For Quick Alerts
ALLOW NOTIFICATIONS  
For Daily Alerts

ಸರಳ ತಯಾರಿಕೆಯ ಹರಿಕಾರ ಆಲೂ-ಬೀನ್ಸ್ ಪಲ್ಯ

|

ಭಾರತದಲ್ಲಿ ಆಲೂ (ಆಲೂಗಡ್ಡೆ) ಮತ್ತು ಹಸಿರು ಬೀನ್ಸ್ ರೆಸಿಪಿಯು ತುಂಬಾ ಜನಪ್ರಿಯವಾಗಿದೆ. ಆಲೂ ಗ್ರೀನ್ ಬೀನ್ಸ್ ಪಲ್ಯ ಎಂಬ ಹೆಸರಿನಲ್ಲಿ ಇದು ಉತ್ತರ ಭಾರತದಲ್ಲಿ ಭಾರೀ ಜನಪ್ರಿಯವಾಗಿದೆ. ಇದೊಂದು ಆರೋಗ್ಯಕಾರಿ ಖಾದ್ಯವಾಗಿದ್ದು, ಇದನ್ನು 10-15 ನಿಮಿಷಗಳ ಅವಧಿಯಲ್ಲಿ ತಯಾರಿಸಬಹುದು.

ಈ ವಾರದ ನಡುವಿನ ಈ ದಿನದಲ್ಲಿ ರಾತ್ರಿಯ ಅಡುಗೆ ಮಾಡಲು ತುಂಬಾ ಶ್ರಮವನ್ನು ಪಡುವ ಅವಶ್ಯಕತೆಯಿಲ್ಲ. ನಾವು ನೀಡಿರುವ ಈ ಖಾರದಿಂದ ಕೂಡಿದ ಆಲೂ ಮತ್ತು ಹಸಿರು ಬೀನ್ಸ್ ತಯಾರಿಸಿ, ನಿಮ್ಮ ರುಚಿ ಗ್ರಂಥಿಗಳಿಗೆ ಹಬ್ಬದ ಸವಿಯನ್ನು ನೀಡಿ. ಆದರೆ ಇದಕ್ಕೆ ನೀವು ಮಸಾಲೆಗಳನ್ನು ಸರಿಯಾದ ಪ್ರಮಾಣದಲ್ಲಿ ಹಾಕಬೇಕಾದುದು ಅತ್ಯಗತ್ಯ.

Spicy Aloo And Green Beans Sabzi

ಆಲೂ ಮತ್ತು ಹಸಿರು ಬೀನ್ಸ್ ಪಲ್ಯವನ್ನು ಅನ್ನ ಮತ್ತು ರೋಟಿಯ ಜೊತೆಗೆ ಕೂಡ ಸೇವಿಸಬಹುದು. ಈ ಆಲೂ ಮತ್ತು ಹಸಿರು ಬೀನ್ಸ್ ರೆಸಿಪಿಯನ್ನು ತಾಜಾ ಆಗಿರುವ ಫ್ರೆಂಚ್ ಬೀನ್ಸ್ ಜೊತೆಗೆ ತಯಾರಿಸಲಾಗುತ್ತದೆ. ಚಳಿಗಾಲವು ತಾಜಾ ತರಕಾರಿಗಳಿಗೆ ಹೇಳಿ ಮಾಡಿಸಿದ ಕಾಲವಾಗಿರುತ್ತದೆ. ಆದ್ದರಿಂದ ತಾಜಾ ಆಗಿರುವ ಬೀನ್ಸ್‌ಗಳನ್ನು ಈ ಖಾದ್ಯ ತಯಾರಿಸಲು ಆರಿಸಿಕೊಳ್ಳುವುದನ್ನು ಮರೆಯಬೇಡಿ. ಬನ್ನಿ ಇನ್ನು ತಡಮಾಡದೆ ಈ ಪಲ್ಯವನ್ನು ತಯಾರಿಸುವ ಬಗೆಯನ್ನು ತಿಳಿದುಕೊಳ್ಳೋಣ. ರುಚಿ ರುಚಿಯಾದ ಹೆಸರುಕಾಳು ಮಸಾಲಾ ರೆಸಿಪಿ

ಇಬ್ಬರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ - 5 ನಿಮಿಷಗಳು
*ಅಡುಗೆಗೆ ತಗುಲುವ ಸಮಯ - 10 ನಿಮಿಷಗಳು

ನಿಮಗೆ ಅಗತ್ಯವಾದ ಪದಾರ್ಥಗಳು
*ಆಲೂಗಡ್ಡೆಗಳು - 2 (ಕತ್ತರಿಸಿದ ಮತ್ತು ಬೇಯಿಸಿದ)
*ಹಸಿರು ಬೀನ್ಸ್- 4 (ಕತ್ತರಿಸಿದ)
*ಹಸಿ ಮೆಣಸಿನಕಾಯಿಗಳು - 2
*ಜೀರಿಗೆ - ½ ಟೀ. ಚಮಚ
*ಖಾರದ ಪುಡಿ - ½ ಟೀ. ಚಮಚ
*ಅರಿಶಿಣ ಪುಡಿ - ¼ ಟೀ. ಚಮಚ
*ಗರಂ ಮಸಾಲ- ½ ಟೀ. ಚಮಚ
*ಕೊತ್ತೊಂಬರಿ ಪುಡಿ- ½ ಟೀ. ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ಎಣ್ಣೆ

ತಯಾರಿಸುವ ವಿಧಾನ
*ಒಂದು ಬಾಣಲೆಯನ್ನು ತೆಗೆದುಕೊಳ್ಳಿ, ಅದರಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ. ಇದಕ್ಕೆ ಜೀರಿಗೆಯನ್ನು ಮತ್ತು ಹಸಿ ಮೆಣಸಿನಕಾಯಿಗಳನ್ನು ಸೇರಿಸಿ. ಜೀರಿಗೆಯು ಚಿಟ ಪಟ ಎಂದು ಹಾರುವವರೆಗು ಕಾಯಿರಿ. ಹಸಿ ಮೆಣಸಿನ ಕಾಯಿ ಹುರಿಯಲ್ಪಟ್ಟಿರುವುದನ್ನು ಖಚಿತಪಡಿಸಿಕೊಳ್ಳಿ.
* ಈಗ, ಇದಕ್ಕೆ ಆಲೂಗಡ್ಡೆ ಮತ್ತು ಹಸಿರು ಬೀನ್ಸ್‌ಗಳನ್ನು ಹಾಕಿ. ಒಂದು ನಿಮಿಷ ಕಲೆಸಿಕೊಡಿ.
*ನಂತರ ಖಾರದಪುಡಿ, ಅರಿಶಿಣ ಪುಡಿ, ಗರಂ ಮಸಾಲ ಮತ್ತು ಕೊತ್ತೊಂಬರಿ ಪುಡಿಯನ್ನು ಬೆರೆಸಿ.
* ಈ ಮಿಶ್ರಣವನ್ನು ಚೆನ್ನಾಗಿ ಕಲೆಸಿ ಮತ್ತು ಬಾಣಲೆಯ ಮುಚ್ಚಳವನ್ನು ಇದರ ಮೇಲೆ ಮುಚ್ಚಿ ಹಾಗೂ ಉರಿಯನ್ನು ಮಧ್ಯಮ ಗಾತ್ರಕ್ಕೆ ತಂದು, 10 ನಿಮಿಷ ಬೇಯಿಸಿ.
*ಈ ಆಲೂ ಹಸಿರು ಬೀನ್ಸ್ ಪಲ್ಯ ವಾರದ ದಿನಗಳಲ್ಲಿ ನಿಮ್ಮ ಪಾಲಿಗೆ ಆಪದ್ಭಾಂಧವನಾಗುತ್ತದೆಯೆಂಬುದರಲ್ಲಿ ಸಂಶಯವೇ ಇಲ್ಲ. ಇದನ್ನು ಮನೆಯಲ್ಲಿ ಪ್ರಯತ್ನಿಸುವುದನ್ನು ಮರೆಯಬೇಡಿ.

ಪೋಷಕಾಂಶಗಳ ಪ್ರಮಾಣ
*ತಾಜಾ ಹಸಿರು ಬೀನ್ಸ್‌ನಲ್ಲಿ ಕ್ಯಾಲೋರಿಗಳು ಕಡಿಮೆ ಪ್ರಮಾಣದಲ್ಲಿರುತ್ತವೆ. ಹಾಗಾಗಿ ಇದು ನಿಮ್ಮ ಸಲಾಡ್‍ಗಳಲ್ಲಿ ತಪ್ಪದೆ ಇರಬೇಕಾದ ಪದಾರ್ಥಗಳಾಗಿವೆ.
*ಹಸಿರು ಬೀನ್ಸ್‌ಗಳಲ್ಲಿ ವಿಟಮಿನ್ ಎ ಮತ್ತು ಆಂಟಿ ಆಕ್ಸಿಡೆಂಟ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ವಯಸ್ಸಾದಂತೆ ಕಾಣುವುದನ್ನು ತಡೆಯಲು ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ ಮತ್ತು ಜೊತೆಗೆ ಹಲವಾರು ಕಾಯಿಲೆಗಳು ಬರದಂತೆ ತಡೆಯುತ್ತವೆ.
*ಹಸಿರು ಬೀನ್ಸ್‌ಗಳಲ್ಲಿ ನಾರಿನಂಶವು ಒಳ್ಳೆಯ ಪ್ರಮಾಣದಲ್ಲಿರುತ್ತದೆ. ಈ ತರಕಾರಿಯನ್ನು ಜೀರ್ಣಾಂಗ ಸಮಸ್ಯೆ ಇರುವವರು ಸೇವಿಸುವುದು ಒಳಿತು.
ಆಲೂಗಡ್ಡೆಗಳಲ್ಲಿ ಕಾರ್ಬೊಹೈಡ್ರೆಟುಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಆಲೂಗಡ್ಡೆಗಳು ರಕ್ತದಲ್ಲಿ ಸಕ್ಕರೆ ಪ್ರಮಾಣವು ಅಧಿಕಗೊಳ್ಳುವುದನ್ನು ನಿಯಂತ್ರಿಸುತ್ತವೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ.

#ಸಲಹೆಗಳು
*ಒಂದು ವೇಳೆ ನಿಮಗೆ ನಿಂಬೆ ಹಣ್ಣಿನ ಸ್ವಾದವು ಇಷ್ಟವಾದಲ್ಲಿ, ಈ ಆಲೂ ಹಸಿರು ಬೀನ್ಸ್ ಸಬ್ಜಿಗೆ 2-3 ಟೇ.ಸ್ಪೂ ನಿಂಬೆರಸವನ್ನು ಬೆರೆಸಬಹುದು.
*ಇದು ಈ ಖಾದ್ಯದ ರುಚಿಯನ್ನು ಇಮ್ಮಡಿಗೊಳಿಸುತ್ತದೆ. ನಿಮಗೆ ಅಗತ್ಯವಿದ್ದಲ್ಲಿ, ಇದಕ್ಕೆ ಕತ್ತರಿಸಿದ ಕ್ಯಾರಟ್‍ಗಳನ್ನು ಸೇರಿಸಿ, ಈ ಖಾದ್ಯವನ್ನು ತಯಾರಿಸಬಹುದು. ಇದು ಆಲು ಮತ್ತು ಹಸಿರು ಬೀನ್ಸ್ ಸಬ್ಜಿಯ ಪೋಷಕಾಂಶಗಳ ಪ್ರಮಾಣವನ್ನು ಹೆಚ್ಚಿಸುತ್ತದೆ.

English summary

Spicy Aloo And Green Beans Sabzi

Aloo and green beans recipe is popular in India. Aloo and green beans sabzi is a healthy dish and can be made in 10 to 15 minutes. This mid-weekday, do not work hard in your kitchen to make sabzi for dinner. Read on to know how to make spicy aloo and green beans sabzi.
X
Desktop Bottom Promotion