For Quick Alerts
ALLOW NOTIFICATIONS  
For Daily Alerts

ದೇಸಿ ಚಿಕನ್ ಮಸಾಲ ರೆಸಿಪಿ

|

ಮಾಂಸಾಹಾರಿಗಳ ಪ್ರೀತಿಯ ಆಹಾರ ಚಿಕನ್. ಚಿಕನ್ ಬಳಸಿ ಹಲವು ರೀತಿಯ ತಿಂಡಿಗಳನ್ನು ತಯಾರಿಸಬಹುದು. ಆದರೆ ಈಗ ತೂಕ ಕಳೆದುಕೊಳ್ಳಲು ಬಯಸುವವರು ಹೆಚ್ಚಾಗಿ ಕಡಿಮೆಕೊಬ್ಬಿನಂಶವಿರುವ ಚಿಕನ್ ಅಡುಗೆಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಹೆಚ್ಚು ಕ್ಯಾಲೋರಿಗಳಿರುವ ಆಹಾರವನ್ನು ಯಾರೂ ತಿನ್ನಲು ಇಷ್ಟಪಡುವುದಿಲ್ಲ.
ಇದನ್ನು ಗಮನದಲ್ಲಿಟ್ಟುಕೊಂಡು ನಾವು ಈವತ್ತು ನಿಮಗೊಂದು ಸರಳವಾದ ಚಿಕನ್ ಮಸಾಲ ರೆಸಿಪಿಯನ್ನು ಹೇಳಿಕೊಡುತ್ತೇವೆ. ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳಿರುವುದಿಲ್ಲ. ಇದಕ್ಕೆ ಮುಖ್ಯವಾಗಿ ಬೇಕಿರುವುದು ಕಡಿಮೆ ಕೊಬ್ಬಿನಂಶವಿರುವ ಯೋಗರ್ಟ್. ಇದರ ಗಮಗಮಿಸುವ ಮಸಾಲೆ ನಿಮ್ಮ ಬಾಯಲ್ಲಿ ಖಂಡಿತ ನೀರೂರಿಸುತ್ತದೆ.

Low Fat Desi Chicken Masala Recipe

ಬೇಕಾಗುವ ಸಾಮಾಗ್ರಿಗಳು

ಚಿಕನ್- 1 ಕೆ.ಜಿ(ಮೀಡಿಯಂ ಗಾತ್ರಕ್ಕೆ ಕತ್ತರಿಸಿಕೊಳ್ಳಿ)
ಕಡಿಮೆ ಕೊಬ್ಬಿನ ಯೋಗರ್ಟ್- 1ಕಪ್
ಈರುಳ್ಳಿ ಪೇಸ್ಟ್- 1 ಟೀಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1 ಟೀಚಮಚ
ಹಸಿಮೆಣಸಿನಕಾಯಿ ಪೇಸ್ಟ್- 1 ಟೀಚಮಚ
ಅರಿಶಿಣ ಪುಡಿ- 1/2 ಟೀಚಮಚ
ಉಪ್ಪು- ರುಚಿಗೆ ತಕ್ಕಷ್ಟು

ಮಸಾಲೆ ತಯಾರಿಸಲು
ಈರುಳ್ಳಿ- 4
ಶುಂಠಿ- 1 ಮಧ್ಯಮ ಗಾತ್ರದ್ದು
ಬೆಳ್ಳುಳ್ಳಿ- 10 ಎಸಳು
ಅರಿಶಿಣ ಪುಡಿ- 1 ಟೀಚಮಚ
ಕೆಂಪು ಮೆಣಸಿನ ಪುಡಿ- 1 ಟೀಚಮಚ
ಧನಿಯ ಪುಡಿ- 1 ಟೀಚಮಚ
ಮೆಣಸು ಪುಡಿ- 1 ಟೀಚಮಚ
ಗರಂಮಸಾಲ ಪುಡಿ- 1 ಟೀಚಮಚ
ಜೀರಿಗೆ- 1 ಟೀಚಮಚ
ಬೇ ಲೀವ್ಸ್- 1 ಟೀಚಮಚ
ಧನಿಯ- 2 ಟೀಚಮಚ
ಸಕ್ಕರೆ- 1/2 ಟೀಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- 2 ಟೀಚಮಚ
ಬಿಸಿನೀರು- 11/2 ಕಪ್
ಕೊತ್ತಂಬರಿ ಸೊಪ್ಪು- ಸ್ವಲ್ಪ (ಕತ್ತರಿಸಿದ್ದು)

ಮಾಡುವ ವಿಧಾನ
1. ಚಿಕನ್ ತುಂಡುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ
2. ಅರಿಶಿನ ಪುಡಿ, ಹಸಿಮೆಣಸಿನಕಾಯಿ ಪೇಸ್ಟ್, ಯೋಗರ್ಟ್, ಈರುಳ್ಳಿ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ತುಂಡುಗಳಿಗೆ ಹಚ್ಚಿ 30 ನಿಮಿಷ ಇಡಿ.
3. 30 ನಿಮಿಷಗಳ ನಂತರ ಪ್ರೆಷರ್ ಕುಕ್ಕರಿನಲ್ಲಿ ಎಣ್ಣೆ ಹಾಕಿ ಕಾಯಿಸಿ. ಇದಕ್ಕೆ ಜೀರಿಗೆ, ಧನಿಯ ಮತ್ತು ಬೇ ಎಲೆಗಳನ್ನು ಹಾಕಿ ಹುರಿಯಿರಿ.
4. ನಂತರ ಜಜ್ಜಿದ ಈರುಳ್ಳಿಯನ್ನು ಹಾಕಿ ಕೆಂಪಾಗುವವರೆಗೆ 4-5 ನಿಮಿಷಗಳವರೆಗೆ ಹುರಿಯಿರಿ.
5. ನಂತರ ಒಂದೊಂದಾಗಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ, ಕೆಂಪು ಮೆಣಸಿನ ಪುಡಿ ಇವೆಲ್ಲವನ್ನು ಹಾಕಿ 2-3 ನಿಮಿಷ ಬೇಯಿಸಿ.
6. ಈಗ ಮಸಾಲೆ ಹಚ್ಚಿ ನೆನೆಸಿಟ್ಟ ಚಿಕನ್ ತುಂಡುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
7. ಜೀರಿಗೆ ಪುಡಿ, ಧನಿಯ ಪುಡಿ, ಉಪ್ಪು, ಸಕ್ಕರೆ, ಮೆಣಸು ಪುಡಿ ಇವೆಲ್ಲವನ್ನು ಸೇರಿಸಿ 7-8 ನಿಮಿಷಗಳವರೆಗೆ ಯೋಗರ್ಟ್ ಹಾಕಿ ಕುದಿಸಿ. ಯೋಗರ್ಟ್ ನಲ್ಲಿರುವ ನೀರಿನಂಶ ಆವಿಯಾಗುವವರೆಗೆ ಬೇಯಿಸಬೇಕು.
8. ಇದಕ್ಕೆ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
9. ಕುಕರ್ ಪಾತ್ರೆಯ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಮೂರು ಕೂಗುವವರೆಗೆ ಬೇಯಿಸಿ.
10. ಇದಾದ ನಂತರ ಸ್ಟೌ ಆರಿಸಿ ಆವಿ ಪೂರ್ತಿಯಾಗಿ ಹೋಗುವವರೆಗೆ ಕಾದಿದ್ದು ನಂತರ ಅದಕ್ಕೆ ಗರಂಮಸಾಲ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಹಾಕಿ.
ಚಿಕನ್ ಮಸಾಲ ಈಗ ಬಡಿಸಲು ಸಿದ್ಧ. ಇದನ್ನು ರೋಟಿ ಜೊತೆಗೆ ತಿನ್ನಲು ಚೆನ್ನಾಗಿರುತ್ತದೆ.

English summary

Low Fat Desi Chicken Masala Recipe

Chicken is the most preferred item among most non-vegetarian foodies. Naturally, there are numerous ways of preparing a chicken dish. However nowadays, with the obsession of losing weight people choose low-fat chicken recipes for all their three meals in a day.
Story first published: Tuesday, November 26, 2013, 10:23 [IST]
X
Desktop Bottom Promotion