For Quick Alerts
ALLOW NOTIFICATIONS  
For Daily Alerts

ಬಾಯಿಯಲ್ಲಿ ನೀರೂರಿಸುವ ರುಚಿಕರವಾದ ಬೆಂಡೆಕಾಯಿ ಪಲ್ಯ

|

ಬೆಂಡೆಕಾಯಿ ಒಂದು ವೈವಿಧ್ಯಮಯ ತರಕಾರಿಯಾಗಿದೆ. ಇದನ್ನು ನೀವು ಯಾವುದೇ ತರಕಾರಿಯೊಂದಿಗೂ ಬೇಯಿಸಬಹುದು. ಇದು ತನ್ನೊಂದಿಗೆ ಬೆಂದ ತರಕಾರಿಗೂ ಒಂದು ವಿಶಿಷ್ಟವಾದ ರುಚಿಯನ್ನು ಒದಗಿಸುತ್ತದೆ. ಹಾಗಿದ್ದರೆ ಈ ಸರಳ ಖಾದ್ಯವನ್ನು ಬೆಂಡೆಕಾಯಿಯೊಂದಿಗೆ ತಯಾರಿಸುವ ಸೂತ್ರವನ್ನು ಈ ಲೇಖನದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಬೆಂಡೆ ಕಾಯಿಯ ಇದು ಖಾದ್ಯ ಮಾತ್ರವಲ್ಲ ಆರೋಗ್ಯಕಾರಿ ಕೂಡ ಹೌದು. ಕಡಲೆ ಹಿಟ್ಟಿನೊಂದಿಗೆ ಬೇಯಿಸಿ ಸಿದ್ಧಪಡಿಸಲಾಗುವ ಈ ಬೆಂಡೆಕಾಯಿ ಪಲ್ಯ ನಿಮ್ಮ ನಾಲಗೆಗೆ ರಸದೌತಣವನ್ನು ಉಣಬಡಿಸುವುದು ಖಂಡಿತ. ಬೇಸನ್ ಅಥವಾ ಕಡಲೆ ಹಿಟ್ಟನ್ನು ಮಸಾಲೆ ತಯಾರಿಸಲು ಬಳಸುತ್ತಾರೆ.

ಸ್ಟಫ್ಫಿಂಗ್‌ನಿಂದ ಆವೃತವಾದ ಈ ಬೆಂಡಿ ಮಸಾಲಾ ನಿಮ್ಮ ಬಾಯಿಯ ರುಚಿಯನ್ನು ಹೆಚ್ಚಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಿದ್ದರೆ ಈ ರೆಸಿಪಿಯನ್ನು ಪ್ರಯತ್ನಿಸ ಮಾಡಬೇಕೆಂಬ ಆಸೆ ನಿಮ್ಮಲ್ಲಿ ಜಾಸ್ತಿಯಾಗುತ್ತಿದೆಯೇ ಹಾಗಿದ್ದರೆ ಈ ವಿಧಾನವನ್ನು ತಿಳಿದುಕೊಳ್ಳಿ.

Tangy Bhindi With Besan Recipe

ನಾಲಿಗೆಯ ರುಚಿ ತಣಿಸುವ ಪಾಲಕ್ ರೆಸಿಪಿ!

ಪ್ರಮಾಣ: 4-5
ಸಿದ್ಧತಾ ಸಮಯ: 5 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 25 - 30 ನಿಮಿಷಗಳು

ಸಾಮಾಗ್ರಿಗಳು
1. ಬೆಂಡೆಕಾಯಿ - 500 ಗ್ರಾಮ್ಸ್
2.ಈರುಳ್ಳಿ - 1 (ತುಂಡರಿಸಿದ್ದು)
3.ಕಡಲೆ ಹಿಟ್ಟು - 2 ಚಮಚ
4. ಮೆಣಸಿನ ಹುಡಿ - 1 ಚಮಚ
5. ಅಮೆಚೂರ್ ಹುಡಿ - 1 ಚಮಚ
6. ಜೀರಿಗೆ ಹುಡಿ - 1/2 ಚಮಚ
7. ಕೊತ್ತಂಬರಿ ಹುಡಿ - 1/2 ಚಮಚ
8. ಹಸಿಮೆಣಸು - 2 (ಸೀಳಿದ್ದು)
9. ಉಪ್ಪು - ರುಚಿಗೆ ತಕ್ಕಷ್ಟು
10. ಎಣ್ಣೆ - 1 ಚಮಚ

ಆಲೂ ಕೋಫ್ತಾ ಸೈಡ್ ಡಿಶ್ ರೆಸಿಪಿ

ಮಾಡುವ ವಿಧಾನ
1. ಮೊದಲಿಗೆ ಬೆಂಡೆಕಾಯಿಯನ್ನು ತೊಳೆದುಕೊಳ್ಳಿ ಮತ್ತು ಒಣಗಿದ ಬಟ್ಟೆಯಲ್ಲಿ ಅದನ್ನು ಡ್ರೈ ಮಾಡಿಕೊಳ್ಳಿ. ಇದನ್ನು 10 ನಿಮಿಷಗಳ ಕಾಲ ಪಕ್ಕದಲ್ಲಿಡಿ.

2. ಒಣಗಿದ ಬೆಂಡೆಕಾಯಿಯನ್ನು ಎರಡು ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.

3. ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಮತ್ತು ಜೀರಿಗೆಯ ಒಗ್ಗರಣೆ ಮಾಡಿ.

4. ಈರುಳ್ಳಿ ಮತ್ತು ಬೆಂಡೆಕಾಯಿಯನ್ನು ಸೇರಿಸಿ ನಂತರ 4-5 ನಿಮಿಷಗಳ ಕಾಲ ಇದನ್ನು ಹುರಿಯಿರಿ.

5. ಇದೀಗ ಕಡಲೆ ಹಿಟ್ಟು, ಹಸಿಮೆಣಸು, ಮೆಣಸಿನ ಹುಡಿ, ಕೊತ್ತಂಬರಿ ಹುಡಿ, ಉಪ್ಪು ಮತ್ತು ಅಮೆಚೂರ್ ಹುಡಿಯನ್ನು ಸೇರಿಸಿ.

6. ಚೆನ್ನಾಗಿ ಬೇಯಿಸಿ. ಕಡಲೆ ಹಿಟ್ಟಿನ ಸುಗಂಧ ಬರುವವರೆಗೆ 3-4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

7. ನಂತರ ಗ್ಯಾಸ್ ಆಫ್ ಮಾಡಿ.

ಬೆಂಡಿ ಮತ್ತು ಕಡಲೆಹಿಟ್ಟು ಬೆರೆತ ಪಲ್ಯ ಸವಿಯಲು ಸಿದ್ಧವಾಗಿದೆ. ಬಿಸಿ ಅನ್ನ ಅಥವಾ ರೋಟಿಯೊಂದಿಗೆ ಸವಿಯಲು ನೀಡಿ.

English summary

Tangy Bhindi With Besan Recipe

Bhindi or ladies' finger is a versatile vegetable. It can be cooked with many different ingredients. It imbibes the flavours of the ingredients it is cooked with.
X
Desktop Bottom Promotion