For Quick Alerts
ALLOW NOTIFICATIONS  
For Daily Alerts

ಬದಲಾವಣೆಗೆ ಇರಲಿ ಬದನೆಕಾಯಿ ಗೊಜ್ಜು

By Staff
|

ಯಾವಾಗಲೂ ಒಂದೇ ರೀತಿ ತಿಂಡಿ ತಿಂದು ಬೇಜಾರಾಗಿ ರುಚಿಯಲ್ಲಿ ಬದಲಾವಣೆ ಬೇಕು ಅಂತ ನಿಮಗೆ ಅನ್ನಿಸಿದ್ದರೆ ಈ ಬದನೆಕಾಯಿ ಮೊಸರು ಗೊಜ್ಜನ್ನು ತಯಾರಿಸಿ ನೋಡಿ. ಮೊಸರಿನೊಂದಿಗೆ ಬದನೆಕಾಯಿಯದು ಸೂಪರ್ ಕಾಂಬಿನೇಶನ್. ಒಂದು ಬಾರಿ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನ್ನಿಸೋ ಈ ಗೊಜ್ಜಿನ ರುಚಿಯನ್ನ ನೀವೂ ತಿಂದು ಆನಂದಿಸಿ.

ಬೇಕಾಗುವ ಪದಾರ್ಥಗಳು:
* 1/4 ಕೆ.ಜಿ ಬದನೆ ಕಾಯಿ
* 200 ಗ್ರಾಂ ಮೊಸರು
* 5 ಹಸಿಮೆಣಸಿನ ಕಾಯಿ
* 1 ಬೆಲ್ಲದ ತುಂಡು
* ಎಣ್ಣೆ, ಸಾಸಿವೆ,ಕರಿಬೇವು
* ಸ್ವಲ್ಪ ಇಂಗು
* ರುಚಿತೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ: ಬದನೆಕಾಯಿಯನ್ನು ಮತ್ತು ಹಸಿಮೆಣಸಿನ ಕಾಯಿಯನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು. ಆನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬದನೆಕಾಯಿಯನ್ನು ಹುರಿದುಕೊಳ್ಳಬೇಕು. ಸ್ವಲ್ಪ ಮೆತ್ತಗಾದ ನಂತರ ಹುರಿದ ಬದನೆಕಾಯಿಯನ್ನು ಮೊಸರಿಗೆ ಹಾಕಿ, ಮೆಣಸಿನಕಾಯಿಯನ್ನೂ ಮೊಸರಿಗೆ ಸೇರಿಸಬೇಕು. ಈಗ ಸ್ವಲ್ಪ ಬೆಲ್ಲದ ಪುಡಿ ಮತ್ತು ಉಪ್ಪನ್ನು ಹಾಕಿ ಗೊಟಾಯಿಸಬೇಕು.

ನಂತರ ಇದಕ್ಕೆ ಸಾಸಿವೆ, ಕರಿಬೇವು ಮತ್ತು ಇಂಗಿನ ಒಗ್ಗರಣೆಯನ್ನು ಕೊಡಬೇಕು. ಈಗ ಬದನೆಕಾಯಿ ಮೊಸರಿನ ಗೊಜ್ಜು ತಿನ್ನಲು ತಯಾರಾಗಿದೆ. ಮಾಡಲು ತುಂಬಾ ಸುಲಭವಾಗಿರೋ ಈ ಬದನೆಕಾಯಿ- ಮೊಸರಿನ ಗೊಜ್ಜನ್ನು ಅನ್ನದ ಜೊತೆಗೂ ತಿನ್ನಬಹುದು, ಚಪಾತಿ, ಪೂರಿಯೊಂದಿಗೂ ತಿನ್ನಬಹುದು.

English summary

Brinjal recipe | Brinjal and curd recipe | ಬದನೆಕಾಯಿ ಖಾದ್ಯ | ಬದನೆಕಾಯಿ ಮತ್ತು ಮೊಸರಿನ ಖಾದ್ಯ

Brinjal and curd recipe is a different recipe cooked with simple and minimal ingredients. It is a great yummy dish which you can try it in your home. So check out the healthy and easy to make brinjal-curd recipe.
X
Desktop Bottom Promotion