For Quick Alerts
ALLOW NOTIFICATIONS  
For Daily Alerts

ತಿಂದಷ್ಟೂ ತಿನಬೇಕೆನಿಸುವ ವೆಜಿಟೆಬಲ್ ಫ್ರೈ

|
Vegetable fry
ಚೈನಾ ಮೂಲದ ಈ ಸ್ಟಿರ್ ಫ್ರೈ ವೆಜಿಟೆಬಲ್ ಖಾದ್ಯದ ರುಚಿಯಲ್ಲಿ ಎರಡು ಮಾತಿಲ್ಲ. ನಮ್ಮ ಆಹಾರದಲ್ಲಿ ಹೆಚ್ಚು ಪೌಷ್ಟಿಕಾಂಶಗಳನ್ನು ಉಪಯೋಗಿಸಿಕೊಳ್ಳುವುದು ಹೇಗೆ ಎಂದೂ ಈ ಅಡುಗೆಯಿಂದ ತಿಳಿಯಬಹುದು. ಮಕ್ಕಳಿಗೆ ಹೆಚ್ಚು ಇಷ್ಟವಾಗುವ ತರಕಾರಿ ಫ್ರೈ ಅನ್ನು ಅನ್ನದೊಂದಿಗೆ, ನೂಡಲ್ಸ್ ನೊಂದಿಗೆ ಅಥವಾ ರೋಟಿ, ಬ್ರೆಡ್ ನೊಂದಿಗೂ ತಿನ್ನಬಹುದು. ಇಲ್ಲವೆಂದರೆ ಹಾಗೆಯೇ ತಿಂದೂ ಇದರ ರುಚಿಯನ್ನು ಸವಿಯಬಹುದು.


ಬೇಕಾಗುವ ಸಾಮಾನುಗಳು:
* ಕೆಂಪು, ಹಸಿರು ಹಳದಿ ದುಂಡು ಮೆಣಸಿನ ಕಾಯಿ ತಲಾ ಒಂದು
* 1 ಈರುಳ್ಳಿ
* 1 ಕ್ಯಾರೆಟ್
* 6-7 ಬೀನ್ಸ್
* 6-7 ಅಣಬೆ
* 2 ಬೇಬಿ ಕಾರ್ನ್
* 5-6 ಎಸಳು ಸಿಪ್ಪೆ ತೆಗೆದ ಬೆಳ್ಳುಳ್ಳಿ
* 1\2 ಇಂಚು ಶುಂಠಿ
* 3-4 ಕೆಂಪು ಮೆಣಸಿನ ಕಾಯಿ
* 1-2 ಚಮಚ ಸೋಯಾ ಸಾಸ್
* 1-2 ಚಮಚ ವಿನೆಗರ್
* 1-2 ಚಮಚ ಚಿಲ್ಲಿ ಸಾಸ್
* ಎಣ್ಣೆ, ಉಪ್ಪು, ಮೆಣಸು ಮತ್ತು ಸಕ್ಕರೆ

ಮಾಡುವ ವಿಧಾನ: ಮೊದಲು ತರಕಾರಿಗಳನ್ನು ಹೆಚ್ಚಿಟ್ಟುಕೊಂಡಿರಬೇಕು. ನಂತರ ಪ್ರತ್ಯೇಕವಾಗಿ ಸೊಯಾ ಸಾಸ್, ಚಿಲ್ಲಿ ಸಾಸ್, ವಿನೆಗರ್, ಉಪ್ಪು, ಮೆಣಸು ಮತ್ತು ಸ್ವಲ್ಪ ಸಕ್ಕರೆ ಬೆರೆಸಿ ತೆಳ್ಳಗೆ ಪೇಸ್ಟ್ ನಂತೆ ಮಾಡಿಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿಕೊಂಡು ಅದು ಕಾದ ನಂತರ ಹೆಚ್ಚಿಟ್ಟಿಕೊಂಡ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮತ್ತು ಕೆಂಪು ಮೆಣಸಿನ ಕಾಯಿಯನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ಅದಕ್ಕೆ ಕ್ಯಾರೆಟ್, ಬೀನ್ಸ್ , ಅಣಬೆ ಮತ್ತು ದುಂಡು ಮೆಣಸಿನ ಕಾಯಿಗಳನ್ನು ಮಿಶ್ರಣ ಮಾಡಬೇಕು. ಬೆರೆಸಿಕೊಂಡ ಸಾಸ್ ಗಳಲ್ಲಿ ಅರ್ಧದಷ್ಟು ಸಾಸ್ ಅನ್ನು ಈ ತರಕಾರಿಗಳಿಗೆ ಬೆರೆಸಿ ಕಡಿಮೆ ಉರಿಯಲ್ಲಿ 3 ನಿಮಿಷ ಬೇಯಿಸಬೇಕು. ನಂತರ ಬೇಬಿ ಕಾರ್ನನ್ನು ಹಾಕಿ ಉಳಿದ ಸಾಸ್ ಅನ್ನು ಅದಕ್ಕೆ ಬೆರೆಸಬೇಕು. ಈಗ ಡಿಫರೆಂಟ್ ವೆಜಿಟೆಬಲ್ ಸ್ಟಿರ್ ಫ್ರೈ ತಿನ್ನಲು ರೆಡಿಯಾಗಿದೆ.

;

ಹೆಚ್ಚು ತರಕಾರಿಗಳನ್ನು ಉಪಯೋಗಿಸಿಕೊಂಡು ತಯಾರಿಸಲಾದ ಈ ತರಕಾರಿ ಫ್ರೈ ನಿಂದ ಪೌಷ್ಟಿಕಾಂಶವೂ ದ್ವಿಗುಣವಾಗಿ ಸಿಗುತ್ತದೆ.

;
English summary

Stir fry vegetable recipe | vegetarian recipe | ತರಕಾರಿ ಸ್ಟಿರ್ ಫ್ರೈ ರೆಸಿಪಿ | ಸಸ್ಯಾಹಾರ ಖಾದ್ಯ

We have simple vegetable stir fry recipe that is yummy, and can be served with rice, noodles or can just be savoured as it is. It is also a great side dish that goes well with rotis or bread. This vegetarian recipe can be prepared using any vegetables of your choice.Check out the following vegetable stir fry recipe.
Story first published: Monday, August 8, 2011, 10:46 [IST]
X
Desktop Bottom Promotion