸಾಮಗ್ರಿಗಳು
1. ಉದ್ದಿನ ಬೇಳೆ- 1 ಕಪ್
2. ದಾಲ್ಚಿನ್ನಿ- 1
3. ಲವಂಗ- 2
4. ಒಣಮೆಣಸಿನಕಾಯಿ- 1
5. ಶುಂಠಿ- ಬೆಳ್ಳುಳ್ಳಿ ಪೇಸ್ಟ್- 1 ಟೀಚಮಚ
6. ಟೊಮೊಟೊ- 2 (ಕತ್ತರಿಸಿಟ್ಟುಕೊಳ್ಳಿ)
7. ಅರಿಶಿಣ ಪುಡಿ- 1 ಟೀಚಮಚ
8. ಅಚ್ಚಖಾರದ ಪುಡಿ- 1/2 ಟೀಚಮಚ
9. ಧನಿಯ ಪುಡಿ- 2 ಟೀಚಮಚ
10. ಗರಂ ಮಸಾಲ ಪುಡಿ- 1/2 ಟೀಚಮಚ
11. ನಿಂಬೆ ರಸ- 2 ಟೀಚಮಚ
12. ಜೀರಿಗೆ- 1 ಟೀ ಚಮಚ
13. ಉಪ್ಪು- ರುಚಿಗೆ ತಕ್ಕಷ್ಟು
14. ಎಣ್ಣೆ- 1 ಟೀ ಚಮಚ
15. ನೀರು- 2 ಕಪ್
16. ಕೊತ್ತಂಬರಿಸೊಪ್ಪು- ಸ್ವಲ್ಪ (ಸಣ್ಣಗೆ ಹೆಚ್ಚಿಕೊಳ್ಳಿ)
ಮಾಡುವ ವಿಧಾನ
1. ಉದ್ದಿನ ಬೇಳೆಯನ್ನು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
2. ನಂತರ ನೀರನ್ನು ಸೋಸಿ ಕುಕ್ಕರಿನಲ್ಲಿ ಹಾಕಿ ನೀರು ಮತ್ತು ಉಪ್ಪಿನೊಂದಿಗೆ ಬೇಯಲು ಇಡಿ. 2 ಕೂಗಿಗೆ ಕುಕ್ಕರ್ ಇಳಿಸಿ.
3. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾಯಿಸಿಕೊಂಡು ಅದಕ್ಕೆ ದಾಲ್ಚಿನ್ನಿ, ಲವಂಗ, ಏಲಕ್ಕಿ, ಜೀರಿಗೆ ಹಾಕಿ ಸ್ವಲ್ಪ ಹುರಿದುಕೊಳ್ಳಿ.
4. ಅದಕ್ಕೆ ಒಣಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ 2 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ.
5. ನಂತರ ಹೆಚ್ಚಿದ ಟೊಮೊಟೊ, ಧನಿಯ ಪುಡಿ, ಅರಿಶಿಣ ಪುಡಿ, ಅಚ್ಚಖಾರದ ಪುಡಿ, ಗರಂ ಮಸಾಲ ಪುಡಿ, ಉಪ್ಪು ಹಾಕಿ 4-5 ನಿಮಿಷಗಳ ಕಾಲ ಬೇಯಿಸಿ.
6. ಈಗ ಅದಕ್ಕೆ ಉದ್ದಿನ ಬೇಳೆ ಮತ್ತು ನಿಂಬೆ ರಸ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿ 5 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಬಡಿಸಿ.

ದಾಲ್ ಕಬಿಲವನ್ನು ರೋಟಿಯೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.

English summary

Tasty Dal Kabila For Diabetics

Diabetes is a disease which restricts you from eating all your favourite foods. But that doesn't mean that you cannot have tasty food if you have diabetes. We, at Boldsky aim to give the best to your taste-buds and take care of your health as well.
Story first published: Thursday, November 28, 2013, 9:47 [IST]
X
Desktop Bottom Promotion