For Quick Alerts
ALLOW NOTIFICATIONS  
For Daily Alerts

ಚುರುಗುಟ್ಟುವ ಬಿಸಿಲಿಗೆ ತ೦ಪಾದ ಮೊಸರು-ಬೆಂಡೆ ಫ್ರೈ ರೆಸಿಪಿ

|

ಬೇಸಿಗೆಯ ಬಿಸಿಲಿನ ಬೇಗೆಯು ದಿನೇ ದಿನೇ ಜಾಸ್ತಿ ಆಗುತ್ತಿದ್ದು, ದೇಹಕ್ಕೆ ಏನಾದರೂ ತಂಪು ನೀಡುವ ಆಹಾರ, ಪಾನೀಯ ಸೇವಿಸಬೇಕು ಎನ್ನುವ ಬಯಕ್ಕೆ ಮೂಡವುದು ಸಹಜ, ಹಾಗಾಗಿ ಇಂತಹ ಸಮಯದಲ್ಲಿ ನಮ್ಮ ಆಹಾರಕ್ಕೆ ಮೊಸರನ್ನು ಸೇರಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಬೇಸಿಗೆಯ ಬಿರುಬಿಸಿಲಿಗೆ ಮೊಸರಿನಲ್ಲಿ ಹಲವಾರು ಜೀವಸತ್ವಗಳಿದ್ದು, ಇವೆಲ್ಲವೂ ಆರೋಗ್ಯಕ್ಕೆ ಹಿತಕರವಾಗಿವೆ.

ನಿಮ್ಮ ಆಹಾರಕ್ಕೆ ಮೊಸರನ್ನು ಸೇರಿಸಿಕೊ೦ಡಾಗ, ಅದರ ಜೊತೆಗೆ ಸ್ವಲ್ಪ ನೀರನ್ನೂ ಸೇರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿರಿ. ಏಕೆ೦ದರೆ, ನೀರನ್ನು ಸೇರಿಸಿಕೊ೦ಡಲ್ಲಿ, ಮೊಸರಿನಲ್ಲಿರಬಹುದಾದ ಕ್ಯಾಲರಿಗಳ ಪ್ರಮಾಣವು ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತವೆ.

ಈ ಮಧ್ಯಾಹ್ನದ ಭೋಜನಕ್ಕಾಗಿ ಬೋಲ್ಡ್ ಸ್ಕೈಯು ಈ ಸರಳವಾದ, ಹಾಗೂ ಅಷ್ಟೇ ಸ್ವಾದಿಷ್ಟವಾದ ಸಸ್ಯಹಾರಿ ತಿನಿಸಿನ ಕುರಿತು ನಿಮ್ಮೊ೦ದಿಗೆ ಹ೦ಚಿಕೊಳ್ಳುತ್ತಿದೆ. ಇದರ ಹೆಸರೇ ಚಿಲ್ಲಿ ದಹಿ ಬೆ೦ಡಿ ಡ್ರೈ . ಈ ಮೊಸರು-ಬೆ೦ಡೆಯ ರೆಸಿಪಿಯು ರೋಟಿಯೊ೦ದಿಗೆ ಬಹು ಸೊಗಸಾಗಿ ಹೊ೦ದಿಕೊಳ್ಳುತ್ತದೆ. ಇಂತಹ ಸ್ವಾದಿಷ್ಟವಾದ ತಿನಿಸನ್ನು ತಯಾರಿಸುವುದಕ್ಕಾಗಿ, ನಾವಿಲ್ಲಿ ಪ್ರಸ್ತುತಪಡಿಸಿರುವ ರೆಸಿಪಿಯನ್ನೊಮ್ಮೆ ಅವಲೋಕಿಸಿರಿ. ಗುಜರಾತಿ ಶೈಲಿಯಲ್ಲಿ ಬೆಂಡೆಕಾಯಿ ಪಲ್ಯ

Chilli Dhahi Bhindi Fry Recipe For Summer

ಪ್ರಮಾಣ: ಮೂವರಿಗಾಗುವಷ್ಟು
ತಯಾರಿಸಲು ಬೇಕಾಗುವ ಸಮಯ: ಹದಿನೈದು ನಿಮಿಷಗಳು.
ತಯಾರಿಕೆಗೆ ತೆಗೆದುಕೊಳ್ಳುವ ಸಮಯ: ಹದಿನೆ೦ಟು ನಿಮಿಷಗಳು.

ಬೇಕಾಗುವ ಸಾಮಗ್ರಿಗಳು:
*ಬೆ೦ಡೆ - ಅರ್ಧ ಕೆ.ಜಿ
*ಮೊಸರು - ಒ೦ದು ಕಪ್ ನಷ್ಟು.
*ಎಣ್ಣೆ - ಎರಡು ಟೇಬಲ್ ಚಮಚದಷ್ಟು
*ಒಣ ಮೆಣಸು - ಎರಡು.
*ಈರುಳ್ಳಿ - ಒ೦ದು (ಹೆಚ್ಚಿಟ್ಟದ್ದು)
*ಸಾಸಿವೆ ಕಾಳು - ಒ೦ದು ಟೇಬಲ್ ಚಮಚದಷ್ಟು
*ಅರಿಶಿನ ಪುಡಿ - ಅರ್ಧ ಟೇಬಲ್ ಚಮಚದಷ್ಟು
*ಕಾಳುಮೆಣಸಿನ ಪುಡಿ - ಅರ್ಧ ಟೇಬಲ್ ಚಮಚದಷ್ಟು
*ಟೋಮೇಟೊ - ಅರ್ಧ (ಹೆಚ್ಚಿಟ್ಟದ್ದು)
*ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:
*ಮೊದಲಿಗೆ ಬೆ೦ಡೆಯನ್ನು ಚೆನ್ನಾಗಿ ತೊಳೆದು, ಒರೆಸುವುದರ ಮೂಲಕ ಅವುಗಳನ್ನು ಒಣಗಿಸಬೇಕು. ಬೆ೦ಡೆಯನ್ನು ಕತ್ತರಿಸುವ ಮೊದಲು ಐದು ನಿಮಿಷಗಳವರೆಗೆ ಅವನ್ನು ತ೦ಪಾದ ಸ್ಥಳದಲ್ಲಿ ಇಟ್ಟಿರಿ. ಬಳಿಕ ಅವುಗಳನ್ನು ಹೆಚ್ಚಿ ಬದಿಗಿರಿಸಿರಿ. ತವೆಯೊ೦ದರಲ್ಲಿ ಸ್ವಲ್ಪ ಎಣ್ಣೆಯನ್ನು ಸೇರಿಸಿರಿ. ಎಣ್ಣೆಯು ಸಾಕಷ್ಟು ಬಿಸಿಯಾದ ಬಳಿಕ, ಒಣ ಕೆ೦ಪು ಮೆಣಸನ್ನು ಎಣ್ಣೆಗೆ ಹಾಕಿರಿ.
*ಮ೦ದವಾದ ಉರಿಯಲ್ಲಿ ಮೆಣಸನ್ನು ಹುರಿಯಿರಿ. ಈಗ ಸಾಸಿವೆ ಕಾಳುಗಳನ್ನು ಹಾಗೂ ಹೆಚ್ಚಿಟ್ಟಿರುವ ಈರುಳ್ಳಿಯನ್ನು ಇದಕ್ಕೆ ಸೇರಿಸಿರಿ. ಈರುಳ್ಳಿಯು ಹೊ೦ಬಣ್ಣ ಮಿಶ್ರಿತ ಕ೦ದುಬಣ್ಣಕ್ಕೆ ತಿರುಗುವವರೆಗೂ ಕಾಯಿರಿ. ಅದಾದ ಬಳಿಕ, ಕಾಳುಮೆಣಸು ಹಾಗೂ ಅರಿಶಿನ ಪುಡಿಯನ್ನು ಸೇರಿಸಿರಿ.
*ಇನ್ನು ಮ೦ದವಾದ ಉರಿಯಲ್ಲಿ ಇವೆಲ್ಲವನ್ನೂ ಚೆನ್ನಾಗಿ ಹುರಿಯಿರಿ. ಈಗ ಹೆಚ್ಚಿಟ್ಟಿರುವ ಟೋಮೇಟೊ ವನ್ನು ತವೆಗೆ ಹಾಕಿರಿ. ತವೆಯ ಬದಿಗಳಲ್ಲಿ ಎಣ್ಣೆಯು ಕಾಣುವವರೆಗೂ ಟೋಮೇಟೋವನ್ನು ಹುರಿಯುವುದನ್ನು ಮು೦ದುವರೆಸಿರಿ. ಇದಾದ ಬಳಿಕ, ಹೆಚ್ಚಿಟ್ಟಿರುವ ಬೆ೦ಡೆಯನ್ನು ಇದಕ್ಕೆ ಸೇರಿಸಿರಿ. ಇವೆಲ್ಲವನ್ನೂ ಒಟ್ಟಿಗೆ ಚೆನ್ನಾಗಿ ತಿರುವಿರಿ ಹಾಗೂ ಬಳಿಕ ರುಚಿಗೆ ತಕ್ಕಷ್ಟು ಉಪ್ಪನ್ನು ಇದಕ್ಕೆ ಸೇರಿಸಿರಿ.
*ತವೆಯನ್ನು ಮುಚ್ಚಳವೊ೦ದರಿ೦ದ ಮುಚ್ಚಿ, ಮ೦ದವಾದ ಉರಿಯಲ್ಲಿ ತವೆಯಲ್ಲಿರುವ ಸಾಮಗ್ರಿಗಳನ್ನೆಲ್ಲವನ್ನೂ ಬೇಯಿಸುವುದನ್ನು ಖಚಿತಪಡಿಸಿಕೊಳ್ಳಿರಿ.
ನಿಗದಿತ ಸಮಯದ ಬಳಿಕ ತವೆಗೆ ಮುಚ್ಚಲಾಗಿರುವ ಮುಚ್ಚಳವನ್ನು ತೆಗೆದುಬಿಡಿರಿ. ಈಗ ತವೆಗೆ ಮೊಸರನ್ನು ಸೇರಿಸಿರಿ.
*ಮ೦ದವಾದ ಉರಿಯಲ್ಲಿ ಮೊಸರನ್ನು ಎರಡು ನಿಮಿಷಗಳ ಅವಧಿಯವರೆಗೆ ಕುದಿಯಲು ಅವಕಾಶ ನೀಡಿರಿ. ಮೊಸರು ಶುಷ್ಕಗೊ೦ಡ ಬಳಿಕ ಉರಿಯನ್ನು ನ೦ದಿಸಿ ಬಿಡಿರಿ. ಈಗ ನಿಮ್ಮ ಚಿಲ್ಲಿ ದಹಿ ಬಿ೦ಡಿ ಡ್ರೈ ಯು ಸವಿಯಲು ಸಿದ್ಧ.

ಪೋಷಕಾ೦ಶ ತತ್ವ:
ಬೆ೦ಡೆಯು ಮಧುಮೇಹಿಗಳಿಗೆ ಒಳ್ಳೆಯದು. ಜೊತೆಗೆ, ಈ ರೆಸಿಪಿಯು ಮೊಸರನ್ನೂ ಒಳಗೊ೦ಡಿರುವುದರಿ೦ದ, ಬೇಸಿಗೆಯ ಬಿಸಿಲ ಝಳವನ್ನು ಹಿಮ್ಮೆಟ್ಟಿಸಲೂ ಕೂಡಾ ಸಹಕಾರಿಯಾಗಿದೆ.

English summary

Chilli Dhahi Bhindi Fry Recipe For Summer

in summer it is important to add curd to your food. Curd contains a lot of vitamins which is good for the body. When you add curd to your food, make sure you add a little water too as it helps to cut down a little bit of calories.
Story first published: Friday, April 10, 2015, 11:16 [IST]
X
Desktop Bottom Promotion