For Quick Alerts
ALLOW NOTIFICATIONS  
For Daily Alerts

ಗರಿಗರಿಯಾದ ಬೆಂಡೆಕಾಯಿ ರೆಸಿಪಿ

By Super
|

ಹೆಚ್ಚಿನ ಜನರು ತಮ್ಮ ಮಧ್ಯಾಹ್ನದ ಊಟದ ಜೊತೆ ಮೆತ್ತಗಿರುವ ಬೆಂಡೆಕಾಯಿ ತಿನ್ನಲು ಇಷ್ಟಪಡುವುದಿಲ್ಲ. ಆದರೆ ನೀವು ರುಚಿಕರವಾಗಿರುವ ಹಾಗೂ ಸ್ವಾದಿಷ್ಟಭರಿತವಾಗಿರುವ ಬೆಂಡೆಕಾಯಿ ರೆಸಿಪಿಯನ್ನು ಆಯ್ದುಕೊಂಡರೆ, ಖಂಡಿತವಾಗಿಯೂ ನಿಮ್ಮ ಊಟದ ಸ್ವಾದ್ಯವು ಇನ್ನಷ್ಟು ರುಚಿಕರವಾಗಿರುತ್ತದೆ.

ನೀವು ಇಂತಹ ತರಕಾರಿಯಿಂದ ಗರಿಗರಿಯಾದ ಹಾಗೂ ರುಚಿಕರವಾದ ಖಾದ್ಯವನ್ನು ಮನೆಯಲ್ಲೇ ತಯಾರಿಸಬಹುದು. ಬೆಂಡೆಕಾಯಿಂದ ಮಾಡಲಾಗಿರುವ ಇಂತಹ ಗರಿಗರಿಯಾದ ರೆಸಿಪಿಯು ಉತ್ತರ ಭಾರತದಲ್ಲಿ ಜನಪ್ರಿಯವಾಗಿದೆ. ಭಾರತೀಯ ಶೈಲಿಯಲ್ಲಿ ಮಾಡಲಾಗುವ ಇಂತಹ ಖಾರ ಮಿಶ್ರಿತ ಗರಿಗರಿಯಾದ ರೆಸಿಪಿಯು ನಿಮ್ಮ ಖಾದ್ಯವನ್ನು ಇನ್ನಷ್ಟು ಸ್ವಾದಿಷ್ಟಕರವನ್ನಾಗಿಸುತ್ತದೆ.

Kurkuri Bhindi Recipe

ತಯಾರಿಗೆ ಬೇಕಾಗುವ ಸಮಯ: 15 ನಿಮಿಷಗಳು
ಕುಕ್ಕಿಂಗ್ ಸಮಯ: 20 ನಿಮಿಷಗಳು

1) ಬೆಂಡೆಕಾಯಿ - 250 ಗ್ರಾಮ್

2) ಉಪ್ಪು - ರುಚಿಗೆ ತಕ್ಕಷ್ಟು

3) ಕೆಂಪು ಮೆಣಸಿನ ಪೌಡರ್ - 1 ಟೀ ಸ್ಪೂನ್

4) ಅರಶಿನ ಪೌಡರ್ - 1/2 ಟೀ ಸ್ಪೂನ್

5) ಗರಮ್ ಮಸಾಲ ಪೌಡರ್- 1/2 ಟೀ ಸ್ಪೂನ್

6) ಜೀರಿಗೆ ಪುಡಿ - 1/2 ಟೀ ಸ್ಪೂನ್

7) ಚಾಟ್ ಮಸಾಲ ಪೌಡರ್ - 1 ಟೀ ಸ್ಪೂನ್

8) ಮುಸುಕಿನ ಜೋಳ ಹಿಟ್ಟು - 2 ಟೀ ಸ್ಪೂನ್

9 ) ಹುರಿಯುವುದಕ್ಕೆ ಎಣ್ಣೆ - ಸ್ವಲ್ಪ

10 ) ನಿಂಬೆ ರಸ - 1 ಟೀ ಸ್ಪೂನ್

ಮಾಡುವ ವಿಧಾನ:

1 ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆಯಿರಿ

2 . ಅದನ್ನು ಸಮತಲದಲ್ಲಿ 4 ತುಂಡುಗಳಾಗಿ ಕತ್ತರಿಸಿ.

3. ಮತ್ತೊಂದು ಪಾತ್ರೆಯಲ್ಲಿ ಕತ್ತರಿಸಲಾಗಿರುವ ಬೆಂಡೆಕಾಯಿ, ಉಪ್ಪು, ಕೆಂಪು ಮೆಣಸಿನ ಪೌಡರ್, ಅರಶಿನ ಪೌಡರ್, ಗರಮ್ ಮಸಾಲ ಪೌಡರ್, ಜೀರಿಗೆ ಪುಡಿ, ಚಾಟ್ ಮಸಾಲ ಪೌಡರ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

4. 10-12 ನಿಮಿಷಗಳವರೆಗೆ ಹಾಗೆ ಬಿಟ್ಟುಬಿಡಿ

5. ಬೆಂಡೆಕಾಯಿ ನೀರು ಬಿಡುವುದನ್ನು ನಿಮ್ಮ ಗಮನಕ್ಕೆ ಬರಬಹುದು

6. ತದನಂತರ ಮುಸುಕಿನ ಜೋಳ ಹಿಟ್ಟನ್ನು ಹಾಕಿ ಮೆಲ್ಲನೆ ಮಿಕ್ಸ್ ಮಾಡಿಕೊಳ್ಳಿ

7. ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ

8. ಕತ್ತರಿಸಲಾಗಿರುವ ಬೆಂಡೆಯನ್ನು ಗರಿಗರಿಯಾಗುವ ತನಕ ಹುರಿಯಿರಿ

9. ಗರಿಗರಿಯಾಗಿ ಹುರಿದ ನಂತರ, ಅದನ್ನು ಇನ್ನೊಂದು ಪ್ಲೇಟ್‌ಗೆ ಹಾಕಿಕೊಳ್ಳಿ

10. ತದನಂತರ ನಿಂಬೆ ರಸವನ್ನು ಅದರ ಮೇಲೆ ಸಿಂಪಡಿಸಿ

11. ಕೂಡಲೇ ಬಡಿಸಿಕೊಳ್ಳಿ

English summary

Kurkuri Bhindi Recipe

Most people do not like to eat okra or bhindi because it is squishy. However if you pick the right bhindi recipe, you can have this vegetable in a crispy way.
Story first published: Saturday, January 4, 2014, 17:59 [IST]
X
Desktop Bottom Promotion