For Quick Alerts
ALLOW NOTIFICATIONS  
For Daily Alerts

ರಾಖಿ ಹಬ್ಬದ ವಿಶೇಷ: ರುಚಿಕರವಾದ ಗೋಡಂಬಿ ಅಣಬೆ ಮಸಾಲೆ

|

ಅಣ್ಣ ತಂಗಿಯರ ಬಾಂಧವ್ಯವನ್ನು ಸಾರುವ ಪವಿತ್ರ ಹಬ್ಬವಾಗಿದೆ ರಕ್ಷಾಬಂಧನ. ಸಹೋದರಿಯು ಸಹೋದರನಿಗೆ ಶ್ರೀರಕ್ಷೆಯನ್ನು ಕಟ್ಟಿ ಅಣ್ಣನ ಆಶಿರ್ವಾದವನ್ನು ಪಡೆದು ಈರ್ವರೂ ಮತ್ತೊಬ್ಬರ ಸುಖಕ್ಕಾಗಿ ದೇವರನ್ನು ಬೇಡಿಕೊಳ್ಳುವ ಪ್ರೀತಿಯ ಸಹೋದರತ್ವದ ಹಬ್ಬವಾಗಿದೆ.

ಭಾರತದ ಉತ್ತರದ ಕಡೆಗಳಲ್ಲಿ ತುಸು ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸಲಾಗುವ ಈ ಹಬ್ಬ ದಕ್ಷಿಣದ ಕಡೆಯಲ್ಲೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಬ್ಬದ ಮೆರುಗನ್ನು ಹೆಚ್ಚಿಸಲು ಹೊಸ ಉಡುಗೆ ಹಬ್ಬದ ವಾತಾವರಣಕ್ಕೆ ಹೇಗೆ ಮುಖ್ಯವೋ ಅದೇ ರೀತಿ ರುಚಿಯಾದ ಸಿಹಿ ತಿಂಡಿ ಕೂಡ ಅತ್ಯವಶ್ಯಕವಾಗಿದೆ. ಹಬ್ಬವಿದೆ ಎಂದಲ್ಲಿ ಸಿಹಿ ಇರಲೇಬೇಕು, ಮತ್ತು ರುಚಿಕರವಾದ ಖಾದ್ಯ ಇರಲೇಬೇಕು.

Kaju Mushroom Masala For Rakshabandhan

ಖಾದ್ಯಗಳು ರುಚಿಯಾಗಿದ್ದರೆ ಹಬ್ಬಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಬಂದೇ ಬರುತ್ತದೆ. ಇಂದಿನ ಲೇಖನದಲ್ಲಿ ಕೂಡ ನಾವು ಸರಳವಾದ ಅಣಬೆ ಗೋಡಂಬಿ ರೆಸಿಪಿಯನ್ನು ನಿಮಗೆ ನೀಡಿದ್ದು ಪಾಕ ವಿಧಾನವನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ. ಇದನ್ನು ತಯಾರಿಸಲು ನಿಮಗೆ ಹೆಚ್ಚಿನ ಸಮಯವೇನೂ ಬೇಕಾಗಿಲ್ಲ. ಕೆಲವೇ ಕೆಲವು ನಿಮಿಷಗಳಲ್ಲಿ ಈ ಸ್ವಾದಿಷ್ಟ ಖಾದ್ಯವನ್ನು ರಚಿಸಬಹುದು.

ರಕ್ಷಾಬಂಧನದ ಪವಿತ್ರ ದಿನದಂದು ತಯಾರಿಸುವ ಖಾದ್ಯಗಳು ಬಾಯಿಗೆ ರುಚಿಯನ್ನು ನೀಡುವುದರೊಂದಿಗೆ ನಿಮ್ಮ ಸಹೋದರ ವಾತ್ಸಲ್ಯದ ಬಾಂಧವ್ಯವನ್ನು ಇನ್ನು ಗಟ್ಟಿಮಾಡುತ್ತದೆ. ಹಾಗಿದ್ದರೆ ಇನ್ನೇಕೆ ತಡ, ಈ ಸ್ವಾದಿಷ್ಟ ಭಕ್ಷ್ಯದ ತಯಾರಿ ವಿಧಾನವನ್ನು ತಿಳಿದುಕೊಂಡು ಅದನ್ನು ಮಾಡಲು ಸಿದ್ಧರಾಗಿ.

ರಾಖಿ ಹಬ್ಬದ ಸ್ಪೆಷಲ್-ಕೇಸರಿ ಸಂದೇಶ್ ಸ್ವೀಟ್

ಪ್ರಮಾಣ: 3
*ಸಿದ್ಧತಾ ಸಮಯ: 15 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು
*ಅಣಬೆ - 1 ಕಪ್
*ಈರುಳ್ಳಿ ಪೇಸ್ಟ್ - 2 ಚಮಚ
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
*ಮೆಣಸಿನ ಪುಡಿ - 1 ಚಮಚ
*ಅರಶಿನ ಪುಡಿ - 1 ಚಮಚ
*ಮೊಸರು - 1/2 ಕಪ್
*ಗೋಡಂಬಿ ಪೇಸ್ಟ್ - 1/2 ಕಪ್
*ಜೀರಿಗೆ ಪುಡಿ - 1 ಚಮಚ
*ಗರಮ್ ಮಸಾಲಾ - 1 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಜೀರಿಗೆ ಬೀಜ - 1 ಚಮಚ
*ದಾಲ್ಚಿನ್ನಿ ಕಡ್ಡಿ - 1
*ಏಲಕ್ಕಿ - ಸ್ವಲ್ಪ

ಮಾಡುವ ವಿಧಾನ
1. ಮೊದಲಿಗೆ ಮಶ್ರೂಮ್ (ಅಣಬೆಯನ್ನು) ಚೆನ್ನಾಗಿ ಬಿಸಿ ನೀರಿನಲ್ಲಿ ತೊಳೆದುಕೊಳ್ಳಿ. ಕೊಳೆಯನ್ನು ಪೂರ್ಣವಾಗಿ ತೊಳೆದುಕೊಳ್ಳಿ.
2. ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಂಡು, ಜೀರಿಗೆ, ದಾಲ್ಚಿನ್ನಿ ಕಡ್ಡಿ, ಏಲಕ್ಕಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
3. ಇದಕ್ಕೆ ಈರುಳ್ಳಿ ಪೇಸ್ಟ್ ಅನ್ನು ಸೇರಿಸಿ ನಂತರ ಬೆಳ್ಳುಳ್ಳಿ ಪೇಸ್ಟ್ ಹಾಕಿ 2-3 ನಿಮಿಷಗಳ ಕಾಲ ಬೇಯಿಸಿ.
4. ನಂತರ ಅರಶಿನ, ಜೀರಿಗೆ ಪುಡಿ, ಮೆಣಸಿನ ಪುಡಿಯನ್ನು ಹಾಕಿ ಮತ್ತು ಗೋಡಂಬಿ ಪೇಸ್ಟ್ ಸೇರಿಸಿ ಇನ್ನೊಂದು 3-4 ನಿಮಿಷಗಳ ಕಾಲ ಬೇಯಿಸಿ.
5. ಇನ್ನೊಂದು ಪಾತ್ರೆಯಲ್ಲಿ ಚೆನ್ನಾಗಿ ಮೊಸರನ್ನು ಮಿಶ್ರ ಮಾಡಿಕೊಳ್ಳಿ ಹಾಗೂ ಇದನ್ನು ಪಾತ್ರೆಗೆ ಹಾಕಿ ಮತ್ತು ಕೂಡಲೇ ಕರಗಿಸಿಕೊಳ್ಳಿ.
6. ಇನ್ನು ಅಣಬೆಯನ್ನು ಸೇರಿಸಿ ಮತ್ತು 6-8 ನಿಮಿಷಗಳ ಕಾಲ ಮಂದ ಉರಿಯಲ್ಲಿ ಬೇಯಿಸಿ.
7. ಈಗ ಮುಚ್ಚಳವನ್ನು ತೆಗೆದು ನೀರನ್ನು ಹಾಕಿ ಇನ್ನಷ್ಟು ಹೊತ್ತು ಮಂದ ಉರಿಯಲ್ಲಿ ಗ್ರೇವಿ ಬೇಯಲಿ.
8. ಇದಕ್ಕೆ ಗರಮ್ ಮಸಾಲಾ ಪುಡಿಯನ್ನು ಹಾಕಿ 2 ನಿಮಿಷಗಳ ತರುವಾಯ ಗ್ಯಾಸ್ ಆಫ್ ಮಾಡಿ.
ಗೋಡಂಬಿ ಅಣಬೆ ಮಸಾಲೆ ಸವಿಯಲು ಸಿದ್ಧವಾಗಿದೆ. ಅನ್ನ ಅಥವಾ ಪರೋಟಾದೊಂದಿಗೆ ಇದನ್ನು ಸೇವಿಸಿ.

English summary

Kaju Mushroom Masala For Rakshabandhan

Rakshabandhan is just round the corner and we are sure you are gearing up for the celebrations. Kaju mushroom masala is a simple vegetarian recipe which can be prepared with a little effort.So, you can try out this special kaju mushroom masala for Raksha
X
Desktop Bottom Promotion