For Quick Alerts
ALLOW NOTIFICATIONS  
For Daily Alerts

ಆಲೂಗಡ್ಡೆ ಮೆಂತ್ಯೆ ಪಲ್ಯ

By Neha Mathur
|

ಚಳಿಗಾಳದಲ್ಲಿ ಹಲವು ರೀತಿಯ ಹಸಿರು ತರಕಾರಿಗಳು ಸಿಗುತ್ತವೆ. ಆದ್ದರಿಂದ ಸಸ್ಯಾಹಾರದ ಹಲವು ಅಡುಗೆಗಳನ್ನು ರುಚಿಕರವಾಗಿ ತಯಾರಿಸಬಹುದು.

ಬೇಬಿ ಪೊಟೆಟೊ ಮತ್ತು ಮೆಂತ್ಯೆ ಸೊಪ್ಪನ್ನು ಬಳಸಿ ಮಾಡಬಹುದಾದ ಬಹಳ ಸುಲಭವಾದ ಖಾದ್ಯ ಆಲೂಗಡ್ಡೆ ಮೆಂತ್ಯೆ ಪಲ್ಯ. ಒಂದು ವೇಳೆ ಸಣ್ಣ ಆಲೂಗಡ್ಡೆಗಳು ಸಿಗದಿದ್ದರೆ ದೊಡ್ಡದನ್ನೇ ಬಳಸಿ ಇದನ್ನು ಮಾಡಬಹುದು. ಇದು ಪೌಷ್ಟಿಕಾಂಶಭರಿತವಾಗಿದೆ ಮತ್ತು ಪರಾಟ ಅಥವ ರೋಟಿಯೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.

Delicious Methi Aloo Recipe

ಬೇಕಾಗುವ ಸಾಮಗ್ರಿಗಳು

1. ಎಣ್ಣೆ- 1 ಟೀಚಮಚ
2. ಜೀರಿಗೆ- 1/2 ಟೀಚಮಚ
3. ಹಸಿಮೆಣಸಿನಕಾಯಿ- 3-4 (ಅರ್ಧಕ್ಕೆ ಕತ್ತರಿಸಿಕೊಳ್ಳಿ)
4. ಬೆಳ್ಳುಳ್ಳಿ ಎಸಳು- 3
5. ಬೇಬಿ ಪೊಟೆಟೊಗಳು- 1/2 ಕೆಜಿ
6. ಮೆಂತ್ಯೆ ಸೊಪ್ಪು- 250 ಗ್ರಾಂ
7. ಧನಿಯ ಪುಡಿ- 2 ಟೀಚಮಚ
8. ಅರಿಶಿಣ ಪುಡಿ- 1/2 ಟೀಚಮಚ
9. ಅಚ್ಚ ಖಾರದ ಪುಡಿ- 1 ಟೀಚಮಚ
10. ಹುಣಸೆಹಣ್ಣಿನ ಪುಡಿ- 1/2 ಟೀಚಮಚ
11. ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ
1. ಆಲೂಗಡ್ಡೆಯನ್ನು 1 ಟೀಚಮಚ ಉಪ್ಪಿನೊಂದಿಗೆ ಬೇಯಿಸಿಕೊಳ್ಳಿ. ಸಿಪ್ಪೆ ಸುಲಿದುಕೊಳ್ಳಿ.
2. ಬಾಣಲಿಯಲ್ಲಿ ಎಣ್ಣೆ ಕಾಯಿಸಿಕೊಳ್ಳಿ.
3. ಎಣ್ಣೆ ಕಾದ ನಂತರ ಅದಕ್ಕೆ ಜೀರಿಗೆ, ಬೆಳ್ಳುಳ್ಳಿ ಎಸಳು ಮತ್ತು ಹಸಿಮೆಣಸಿನಕಾಯಿ ಹಾಕಿ.
4. ಬೆಳ್ಳುಳ್ಳಿ ಸ್ವಲ್ಪ ಹೊಂಬಣ್ಣಕ್ಕೆ ತಿರುಗುವವರೆಗೆ ಬೇಯಿಸಿ.
5. ನಂತರ ಧನಿಯ ಪುಡಿ, ಅರಿಶಿಣ ಪುಡಿ, ಅಚ್ಚ ಖಾರದ ಪುಡಿ, ಹುಣಸೆಹಣ್ಣಿನ ಪುಡಿ ಮತ್ತು ಉಪ್ಪನ್ನು ಹಾಕಿ.
6. 2-3 ನಿಮಿಷ ಬೇಯಿಸಿ.
7. ಆಲೂಗಡ್ಡೆ ಮತ್ತು ಮೆಂತ್ಯೆ ಸೊಪ್ಪನ್ನು ಸೇರಿಸಿ ಮುಚ್ಚಳ ಮುಚ್ಚಿ 8-10 ನಿಮಿಷ ಬೇಯಿಸಿ.

ಬಿಸಿಯಾದ ಪಲ್ಯವನ್ನು ರೋಟಿ ದಾಲ್ ನೊಂದಿಗೆ ಅಥವ ಪರಾಟಾದೊಂದಿಗೆ ಸವಿಯಿರಿ.

English summary

Delicious Methi Aloo Recipe

Methi aloo is a very easy and simple preparation made in Indian households using fresh fenugreek leaves and baby potatoes. If baby potatoes are not available, you can use normal potatoes cut into small pieces.
Story first published: Monday, December 16, 2013, 15:50 [IST]
X
Desktop Bottom Promotion