For Quick Alerts
ALLOW NOTIFICATIONS  
For Daily Alerts

ನಾಲಿಗೆಯ ರುಚಿ ತಣಿಸುವ ಪನ್ನೀರ್ ಗ್ರೇವಿ ರೆಸಿಪಿ

|

ಪನ್ನೀರ್ ಬಳಸಿ ನಾವು ಹಲವು ಬಗೆಯ ರೆಸಿಪಿಗಳನ್ನು ಮಾಡಬಹುದು. ಅದರಲ್ಲೂ ಪನ್ನೀರ್ ಗ್ರೇವಿ ನಿಮ್ಮ ಮಧ್ಯಾಹ್ನದ ಅಡುಗೆಯ ರುಚಿಯನ್ನು ಇನ್ನಷ್ಟು ಸ್ವಾದಿಷ್ಟಕರವಾಗಿರುತ್ತದೆ. ಈ ರುಚಿಯಾದ ಅಡುಗೆಗೆ ಈ ಕೆಳಗಿನ ಸಾಮಾಗ್ರಿಗಳಿದ್ದರೆ ಸುಲಭವಾಗಿ ತಯಾರಿಸಬಹುದಾಗಿದ್ದು, ಇದನ್ನು ಮಾಡುವ ರೆಸಿಪಿ ನೋಡಿ ಇಲ್ಲಿದೆ:

ಪನ್ನೀರ್ ಟೊಮೆಟೊ ಗ್ರೇವಿ -ಸೈಡ್ ಡಿಶ್ ರೆಸಿಪಿ

Mouthwatering Paneer gravy Recipe

ಬೇಕಾಗುವ ಸಾಮಾಗ್ರಿಗಳು:
* ಪನ್ನೀರ್ 250 ಗ್ರಾಂ
* ಈರುಳ್ಳಿ 2
* 1 ಇಂಚಿನಷ್ಟು ದೊಡ್ದದಿರುವ ಶುಂಠಿ
* 4-5 ಬೆಳ್ಳುಳ್ಳಿ ಎಸಳು
* ಅರಿಶಿಣ ಪುಡಿ 1 ಚಮಚ
* ಕೆಂಪು ಮೆಣಸಿನ ಪುಡಿ 1 ಚಮಚ
* ಕೊತ್ತಂಬರಿ ಪುಡಿ 1 ಚಮಚ
* ಒಣ ಮೆಣಸು 2
* ಟೊಮೆಟೊ ಪೇಸ್ಟ್ ಅರ್ಧ ಕಪ್
* ಜೀರಿಗೆ 1 ಚಮಚ
* ಹಾಲು 1 ಚಮಚ
* ಗರಂ ಮಸಾಲ 1 ಚಮಚ
* ಚಕ್ಕೆ 1
* ಸಕ್ಕರೆ ಅರ್ಧ ಚಮಚ
* ಪಲಾವ್ ಎಲೆ 1
* ರುಚಿಗೆ ತಕ್ಕ ಉಪ್ಪು
* ಎಣ್ಣೆ ಸ್ವಲ್ಪ

ಆಮ್ಲೆಟ್ ಗ್ರೇವಿ ರೆಸಿಪಿ

ತಯಾರಿಸುವ ವಿಧಾನ:
1. ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಮತ್ತು 2 ಒಣ ಮೆಣಸು ಹಾಕಿ ನುಣ್ಣನೆ ರುಬ್ಬಬೇಕು. ಹೀಗೆ ರುಬ್ಬುವಾಗ ಸ್ವಲ್ಪ ನೀರು ಹಾಕಿದರೆ ಸಾಕು.
2. ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಬಿಸಿಮಾಡಿ. ನಂತರ ಅದರಲ್ಲಿ ಪನ್ನೀರ್ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
3. ತದನಂತರ ಒಂದು ಬಟ್ಟಲಿನಲ್ಲಿ ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಸ್ವಲ್ಪ ನೀರು ಹಾಕಿ ಪೇಸ್ಟ್ ರೀತಿಯಲ್ಲಿ ಮಾಡಿ.
4. ಇನ್ನು ಸಾರಿನ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಮಾಢಬೇಕು. ಅದರಲ್ಲಿ ಪಲಾವ್ ಎಲೆ, ಚಕ್ಕೆ ಹಾಕಿ ಅದರಲ್ಲಿ ನುಣ್ಣನೆ ರುಬ್ಬಿದ ಮಿಶ್ರಣ ಹಾಗೂ ಟೊಮೆಟೊ ಪೇಸ್ಟ್, ಸಕ್ಕರೆ, ಹಾಲು ಹಾಕಿ 3-4 ನಿಮಿಷ ಸೌಟ್ ನಿಂದ ಆಡಿಸುತ್ತಾ ಹುರಿಯಬೇಕು.
ನಂತರ ಸ್ವಲ್ಪ ನೀರು ಸೇರಿಸಿ ರುಚಿಗೆ ತಕ್ಕ ಉಪ್ಪು ಹಾಕಿ ಅದರಲ್ಲಿ ಫ್ರೈ ಮಾಡಿದ ಪನ್ನೀರ್ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿದರೆ ಪನ್ನೀರ್ ಗ್ರೇವಿ ರೆಡಿ. ಇದನ್ನು ಅನ್ನ, ರೊಟ್ಟಿ, ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

English summary

Mouthwatering Paneer gravy Recipe

Paneer gravy and masalas are very popular vegetarian Indian main course dishes. If you love paneer gravy then here is a yummy recipe have a look 
X
Desktop Bottom Promotion