For Quick Alerts
ALLOW NOTIFICATIONS  
For Daily Alerts

ಕ್ರಿಸ್ಪಿ ಅಂಡ್ ಟೇಸ್ಟಿ ಬೇಬಿ ಆಲೂ ಫ್ರೈ

|

ಈಗ ಮಾರುಕಟ್ಟೆಯಲ್ಲಿ ಬೇಬಿ ಆಲೂಗಡ್ಡೆಗಳು ಸಿಗುತ್ತಿವೆ. ಆಲೂಗಡ್ಡೆ ಬಳಸಿ ಹಲವು ರೀತಿಯ ರುಚಿಕರವಾದ ತಿಂಡಿಗಳನ್ನು ಮಾಡಬಹುದು. ಭಾರತೀಯ ಅಡುಗೆ ಪದ್ಧತಿಯಲ್ಲಿ ಆಲೂಗಡ್ಡೆ ಹೆಚ್ಚಾಗಿ ಬಳಸುವಂತಹ ತರಕಾರಿ. ಇದು ಅಡುಗೆಯ ರುಚಿಯನ್ನೇ ಬದಲಿಸಿಬಿಡುತ್ತದೆ.

ಬೇಬಿ ಆಲೂಗಡ್ಡೆಗಳನ್ನು ಬಳಸಿ ಹಲವು ರೀತಿಯ ತಿಂಡಿಗಳನ್ನು ಮಾಡಬಹುದು. ಇವುಗಳಿಂದ ಕರಿದ ತಿಂಡಿಗಳನ್ನೂ ಮಾಡಬಹುದು ಅಥವ ಇದನ್ನು ಬೇಯಿಸಿ ಬೇರೆಯದೇ ರುಚಿಯನ್ನು ಪಡೆಯಬಹುದು. ಬೇಬಿ ಆಲೂಗಡ್ಡೆಯನ್ನು ಸಿಪ್ಪೆ ತೆಗೆಯದೆ ತಿಂದರೆ ಹೆಚ್ಚು ರುಚಿಕರವಾಗಿರುತ್ತದೆ. ಇಲ್ಲಿ ನಾವು ನಿಮಗೆ ಈ ಆಲೂಗಡ್ಡೆ ಬಳಸಿ ಮಾಡಬಹುದಾದ ಒಂದು ಸರಳ ರೆಸಿಪಿಯನ್ನು ಕೊಟ್ಟಿದ್ದೇವೆ. ಒಮ್ಮೆ ಪ್ರಯತ್ನಸಿ.

Crisp Baby Potatoes Fry Recipe

ಬೇಕಾಗುವ ಸಾಮಗ್ರಿಗಳು
1. ಬೇಬಿ ಆಲೂಗಡ್ಡೆ- 8-10
2. ಹಸಿಮೆಣಸಿನಕಾಯಿ- 2-3
3. ಈರುಳ್ಳಿ- 2
4. ಟೊಮೊಟೊ- 1
5. ಅರಿಶಿನಪುಡಿ- 1 ಟೀಚಮಚ
6. ಅಚ್ಚಖಾರದ ಪುಡಿ- 1 ಟೀಚಮಚ
7. ಧನಿಯ ಪುಡಿ- 1 ಟೀಚಮಚ
8. ಗರಂ ಮಸಾಲ- ಸ್ವಲ್ಪ
9. ಜೀರಿಗೆ- 1 ಟೀ ಚಮಚ
10. ಉಪ್ಪು- ರುಚಿಗೆ ತಕ್ಕಷ್ಟು
11. ಎಣ್ಣೆ- 1/2 ಟೀಚಮಚ

ಮಾಡುವ ವಿಧಾನ
ಮೊದಲಿಗೆ ಈರುಳ್ಳಿ ಮತ್ತು ಟೊಮೊಟೊ ಪೇಸ್ಟ್ ಪ್ರತ್ಯೇಕವಾಗಿ ತಯಾರಿಸಿಟ್ಟುಕೊಳ್ಳಿ. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾಯಿಸಿಕೊಳ್ಳಿ. ಎಣ್ಣೆ ಕಾದ ನಂತರ ತೊಳೆದಿಟ್ಟುಕೊಂಡ ಆಲೂಗಡ್ಡೆಗಳನ್ನು ಒಂದೊಂದಾಗಿ ಎಣ್ಣೆಗೆ ಹಾಕಿ ಅದು ಹೊಂಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ. ಕರಿದ ಆಲೂಗಡ್ಡೆಗಳನ್ನು ಪ್ರತ್ಯೇಕವಾಗಿ ತೆಗೆದಿಟ್ಟುಕೊಳ್ಳಿ. ನಂತರ ಅದೇ ಬಾಣಲಿಗೆ ಜೀರಿಗೆಯನ್ನು ಹಾಕಿ ಅದಕ್ಕೆ ಈರುಳ್ಳಿ ಪೇಸ್ಟ್ ಸೇರಿಸಿ 3-4 ನಿಮಿಷ ಬೇಯಿಸಿ. ಅದಕ್ಕೆ ಅರಿಶಿನದ ಪುಡಿ ಮತ್ತು ಉಪ್ಪು ಹಾಕಿ 2 ನಿಮಿಷದ ನಂತರ ಹಸಿ ಮೆಣಸಿನಕಾಯಿ ಸೇರಿಸಿ. ಇದಕ್ಕೆ ಟಮೊಟೊ ಪೇಸ್ಟ್ ಸೇರಿಸಿ 3-4 ನಿಮಿಷಗಳವರೆಗೆ ಬೇಯಿಸಿ. ನಂತರ ಗರಂ ಮಸಾಲ ಪುಡಿ, ಧನಿಯ ಪುಡಿ, ಅಚ್ಚ ಖಾರದ ಪುಡಿ ಹಾಕಿ ಚೆನ್ನಾಗಿ ಕಲಸಿ. ಇವೆಲ್ಲವೂ ಚೆನ್ನಾಗಿ ಮಿಶ್ರಗೊಂಡ ನಂತರ ಅದಕ್ಕೆ ಕರಿದ ಆಲೂಗಡ್ಡೆಗಳನ್ನು ಸೇರಿಸಿ ಒಂದೆರೆಡು ನಿಮಿಷ ಬೇಯಿಸಿ. ಬೆಂದ ನಂತರ ಕೊತ್ತಂಬರಿ ಸೊಪ್ಪನ್ನು ಹಾಕಿ.
ಈಗ ಬೇಬಿ ಆಲೂ ಫ್ರೈ ಸವಿಯಲು ಸಿದ್ಧ.

English summary

Crisp Baby Potatoes Fry Recipe

Baby potatoes are available in this season. The market is flooded with these small potatoes that are a fresh harvest. In Indian cuisine, a lot of dishes are based on the chief ingredient, potato.
Story first published: Thursday, November 28, 2013, 16:43 [IST]
X
Desktop Bottom Promotion