For Quick Alerts
ALLOW NOTIFICATIONS  
For Daily Alerts

ವಿಶೇಷ ಅಡುಗೆಗೆ ಆರೋಗ್ಯಕರ ಹಪ್ಪಳ ಸಲಾಡ್

|
Papad Salad Recipe
ಊಟದ ಜೊತೆ ಹಪ್ಪಳ ಕೊಟ್ಟರೆ ವಿಶೇಷವಲ್ಲ. ಆದರೆ ಊಟದ ಜೊತೆ ಹಪ್ಪಳ ಸಲಾಡ್ ಮಾಡಿದರೆ ವಿಶೇಷ ಅಡುಗೆಯಾಗುವುದು. ಎಣ್ಣೆಯಲ್ಲಿ ಹುರಿದ ಹಪ್ಪಳಕ್ಕಿಂತ ಸುಟ್ಟ ಹಪ್ಪಳದ ರುಚಿ ಹೆಚ್ಚು. ಇದೇ ರುಚಿಕರವಾದ ಹಪ್ಪಳ ಬಳಸಿ ಸಲಾಡ್ ಮಾಡುವ ಸರಳ ವಿಧಾನದ ಬಗ್ಗೆ ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು:
1. ಹಪ್ಪಳ 2 (ಖಾರವಿರುವ ಅಥವಾ ಖಾರಯಿಲ್ಲದ ಹಪ್ಪಳ)
2. 1 ಕಪ್ ಮೊಳಕೆ ಬರಿಸಿದ ಕಾಳು
3. 1/2 ಕಪ್ ಬೇಯಿಸಿದ ಜೋಳ
4. 1/2 ಕಪ್ ಈರುಳ್ಳಿ (ಕತ್ತರಿಸಿದ್ದು)
5. ಕೊತ್ತಂಬರಿ ಸೊಪ್ಪು
6. ಸ್ವಲ್ಪ ನಿಂಬೆ ರಸ
7. 1 ಚಮಚ ಬೆಣ್ಣೆ
8. ಕರಿಮೆಣಸಿನ ಪುಡಿ 1/2 ಚಮಚ ( ಬೇಕಿದ್ದರೆ)
9. ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

1. ಹಪ್ಪಳ ಹೊರತು ಪಡಿಸಿ ಉಳಿದೆಲ್ಲಾ ಸಾಮಾಗ್ರಿಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಮಿಶ್ರ ಮಾಡಬೇಕು.
2. ಸುಟ್ಟ ಹಪ್ಪಳದ ಮೇಲೆ ಆ ಸಲಾಡ್ ಮಿಶ್ರಣವನ್ನು ಹಾಕಿ ತಕ್ಷಣ ತಿನ್ನಲು ಕೊಡಿ.

ಸಲಾಡ್ ಮಿಶ್ರಣದ ಜೊತೆ ಒಂದು ಹಪ್ಪಳವನ್ನು ಪುಡಿ ಮಾಡಿ ಹಾಕಿ ನಂತರ ಆ ಮಿಶ್ರಣವನ್ನು ಹಪ್ಪಳ ಮೇಲೆ ಹಾಕಿ ಕೊಡಬಹುದು.

ಹಪ್ಪಳವನ್ನು ಪ್ರೊಟೀನ್ ಇರುವ ಪದಾರ್ಥಗಳಿಂದ ತಯಾರಿಸುವುದರಿಂದ ಅದರಿಂದ ಈ ರೀತಿಯ ಸಲಾಡ್ ಮಾಡಿದರೆ ವಿಭಿನ್ನ ಮತ್ತು ರುಚಿಕರ ಪದಾರ್ಥ ಅನಿಸುವುದು, ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

English summary

Papad Salad Recipe | Veriety Of Salad | ಹಪ್ಪಳ ಸಲಾಡ್ ರೆಸಿಪಿ | ಅನೇಕ ಬಗೆಯ ಸಲಾಡ್

Papads are healthy as they are made of protein rich legumes. Vitamin rich vegetables and herbs make the salad a 100% nutritious salad.
Story first published: Wednesday, June 27, 2012, 9:59 [IST]
X
Desktop Bottom Promotion