For Quick Alerts
ALLOW NOTIFICATIONS  
For Daily Alerts

ಬರೀ 15 ನಿಮಿಷದಲ್ಲಿ ಗರಿ ಗರಿಯಾದ ಕರಿದ ಚಿಕನ್ ಖಾದ್ಯ!

|

ನಮಗೆಲ್ಲಾ ಕರಿದ ಚಿಕನ್ ಎಂದರೆ ತುಂಬಾ ಇಷ್ಟ. ಆದರೆ ಈ ಕರಿದ ಚಿಕನ್ ಅನ್ನು 15 ನಿಮಿಷದಲ್ಲಿ ನೀವು ತಯಾರಿಸಿದ್ದೀರಾ? ನಾವು ಇಲ್ಲಿ ನೀಡಿರುವ ಕರಿದ ಚಿಕನ್ ವೀಡಿಯೋ, ನಿಮಗೆ ಕೆಲವೇ ನಿಮಿಷದಲ್ಲಿ ಸಿದ್ಧಪಡಿಸಬಹುದಾದ ಕರಿದ ಚಿಕನ್ ಅನ್ನು ತಯಾರು ಮಾಡಲು ಸಹಾಯ ಮಾಡುವುದು ಖಂಡಿತ. ಹಾಗಾಗಿ ನಿಮಗೆ ಇದನ್ನು ತಯಾರಿಸಲು ಬೇಕಾಗಿರುವುದು ಸರಿಯಾದ ಸಾಮಾಗ್ರಿಗಳು ಮತ್ತು ವೇಳೆಯಾಗಿದೆ.

ರುಚಿ ರುಚಿಯಾದ ನೂಡಲ್ಸ್ ಕಟ್ಲೇಟ್ ಖಾದ್ಯ

ಕೆಲವೊಮ್ಮೆ ದಿಢೀರ್ ಎಂದು ಪ್ರತ್ಯಕ್ಷವಾಗುವ ಅತಿಥಿಗಳನ್ನು ಉಪಚರಿಸಲು ಈ ಕರಿದ ಚಿಕನ್ ನಿಮಗೆ ಸಹಾಯ ಮಾಡುತ್ತದೆ. ಸರಳ ಮತ್ತು ರುಚಿಕರವಾದ ಸಾಮಾಗ್ರಿಗಳಿಂದ ತಯಾರಿಸಬಹುದಾದ ಈ ಚಿಕನ್ ಅನ್ನು ಹದವಾಗಿ ಹುರಿದು (ಕರಿದು) ಮಸಾಲೆಗಳನ್ನು ಸೇರಿಸಿ ಇನ್ನಷ್ಟು ರುಚಿಕರವನ್ನಾಗಿ ತಯಾರಿಸಬಹುದಾಗಿದೆ. ನಿಮ್ಮ ಮಕ್ಕಳಂತೂ ಈ ಗರಿ ಗರಿ ಹುರಿದ ಚಿಕನ್ ಅನ್ನು ತಿನ್ನಲು ನಿಮ್ಮನ್ನು ಪೀಡಿಸುವುದು ಖಂಡಿತ. ಹಾಗಿದ್ದರೆ ಮತ್ತೇಕೆ ತಡ ಈ ರುಚಿಯಾದ ಚಿಕನ್ ಅನ್ನು ತಯಾರಿಸುವ ವಿಧಾನವನ್ನು ಬರೆದುಕೊಳ್ಳಿ ಮತ್ತು ಸಿದ್ಧಪಡಿಸಲು ತಯಾರಾಗಿ

<center><iframe width="100%" height="510" src="//www.youtube.com/embed/UgPhn__rwdc" frameborder="0" allowfullscreen></iframe></center>

ಸಾಮಾಗ್ರಿಗಳು:

1. ಎಲುಬು (ಬೋನ್) ಇಲ್ಲದ ಚಿಕನ್ - 250 ಗ್ರಾಮ್‌ಗಳು
2. ಶುಂಠಿ ಪೇಸ್ಟ್ - 1 ಚಮಚ
3. ಬೆಳ್ಳುಳ್ಳಿ ಪೇಸ್ಟ್ - 1 ಚಮಚ
4. ಹಸಿಮೆಣಸಿನ ಪೇಸ್ಟ್ - 1/2 ಚಮಚ
5. ಅರಶಿನ ಹುಡಿ - 1/2 ಚಮಚ
6. ಜೀರಿಗೆ ಹುಡಿ - 1 ಚಮಚ
7. ಕೊತ್ತಂಬರಿ ಹುಡಿ - 1 ಚಮಚ
8. ಗರಮ್ ಮಸಾಲಾ - 1 ಚಮಚ
9. ಉಪ್ಪು - ರುಚಿಗೆ ತಕ್ಕಷ್ಟು
10. ವಿನೇಗರ್ - 1 ಚಮಚ
11. ಮೊಟ್ಟೆ - 1
12. ಮೈದಾ - 1 ಕಪ್
13.ಎಣ್ಣೆ - 2 ಕಪ್‌ಗಳು

ಮಾಡುವ ವಿಧಾನ:

* ಶುಂಠಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನ ಪೇಸ್ಟ್‌ನೊಂದಿಗೆ ಚಿಕನ್ ಅನ್ನು ಮುಳುಗಿಸಿ

* ಹುಡಿಮಾಡಿದ ಸಾಂಬಾರು ಪದಾರ್ಥಗಳನ್ನು ಒಂದರ ಮೇಲೊಂದರಂತೆ ಜೀರಿಗೆ, ಅರಶಿನ, ಗರಮ್ ಮಸಾಲಾ ಮತ್ತು ಉಪ್ಪನ್ನು ಸೇರಿಸಿಕೊಳ್ಳಿ.

* ಚಿಕನ್‌ಗೆ 1 ಚಮಚದಷ್ಟು ವಿನೇಗರ್ ಅನ್ನು ಹಾಕಿ. ನಿಮ್ಮ ಕೈಗಳಿಂದ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

* ತದನಂತರ 2 ಗಂಟೆಗಳಷ್ಟು ಕಾಲ ಚಿಕನ್ ಅನ್ನು ಮುಳುಗಿಸಿಡಿ.

* ಚಿಕನ್ ಸಂಪೂರ್ಣವಾಗಿ ನೆನೆದ ನಂತರ, ಇದಕ್ಕೆ ಒಂದು ಮೊಟ್ಟೆಯನ್ನು ಒಡೆದು ಹಾಕಿ. ಸ್ವಲ್ಪ ಮೈದಾವನ್ನು ಚಿಕನ್ ತುಂಡುಗಳ ಮೇಲೆ ಹಾಕಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

* ಈಗ ದಪ್ಪ ತಳದ ಪಾತ್ರೆಗೆ ಎಣ್ಣೆಯನ್ನು ಹಾಕಿ ಮತ್ತು ಇದು ಬಿಸಿಯಾಗಲು ಬಿಡಿ. ಒಂದರ ಹಿಂದೆ ಮತ್ತೊಂದರಂತೆ ಚಿಕನ್ ತುಂಡುಗಳನ್ನು ಎಣ್ಣೆಗೆ ಹಾಕಿ ಮತ್ತು ಚಿಕನ್ ತುಂಡುಗಳು ಚೆನ್ನಾಗಿ ಕಂದು ಬಣ್ಣಕ್ಕೆ ಬರುವವರೆಗೆ ಎರಡೂ ಬದಿಗಳನ್ನು ಹುರಿಯಿರಿ.

* ಇನ್ನು ಕರಿದ ಚಿಕನ್ ಅನ್ನು ಟಿಶ್ಯೂವಿನಲ್ಲಿ ಹಾಕಿಡಿ.

ಟೊಮೇಟೊ ಕೆಚಪ್‌ನೊಂದಿಗೆ ಈ ಕರಿದ ಚಿಕನ್ ತುಂಡುಗಳನ್ನು ಸವಿಯಲು ನೀಡಿ.

English summary

Fried Chicken Recipe In 15 Minutes: Video

We all like fried chicken. However, did you ever make fried chicken in just 15 minutes? This recipe is ideal for you to entertain unannounced guests. You can easily prepare fried chicken in 15 minutes to serve guests even if they turn up without prior intimation.
X
Desktop Bottom Promotion