For Quick Alerts
ALLOW NOTIFICATIONS  
For Daily Alerts

ಉಪ್ಪು ರುಚಿಗಷ್ಟೇ ಅಲ್ಲ, ಶುಚಿಗೂ ಬೇಕು!

By Super
|

ಉಪ್ಪಿಗಿಂತ ರುಚಿ ಬೇರೇಯಿಲ್ಲ.. ಹೌದು ಉಪ್ಪಿನ ಮಹತ್ವ ದೊಡ್ಡದು. ಅಡುಗೆ ಜೊತೆಗೆ ಉಪ್ಪಿನ ಇತರೆ ಉಪಯೋಗಗಳನ್ನು ಇಲ್ಲಿ ನೋಡೋಣ. ಈ ಸಲಹೆಗಳು ನಿಮಗೆ ಪ್ರಯೋಜನಕ್ಕೆ ಬರಬಹುದು.

  • ಡಿ.ಜಿ.ರಾಜಲಕ್ಷ್ಮಿ

1. ಪಾತ್ರೆಗಳ ಮೇಲೆ ಟೀ ಮತ್ತು ಕಾಫಿ ಕರೆಗಳಿದ್ದರೆ ಸ್ವಲ್ಪ ಉಪ್ಪಿನಿಂದ ಉಜ್ಜಿ, ಕೆಲವು ನಿಮಿಷಗಳ ನಂತರ ತೊಳೆಯಬೇಕು.

2. ಮೊಟ್ಟೆ ಕೆಟ್ಟಿದೆಯೇ ಅಥವಾ ಉತ್ತಮವಾಗಿದೆಯೇ ಎಂಬುದನ್ನು ತಿಳಿಯಬೇಕಾದರೆ ಅದನ್ನು ಉಪ್ಪು ನೀರಿಗೆ ಹಾಕಬೇಕು. ಉತ್ತಮ ಮೊಟ್ಟೆ ಮುಳುಗುತ್ತದೆ. ಕೆಟ್ಟ ಮೊಟ್ಟೆ ತೇಲುತ್ತದೆ.

3. ಕಪ್ಪಗಾಗಿರುವ ತಾಮ್ರ, ಕಂಚು. ಹಿತ್ತಾಳೆ ಪಾತ್ರೆಗಳನ್ನು ಉಪ್ಪು ಮತ್ತು ಹುಣಸೆ ಹಣ್ಣು ಅಥವಾ ಉಪ್ಪು ಮತ್ತು ನಿಂಬೇರಸ ಹಾಕಿ ತೊಳೆದರೆ ಪಾತ್ರೆಗಳ ಹೊಳಪು ಹೆಚ್ಚುತ್ತದೆ.

4. ಉಪ್ಪು ಮತ್ತು ಅಡುಗೆ ಸೋಡಾ ಸಮಪ್ರಮಾಣದಲ್ಲಿ ಬೆರೆಸಿ ಹಲ್ಲುಜ್ಜಿದರೆ ಹಲ್ಲುಗಳು ಹೊಳಪು ಪಡೆಯುತ್ತವೆ.

5. ಮಿಕ್ಸಿಯ ಬ್ಲೇಡುಗಳು ಮೊಂಡಾಗಿದ್ದರೆ ಕಲ್ಲುಪ್ಪನ್ನು ಮಿಕ್ಸಿಗೆ ಹಾಕಿ ಐದಾರು ನಿಮಿಷ ತಿರುಗಿಸಿ. ಬ್ಲೇಡುಗಳು ಹರಿತವಾಗುತ್ತವೆ.

6. ಹೊಸ ಬಟ್ಟೆ ಬಣ್ಣ ಬಿಡುವುದೆಂಬ ಅನುಮಾನವಿದ್ದರೆ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಅದರಲ್ಲಿ ಮುಕ್ಕಾಲು ಗಂಟೆ ಬಟ್ಟೆ ನೆನೆಸಿ ಒಗೆದರೆ ಬಣ ಬಿಡುವುದಿಲ್ಲ.

7. ಹಲ್ಲು ನೋವು ಅಥವಾ ಗಂಟಲು ನೋವಿದ್ದಾಗ ಉಗುರು ಬೆಚ್ಚನೆ ನೀರಿಗೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸಿದರೆ ನೋವು ಕಡಿಮೆಯಾಗುತ್ತದೆ. ಹಲ್ಲು ಶುಭ್ರವಾಗುತ್ತದೆ. ವಸಡುಗಳ ತೊಂದರೆಯೂ ನಿವಾರಣೆಯಾಗುತ್ತದೆ.

X
Desktop Bottom Promotion