For Quick Alerts
ALLOW NOTIFICATIONS  
For Daily Alerts

ಗುಜರಾತಿ ಶೈಲಿಯಲ್ಲಿ ಬೆಂಡೆಕಾಯಿ ಪಲ್ಯ

|

ಬೆಂಡೆಕಾಯಿಂದ ಅನೇಕ ರುಚಿಯಲ್ಲಿ ಪಲ್ಯಗಳನ್ನು ತಯಾರಿಸಬಹುದು, ಅದರಲ್ಲೊಂದು ಗುಜರಾತಿ ಶೈಲಿಯ ಬೆಂಡೆಕಾಯಿ ಪಲ್ಯ. ಹೆಚ್ಚೇನು ಖಾರ ಹಾಕದೆ ಮಾಡುವ ಈ ಪಲ್ಯ ತುಂಬಾ ರುಚಿಕರವಾಗಿದ್ದು ನಿಮ್ಮ ಮನೆಯವರಿಗೆ ಇಷ್ಟವಾಗುವುದಂತೂ ದಿಟ.

ಬನ್ನಿ ಗುಜರಾತಿ ಶೈಲಿಯಲ್ಲಿ ಬೆಂಡೆಕಾಯಿ ಪಲ್ಯ ಮಾಡುವುದು ಹೇಗೆ ಎಂದು ನೋಡೋಣ:

Aloo, Ladies Finger Fry

ಬೇಕಾಗುವ ಸಾಮಾಗ್ರಿಗಳು
ಬೆಂಡೆಕಾಯಿ 1/4 ಕೆಜಿ
ಆಲೂಗಡ್ಡೆ 2
ಈರುಳ್ಳಿ 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಹಸಿ ಮೆಣಸಿನಕಾಯಿ 3-4
ನಿಂಬೆ ರಸ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಕೊತ್ತಂಬರಿ ಪುಡಿ 1 ಚಮಚ
ಸಾಸಿವೆ
ಮೆಂತೆ ಬೀಜ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ

ತಯಾರಿಸುವ ವಿಧಾನ:

* ಬೆಂಡೆಕಾಯಿಯನ್ನು ತೊಳೆದು ಅದನ್ನು ಬಟ್ಟೆಯಿಂದ ಒರೆಸಿ ಚಿಕ್ಕ ಗಾತ್ರದಲ್ಲಿ ಕತ್ತರಿಸಿ.

* ಆಲೂಗಡ್ಡೆಯನ್ನು ಕತ್ತರಿಸಿ.

* ಈಗ ಪಾತ್ರೆಯನ್ನು ಉರಿ ಮೇಲೆ ಇಟ್ಟು ಅದು ಬಿಸಿಯಾದಾಗ 1 ಚಮಚ ಎಣ್ಣೆ ಹಾಕಿ, ಬೆಂಡೆಕಾಯಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ, ನಂತರ ಅದನ್ನು ತೆಗೆದು ಮತ್ತೊಂದು ಬಟ್ಟಲಿಗೆ ಹಾಕಿಡಿ.

*ಈಗ ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಬಿಸಿ ಸಾಸಿವೆ ಹಾಕಿ, ನಂತರ ಮೆಂತೆ ಬೀಜ ಹಾಕಿ 2 ನಿಮಿಷ ಫ್ರೈ ಮಾಡಿ, ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ನಂತರ ಆಲೂಗಡ್ಡೆ ಹಾಕಿ 5 ನಿಮಿಷ ಫ್ರೈ ಮಾಡಿ, ಈಗ ಫ್ರೈ ಮಾಡಿದ ಬೆಂಡೆಕಾಯಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಸ್ವಲ್ಪವೇ-ಸ್ವಲ್ಪ ನೀರು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ.

* ನಂತರ ಪಾತ್ರೆಯ ಮುಚ್ಚಳ ತೆಗೆದು 5 ನಿಮಿಷ ಫ್ರೈ ಮಾಡಿ ನಿಂಬೆ ರಸ ಹಿಂಡಿ ಮಿಕ್ಸ್ ಮಾಡಿದರೆ ಬೆಂಡೆಕಾಯಿ ಪಲ್ಯ ರೆಡಿ.

English summary

Aloo, Ladies Finger Fry

There are a number of recipes for bhindi masala throughout the country. But Gujarati style bhindi masala is one of its kind. This recipe is prepared using very less spices yet the taste will make you fall in love with this squishy vegetable.
X
Desktop Bottom Promotion