For Quick Alerts
ALLOW NOTIFICATIONS  
For Daily Alerts

ಕೊಂಚ ಖಾರ-ಸಕತ್ ರುಚಿ, ಈರುಳ್ಳಿ ಚಿಕನ್ ಗ್ರೇವಿ!

By manu
|

ವಿಶ್ವದಲ್ಲಿಯೇ ಅತಿ ಹೆಚ್ಚು ಸೇವಿಸಲ್ಪಡುವ ಮಾಂಸಾಹಾರವೆಂದರೆ ಕೋಳಿಮಾಂಸ. ಇದನ್ನು ದಿನದ ಮೂರೂ ಹೊತ್ತೂ ಇಷ್ಟಪಟ್ಟು ತಿನ್ನುವವರಿದ್ದಾರೆ. ಕೋಳಿಮಾಂಸ ಎಂದರೆ ನಾಟಿ ಕೋಳಿ ಎನ್ನುವ ಕಾಲ ಹಿಂದೆ ಸರಿದಿದೆ, ಈಗೇನಿದ್ದರೂ ಬಾಯ್ಲರ್ ಕೋಳಿಗಳ ಕಾಲ. ಕೋಳಿಮಾಂಸವನ್ನೇ ಮುಖ್ಯ ಆಹಾರವಾಗಿಸಿ ಅನ್ನ ಚಪಾತಿಗಳನ್ನು ಉಪ ಆಹಾರವಾಗಿಸಿ ವರ್ಷಗಳೇ ಕಳೆದಿವೆ.

ಮಾಂಸಾಹಾರ ಸೇವಿಸುವ ಕುಟುಂಬಗಳಲ್ಲಿ ಕನಿಷ್ಠ ಒಂದಾದರೂ ಕೋಳಿ ಮಾಂಸದ ಅಡುಗೆ ಇದ್ದೇ ಇರುತ್ತದೆ. ಅನ್ನದೊಡನೆ ಬೇಯಿಸಿ ಬಿರಿಯಾನಿಯ ಸವಿ ಒಂದಾದರೆ ತೆಳುವಾದ ಅಕ್ಕಿರೊಟ್ಟಿ ಅಥವಾ ನೀರು ದೋಸೆಯೊಂದಿಗೆ ಖಾರವಾದ ಕೋಳಿಮಾಂಸದ ಸಾರು ಅಥವಾ ಗ್ರೇವಿ ನೆನೆಸಿಕೊಂಡು ಸವಿಯುವುದು ಕರಾವಳಿಯ ಜನರಿಗೆ ಹೆಚ್ಚು ಇಷ್ಟ.

Spicy Onion Chicken Gravy Recipe

ಕೋಳಿ ರೊಟ್ಟಿಯಂತೂ ಈ ಗ್ರೇವಿಯೊಡನೆ ಹೇಳಿ ಮಾಡಿಸಿದ ಆಹಾರದಂತಿದೆ. ಆದರೆ ಸಾಮಾನ್ಯವಾಗಿ ಹೆಚ್ಚಿನವರು ಸಾರಿಗೆ ಹಾಕುವ ಮಸಾಲೆಯನ್ನೇ ಕೊಂಚ ಕಡಿಮೆ ನೀರು ಸೇರಿಸಿ ದಪ್ಪನಾಗಿಸುತ್ತಾರೆ. ಇದು ರುಚಿಯಾಗಿದ್ದರೂ ಇದರಲ್ಲಿ ಹೆಚ್ಚಿರುವ ಮೆಣಸಿನಪುಡಿಯ ಕಾರಣ ಹೊಟ್ಟೆಯಲ್ಲಿ ಮತ್ತು ಮರುದಿನದ ಬಹಿರ್ದೆಶೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು. ಈ ತೊಂದರೆಯನ್ನು ನಿವಾರಿಸಲು ಕೊಂಚ ಕಾರದ ಪುಡಿ ಕಡಿಮೆ ಹಾಕಿ ಈರುಳ್ಳಿ ಹೆಚ್ಚಿಸಿ ಇನ್ನೂ ರುಚಿಕರವಾಗಿರುವಂತೆ ಮಾಡಿರುವ ಗ್ರೇವಿಯನ್ನು ಇಂದು ಪ್ರಸ್ತುತಪಡಿಸಲು ಬೋಲ್ಡ್ ಸ್ಕೈ ತಂಡ ಹರ್ಷಿಸುತ್ತಿದೆ. ಚಿಕನ್ ಗ್ರೇವಿ- ಈರುಳ್ಳಿ ಹಾಕದ ರೆಸಿಪಿ

*ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

ಅಗತ್ಯವಿರುವ ಸಾಮಗ್ರಿಗಳು
*ತಾಜಾ ಕೋಳಿಮಾಂಸ: ಐನೂರು ಗ್ರಾಂ (ಚರ್ಮ ನಿವಾರಿಸಿದ್ದು)
*ಈರುಳ್ಳಿ - ಎರಡು ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಟೊಮಾಟೊ: ಒಂದು ಕಪ್ (ಚಿಕ್ಕದಾಗಿ ಹೆಚ್ಚಿದ್ದು) ಚೆನ್ನಾಗಿ ಹಣ್ಣಾಗಿರಬೇಕು, ಕೊಂಚ ಕಾಯಿ ಇದ್ದರೂ ರುಚಿ ಹುಳಿಯಾಗುತ್ತದೆ.
*ಶುಠಿ ಬೆಳ್ಳುಳ್ಳಿ ಪೇಸ್ಟ್ - ಒಂದು ಚಿಕ್ಕಚಮಚ
*ಹಸಿಮೆಣಸು : ಐದರಿಂದ ಆರು
*ಮೊಸರು: ಒಂದು ಕಪ್
*ಕೆಂಪು ಮೆಣಸಿನ ಪುಡಿ: ಅರ್ಧ ಚಿಕ್ಕ ಚಮಚ (ಉತ್ತಮ ರುಚಿಗಾಗಿ ಒಂದು ಚಿಕ್ಕ ಚಮಚ ಕಾಶ್ಮೀರಿ ಚಿಲ್ಲಿ ಬಳಸಿ.
*ಎಣ್ಣೆ: ಅಗತ್ಯಕ್ಕೆ ತಕ್ಕಂತೆ
*ಉಪ್ಪು: ರುಚಿಗನುಸಾರ ಚಪಾತಿ ಜೊತೆ ಬಟರ್ ಚಿಕನ್ ತಿನ್ನಲು ಬಲು ರುಚಿ

ವಿಧಾನ:
1) ಒಂದು ದಪ್ಪತಳದ ಬಾಣಲೆಯಲ್ಲಿ ಕೊಂಚ ಎಣ್ಣೆ ಹಾಕಿ ಇದಕ್ಕೆ ಈರುಳ್ಳಿ ಸುರಿದು ಮಧ್ಯಮ ಉರಿಯಲ್ಲಿ ಕಂದುಬಣ್ಣಬರುವವರೆಗೆ ಹುರಿಯಿರಿ.
2) ಇದಕ್ಕೆ ಕೊಂಚ ನೀರು ಹಾಕಿ (ಈರುಳ್ಳಿ ಮುಳುಗುವಷ್ಟು ಸಾಕು) ಸುಮಾರು ಐದರಿಂದ ಹತ್ತು ನಿಮಿಷ ಬೇಯಿಸಿ.
3) ಈಗ ಟೊಮೇಟೊ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಉಪ್ಪು ಹಾಕಿ ಸುಮಾರು ಹತ್ತು ನಿಮಿಷ ಬೇಯಲು ಬಿಡಿ
4) ಈ ಸಮಯದಲ್ಲಿ ಇನ್ನೊಂದು ಪಾತ್ರೆ ಅಥವಾ ಬಾಣಲೆಯಲ್ಲಿ ಕೊಂಚ ಎಣ್ಣೆ ಹಾಕಿ ಕೋಳಿಯ ತುಂಡುಗಳನ್ನು ಹುರಿಯಿರಿ. ಹತ್ತು ಹನ್ನೆರಡು ನಿಮಿಷದಲ್ಲಿ ಸುಮಾರು ಅರ್ಧಕ್ಕಿಂತ ಹೆಚ್ಚು ಬೆಂದರೆ ಸಾಕು.
5) ಹುರಿದ ಈ ತುಂಡುಗಳನ್ನು ಈರುಳ್ಳಿ ಬೇಯುತ್ತಿರುವ ಪಾತ್ರೆಗೆ ಸುರಿಯಿರಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕೊಂಚ ತಿರುವಿ ಉರಿ ಹೆಚ್ಚಿಸಿ ಬೇಯಲು ಬಿಡಿ.
6) ಸುಮಾರು ಐದು ನಿಮಿಷದ ಬಳಿಕ ಮಾಂಸ ಬೆಂದಿದೆ ಅನ್ನಿಸಿದಾಗ ಉರಿ ತಗ್ಗಿಸಿ ಮೊಸರನ್ನು ಸೇರಿಸಿ ಕುದಿಯಲು ಬಿಡಿ. ಇನ್ನೂ ಐದು ನಿಮಿಷದ ಬಳಿಕ ಉರಿ ಆರಿಸಿ ಮುಚ್ಚಳ ಕೊಂಚ ತೆರೆದಿಡಿ.
7) ಬಿಸಿಬಿಸಿಯಾಗಿ ಪತ್ತರಿ, ಚಪಾತಿ, ರೊಟ್ಟಿ ಅನ್ನದೊಡನೆ ತಿನ್ನಲು ಇದು ರುಚಿಯಾಗಿರುತ್ತದೆ. ಈ ರೆಸಿಪಿ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿ.

X
Desktop Bottom Promotion