For Quick Alerts
ALLOW NOTIFICATIONS  
For Daily Alerts

ಶ್ರಾವಣ ವಿಶೇಷ ಆಲೂಗಡ್ಡೆ ಕೊತ್ತಂಬರಿ ಪಲ್ಯ

|

ಆಲೂಗಡ್ಡೆ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಈ ತರಕಾರಿಯನ್ನು ತಿನ್ನಲು ಯಾರಿಗೂ ಬೇಜಾರಾಗುವುದಿಲ್ಲ. ಹಿಂದೂ ಮಾಸದ ಶ್ರಾವಣ ಈಗಾಗಲೇ ಪ್ರಾರಂಭವಾಗಿದೆ. ಉತ್ತರ ಮತ್ತು ದಕ್ಷಿಣದ ಜನರು ಈ ಸಮಯದಲ್ಲಿ ಸಸ್ಯಾಹಾರವನ್ನು ಮಾತ್ರ ಸೇವಿಸಿ ವೃತಾಚರಣೆಯನ್ನು ಮಾಡುತ್ತಾರೆ. ನಿಮ್ಮ ಮನೆಯವರ ಆಸಕ್ತಿಗೆ ಅನುಗುಣವಾಗಿ ನೀವು ತಿಂಡಿಯನ್ನು ತಯಾರಿಸಬೇಕಾಗುತ್ತದೆ.

ನಿಮಗೆ ಆಲೂವಿನಿಂದ ಅಥವಾ ಆಲೂಗಡ್ಡೆಯಿಂದ ತಯಾರಿಸಿದ ಖಾದ್ಯಗಳು ಈ ಸಮಯದಲ್ಲಿ ಸೂಕ್ತವಾಗಿರುತ್ತವೆ. ಮನೆಯ ಎಲ್ಲಾ ಸದಸ್ಯರು ಇಷ್ಟಪಡುವ ಈ ತರಕಾರಿ ಯಾರಿಗೂ ಬೇಸರವನ್ನು ಉಂಟುಮಾಡುವುದಿಲ್ಲ. ಖಾದ್ಯದ ರುಚಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಇಂದಿನ ಲೇಖನದಲ್ಲಿ ವಿಶೇಷವಾಗಿರುವ ಆಲೂಗಡ್ಡೆ ಖಾದ್ಯವನ್ನು ನಾವು ನಿಮಗಾಗಿ ನೀಡುತ್ತಿದ್ದು ವೃತಾಚರಣೆಗೆ ಅತ್ಯಂತ ಸೂಕ್ತವಾಗಿದೆ.

 Shravan Spcl: Chatpati Dhaniya Aloo Ki Sabji

ಆಲೂಗಡ್ಡೆಯೊಂದಿಗೆ ಕೊತ್ತಂಬರಿಯನ್ನು ಸೇರಿಸಿ ತಯಾರಿಸಲಾಗುವ ಈ ಪಲ್ಯ ಚಪಾತಿಗೆ ಹೇಳಿ ಮಾಡಿಸಿದ ಖಾದ್ಯವಾಗಿದೆ ಇದು. ಹಾಗಿದ್ದರೆ ಈ ಪಲ್ಯವನ್ನು ತಯಾರಿಸುವ ವಿಧಾನವನ್ನು ನಾವಿಲ್ಲಿ ನೀಡುತ್ತಿದ್ದು ಇದನ್ನು ತಯಾರಿಸಿ

ಮಸಾಲೆ ದೋಸೆಗಾಗಿ ರುಚಿ ರುಚಿಯಾದ ಬೇಯಿಸಿದ ಆಲೂಗಡ್ಡೆ ಪಲ್ಯ

ಪ್ರಮಾಣ: 2
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು
*ಆಲೂಗಡ್ಡೆ - 4 (ಬೇಯಿಸಿದ್ದು ಮತ್ತು ದಪ್ಪಗೆ ಹೆಚ್ಚಿರುವಂಥದ್ದು)
*ಈರುಳ್ಳಿ - 1 ಕತ್ತರಿಸಿದ್ದು
*ಕೊತ್ತಂಬರಿ ಬೀಜಗಳು ಜಜ್ಜಿದ್ದು 1 ಚಮಚ
*ಕೊತ್ತಂಬರಿ ಹುಡಿ - 2 ಚಮಚ
*ಅಮೆಚೂರ್ (ಡ್ರೈ ಮ್ಯಾಂಗೋ ಪೌಡರ್)
*ಉಪ್ಪು ರುಚಿಗೆ ತಕ್ಕಷ್ಟು
*ಅರಶಿನ ಹುಡಿ - 1 ಚಮಚ
*ಮೆಣಸಿನ ಹುಡಿ - 1 ಚಮಚ
*ಎಣ್ಣೆ - 2 ಚಮಚ
*ಕೊತ್ತಂಬರಿ ಸೊಪ್ಪು - 2 ಚಮಚ (ಅಲಂಕಾರಕ್ಕೆ)

ಮಾಡುವ ವಿಧಾನ
1. ಮೊದಲಿಗೆ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ ಮತ್ತು ಬಿಸಿಯಾಗುತ್ತಿದ್ದಂತೆ ಹುಡಿ ಮಾಡಿದ ಕೊತ್ತಂಬರಿಯನ್ನು ಇದಕ್ಕೆ ಹಾಕಿ.

2. ಈಗ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಮತ್ತು ಅದು ಚಿನ್ನದ ಬಣ್ಣಕ್ಕೆ ಬರುವವರೆಗೆ ಹುರಿದುಕೊಳ್ಳಿ.

3. ಆಲೂಗಡ್ಡೆ ತುಂಡುಗಳನ್ನು ಇದೀಗ ಸೇರಿಸಿ 3-4 ನಿಮಿಷಗಳ ಕಾಲ ಅದನ್ನು ಹುರಿಯಿರಿ.

4. ಅರಶಿನ ಹುಡಿ, ಮೆಣಸಿನ ಹುಡಿ, ಅಮೆಚೂರ್ ಹುಡಿ, ಕೊತ್ತಂಬರಿ ಹುಡಿ ಮತ್ತು ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ

5. ಇನ್ನೊಂದು 3-4 ನಿಮಿಷಗಳ ಕಾಲ ಇದನ್ನು ಬೇಯಿಸುತ್ತಿರಿ.

6. ಇದು ಪೂರ್ತಿ ಆದ ನಂತರ ಉರಿಯನ್ನು ಕಡಿಮೆ ಮಾಡಿಕೊಳ್ಳಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಪಲ್ಯವನ್ನು ಅಲಂಕರಿಸಿ.

ಚಪಾತಿಗೆ ಸವಿಯಲು ಯೋಗ್ಯವಾಗಿರುವ ಕೊತ್ತಂಬರಿ ಮಿಶ್ರಿತ ಆಲೂಗಡ್ಡೆ ಪಲ್ಯ ಸವಿಯಲು ಸಿದ್ಧವಾಗಿದೆ. ಶ್ರಾವಣ ಮಾಸದ ವೃತಾಚರಣೆಯಲ್ಲಿ ಚಪಾತಿ ಅಥವಾ ರೋಟಿಯೊಂದಿಗೆ ಸವಿಯಲು ಈ ಪಲ್ಯ ಉತ್ತಮ ಕಾಂಬಿನೇಶನ್ ಆಗಿದೆ.

English summary

Shravan Spcl: Chatpati Dhaniya Aloo Ki Sabji

Aloo or potato is one vegetable of which we can never get bored. Since the Hindu month of Shravan has started, most people in Northern India have started observing vegetarianism for the entire month. Abstaining from non vegetarian food leads to shortage of choices.
Story first published: Thursday, July 17, 2014, 16:55 [IST]
X
Desktop Bottom Promotion