For Quick Alerts
ALLOW NOTIFICATIONS  
For Daily Alerts

ಮಾಡಿ ನೋಡಿ ಫಟಾಫಟ್ ಮಶ್ರೂಮ್ ಮಸಾಲ

|
mushroom masala
ಮಶ್ರೂಮ್ ಈಗ ಬಹುಜನರ ಫೇವರೆಟ್ ಡಿಶ್. ಮೆತ್ತಗೆ ಗೊತ್ತೇ ಆಗದಂತೆ ಬಾಯಿ ಸೇರುವ ಅಣಬೆ ರುಚಿ ಸವಿದವರಿಗಷ್ಟೇ ಗೊತ್ತು.

ಈ ಮಶ್ರೂಮ್ ಗೆ ಮಸಾಲ ಬೆರೆಸಿ ಒಳ್ಳೆ ರುಚಿಕಟ್ಟಾದ ಅಡುಗೆ ಮಾಡಿದರೆ ಬಾಯಲ್ಲಿ ನೀರೂರಿಸಿಕೊಂಡು ತಿನ್ನೋದಂತು ಗ್ಯಾರಂಟಿ. ಅದರಲ್ಲೂ ಈ ಜಿಟಿ ಜಿಟಿ ಮಳೆಯಲ್ಲಿ ಅಣಬೆ ಮಸಾಲೆ ತಿಂದರೆ ರುಚಿ ದುಪ್ಪಟ್ಟು. ರುಬ್ಬಿಕೊಂಡು ಮಾಡೋ ಗೋಜೇ ಇಲ್ಲ. ಫಟಾ ಫಟ್ ಅಂತ ಮಾಡಿ ಬಾಯಿ ಚಪಲ ತೀರಿಸ್ಕೋಬಹುದು.

ಬೇಕಾದ ಸಾಮಾಗ್ರಿಗಳು:
* ಕತ್ತರಿಸಿದ ಮಶ್ರೂಮ್ ಮತ್ತು ಈರುಳ್ಳಿ
* ಟೊಮೊಟೊ
* ಹಸಿರು ಮೆಣಸಿನ ಕಾಯಿ
* ಚೆಕ್ಕೆ, ಲವಂಗ ಮತ್ತು ಕೆಂಪು ಮೆಣಸಿನ ಪುಡಿ
* ಜೀರಿಗೆ ಪುಡಿ, ಅರಿಶಿಣ
* ಬೆಳ್ಳುಳ್ಳಿ ಪೇಸ್ಟ್ ಮತ್ತು ಮೆಂತ್ಯೆ ಸೊಪ್ಪು

ಮಾಡುವ ವಿಧಾನ:
ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿಕೊಂಡು ಬಿಸಿಯಾದ ನಂತರ ಚೆಕ್ಕೆ ಲವಂಗದ ಸಣ್ಣಗಿನ ಚೂರುಗಳನ್ನು ಹಾಕಿ ಉರಿಯಬೇಕು. ನಂತರ ಈರುಳ್ಳಿಯನ್ನು ಹಾಕಿ ಸ್ವಲ್ಪ ಕೆಂಪಗಾಗುವ ತನಕ ಕಾಯಿಸಬೇಕು. ಇದಕ್ಕೆ ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಅರಿಶಿನ ಪುಡಿಯನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಹಾಕಬೇಕು.

ಮಸಾಲೆಯನ್ನು ಚೆನ್ನಾಗಿ ಉರಿದು, ಎಣ್ಣೆ ನೀರಿನ ಮೇಲೆ ತೇಲಲು ಆರಂಭಿಸಿದ ನಂತರ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಕತ್ತರಿಸಿಟ್ಟುಕೊಂಡಿದ್ದ ಟೊಮೊಟೊ ಮತ್ತು ಮೆಣಸಿನಕಾಯಿಯನ್ನು ಹಾಕಬೇಕು. ಎರಡು ನಿಮಿಷಗಳ ಕಾಲ ಚೆನ್ನಾಗಿ ತಿರುಗಿಸಿ ಕತ್ತರಿಸಿದ ಅಣಬೆಯನ್ನು ಬೆರೆಸಬೇಕು.

ಈ ಮಿಶ್ರಣವನ್ನು ಸುಮಾರು 5 ರಿಂದ 7 ನಿಮಿಷಗಳ ಕಾಲ ಕುದಿಸಿ ಕೊನೆಗೆ ಮೆಂತ್ಯೆ ಸೊಪ್ಪನ್ನು ಮೇಲೆ ಉದುರಿಸಬೇಕು. ಅಷ್ಟೆ, ಮಸಾಲ ಮಶ್ರೂಮ್ ರೆಡಿ ಆಯ್ತು. ಇದನ್ನ ಚಪಾತಿ ಜೊತೆಗೊ, ಪರೋಟ ಜೊತೆಗೋ ತಿಂದರೆ ಇನ್ನೂ ರುಚಿ....

English summary

Vegetarian recipe | Mushroom recipies | Masala recipies | ಮಶ್ರೂಮ್ ಮಸಾಲ | ಸಸ್ಯಾಹಾರಿ ಖಾದ್ಯಗಳು | ಮಸಾಲೆ ಅಡುಗೆಗಳು

Mushroom is an all time favorite dish and also rich in protein. If you want to make a spicy mushroom dish then try this mushroom masala recipe.
Story first published: Saturday, July 23, 2011, 15:21 [IST]
X
Desktop Bottom Promotion