For Quick Alerts
ALLOW NOTIFICATIONS  
For Daily Alerts

ಜೀರ ಪನ್ನೀರ್ ಫ್ರೈ ರೆಸಿಪಿ

|

ರಾತ್ರಿ ಊಟಕ್ಕೆ ನೀವು ಮಾಡಬಹುದಾದ ಸರಳವಾದ ಮತ್ತು ರುಚಿಕರವಾದ ರೆಸಿಪಿಯಿದು. ರಾತ್ರಿಯ ಊಟಕ್ಕೆ ಮೃದುವಾದ ಪನ್ನೀರ್ ಅನ್ನು ನಿಮ್ಮ ಕುಟುಂಬದವರಿಗೆ ಬಡಿಸಿ ಅವರನ್ನು ಖುಷಿ ಪಡಿಸಿ.

ಈ ಜೀರಾ ಪನ್ನೀರ್ ಫ್ರೈಯನ್ನು ಬಟರ್ ಕುಲ್ಚಾ ಅಥವ ಬಟಾಣಿ ಪಲಾವ್ ಜೊತೆ ತಿನ್ನಲು ರುಚಿಯಾಗಿರುತ್ತದೆ.

Jeera Paneer Fry Recipe

ಬೇಕಾಗುವ ಸಾಮಗ್ರಿಗಳು
1. ಪನ್ನೀರ್- 250 ಗ್ರಾಂ
2. ಜೀರಿಗೆ- 1 ಟೀಚಮಚ
3. ಕೆಂಪು ಮೆಣಸಿನಕಾಯಿ- 4
4. ಉದ್ದಿನ ಬೇಳೆ- 1 ಟೀಚಮಚ
5. ಅಚ್ಚ ಖಾರದಪುಡಿ- 1 ಟೀಚಮಚ
6. ಕರಿಬೇವು- ಸ್ವಲ್ಪ
7. ಈರುಳ್ಳಿ- 1 (ಕತ್ತರಿಸಿಕೊಳ್ಳಿ)
8. ಎಣ್ಣೆ- 1 ಟೀಚಮಚ
9. ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ
1. ಕುಕ್ಕರಿನಲ್ಲಿ ಎಣ್ಣೆ ಹಾಕಿ ಕಾಯಿಸಿಕೊಳ್ಳಿ.
2. ಇದಕ್ಕೆ ಜೀರಿಗೆ ಹಾಕಿ.
3. ನಂತರ ಉದ್ದಿನ ಬೇಳೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ.
4. ನಂತರ ಈರುಳ್ಳಿಯನ್ನು ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
5. ಇದಕ್ಕೆ ಖಾರದಪುಡಿಯನ್ನು ಹಾಕಿ 3 ನಿಮಿಷಗಳವರೆಗೆ ಚೆನ್ನಾಗಿ ಕಲಸಿ.
6. ನಂತರ ಪನ್ನೀರನ್ನು ಹಾಕಿ ನಿಧಾನವಾಗಿ ಹುರಿಯಿರಿ.
7. ನಂತರ ನೀರು ಮತ್ತು ಉಪ್ಪನ್ನು ಇದಕ್ಕೆ ಹಾಕಿ ಕುಕ್ಕರಿನ ಮುಚ್ಚಳ ಮುಚ್ಚಿ 5 ನಿಮಿಷಗಳವರೆಗೆ ಬೇಯಿಸಿ.
8. ನೀರು ಪೂರ್ತಿಯಾಗಿ ಆವಿಯಾದ ನಂತರ ಒಲೆಯನ್ನು ಆರಿಸಿ.

ಬಟರ್ ಕುಲ್ಚಾ ಅಥವ ಬಟಾಣಿ ಪಲಾವಿನೊಂದಿಗೆ ಜೀರಾ ಪನ್ನೀರನ್ನು ಸವಿಯಿರಿ.

Read more about: panner ಪನ್ನೀರ್
English summary

Jeera Paneer Fry Recipe

eera Paneer Fry is one of the most easiest and fastest recipe you can prepare for dinner. Boldsky, has shared with you one of the best recipes you can try out this evening for dinner to enthrall your family with the softness of paneer.
Story first published: Monday, December 9, 2013, 9:51 [IST]
X
Desktop Bottom Promotion