Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈದ್ ಸಂಭ್ರಮಕ್ಕೆ, ಸಾಥ್ ನೀಡುವ ಸ್ವಾದಿಷ್ಟ ರೆಸಿಪಿಗಳು
ಅತಿಥಿ ಸತ್ಕಾರವನ್ನು ರುಚಿಕಟ್ಟಾದ ಆಹಾರದ ಮೂಲಕ ನೆರವೇರಿಸುವ ಪದ್ಧತಿ ಬಹಳ ಪ್ರಾಚೀನವಾದುದು. ಉತ್ತಮ ಅಡುಗೆಯನ್ನು ಯಾರೇ ಮಾಡಲಿ, ಇದನ್ನು ವಿಶ್ವವೇ ಸ್ವೀಕರಿಸುತ್ತದೆ. ಇದಕ್ಕೆ ಅಪ್ಪಟ ಉದಾಹರಣೆ ಎಂದರೆ ಬಿರಿಯಾನಿ. ಮೊಗಲರ ಕಾಲದಲ್ಲಿ ಕೇವಲ ರಾಜಮಹಾರಾಜರಿಗೆ ಮಾತ್ರ ಮೀಸಲಾಗಿದ್ದು ಈ ಬಿರಿಯಾನಿ ಇಂದು ವಿಶ್ವವ್ಯಾಪಿಯಾಗಿದ್ದು ಸಸ್ಯಾಹಾರಿಗಳಿಗೂ ಸೂಕ್ತವಾದ ತರಕಾರಿಯ ಬಿರಿಯಾನಿ ಇಂದು ಲಭ್ಯವಿದೆ. ಎಲ್ಲರೊಡನೆ ಹಂಚಿಕೊಂಡು ತಿನ್ನುವ ಸಂಭ್ರಮವನ್ನು ರುಚಿಯಾದ ಅಡುಗೆ ಇನ್ನಷ್ಟು ಹೆಚ್ಚಿಸುತ್ತದೆ.
ಮುಸ್ಲಿಮರಿಗೆ ಪವಿತ್ರವಾದ ಎರಡು ಹಬ್ಬಗಳಲ್ಲೊಂದಾದ ಈದ್-ಉಲ್-ಫಿತರ್ ಆಚರಿಸಲು ಈಗಾಗಲೇ ಮುಸ್ಲಿಂ ಬಾಂಧವರ ಮನೆಯಲ್ಲಿ ತಯಾರಿ ಶುರುವಾಗಿ ಬಿಟ್ಟಿದೆ. ಈ ಸಂಭ್ರಮದ ಕ್ಷಣಗಳನ್ನು ಸ್ವಾದಿಷ್ಟ ಭೋಜನವಿಲ್ಲದೇ ಆಚರಿಸುವುದು ಹೇಗೆ? ಇದುವರೆಗೆ ನಿಮ್ಮ ಮನೆಯಲ್ಲಿ ಸಾಂಪ್ರಾದಾಯಿಕವಾಗಿ ತಯಾರಿಸಿಕೊಂಡು ಬರುತ್ತಿದ್ದ ಒಂದೇ ರೀತಿಯ ಅಡುಗೆಯನ್ನು ಈ ವರ್ಷ ಕೊಂಚ ಬದಲಿಸಿ ಭಾರತದ ಇತರ ಪ್ರಾಂತಗಳಲ್ಲಿನ ಜನರು ಸಾಂಪ್ರಾದಾಯಿಕವಾಗಿ ಆಚರಿಸಿಕೊಂದು ಬರುತ್ತಿರುವ ಅಡುಗೆಯನ್ನು ಮಾಡುವ ಮೂಲಕ ಆಚರಿಸಿದರೆ ಹೇಗೆ? ಅಂತೆಯೇ ನಿಮ್ಮ ಮನೆಯ ಅಡುಗೆಯನ್ನೂ ಬೇರೆ ಮನೆಯಲ್ಲಿ ತಯಾರಿಸಿದರೆ ಇದರಿಂದ ಹಂಚಿಕೊಳ್ಳಬಹುದಾದ ಸಂತೋಷಕ್ಕೆ ಎಣೆಯೇ ಇಲ್ಲ!
ಬನ್ನಿ, ಇಂತಹ ಕೆಲವು ಸ್ವಾದಿಷ್ಟ ಮಾಂಸಾಹಾರಿ ಅಡುಗೆಗಳನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ಹಂಚಿಕೊಳ್ಳಲು ಹರ್ಷಿಸುತ್ತದೆ. ಪ್ರತಿಯೊಂದೂ ತನ್ನ ಪ್ರಾಂತದ ಖ್ಯಾತ ಖಾದ್ಯವಾಗಿದ್ದು ಒಂದಕ್ಕಿಂದ ಇನ್ನೊಂದು ಭಿನ್ನವಾಗಿದ್ದರೂ ಪ್ರತಿ ಅಡುಗೆಯ ರುಚಿ ಮಾತ್ರ ಎಲ್ಲರೂ ಒಪ್ಪಿಕೊಳ್ಳುವಂತಿದೆ. ಬನ್ನಿ, ಭಾರತದ ಈ ರುಚಿಗಳನ್ನು ಹಂಚಿಕೊಳ್ಳೋಣ, ಈದ್ ನ ಸಂಭ್ರವನ್ನು ಹೆಚ್ಚಿಸೋಣ:

ಕರ್ನಾಟಕ: ಮೀನಿನ ತಿಳಿಸಾರು
ಉತ್ತರ ಕರ್ನಾಟಕದಲ್ಲಿ ಸಾಮಾನ್ಯವಾಗಿರುವ ರಾಗಿಮುದ್ದೆಯನ್ನು ಸಾಂಬಾರು ಅಥವಾ ತಿಳಿಸಾರಿನೊಡನೆ ಬೆರೆಸಿ ಸೇವಿಸಲಾಗುತ್ತದೆ. ಆದರೆ ಮುದ್ದೆಯನ್ನು ನಮ್ಮ ಮಂಗಳೂರಿನ ಕಡೆ ಮೀನಿನ ತಿಳಿಸಾರಿನೊಂದಿಗೆ ಸೇವಿಸಲಾಗುತ್ತದೆ. ಮಂಗಳೂರು ಕಡೆ ಪ್ರಾರಂಭವಾಗಿದ್ದರೂ ಇದರ ರುಚಿಯನ್ನು ಕಂಡ ಇತರರೂ ತಮ್ಮ ಊರುಗಳಲ್ಲಿ ಮೀನಿನ ತಿಳಿಸಾರು ರಾಗಿಮುದ್ದೆ ತಿನ್ನಲು ಪ್ರಾರಂಭಿಸಿದ ಕಾರಣ ಇಂದು ಇಡಿಯ ಕರ್ನಾಟಕದಲ್ಲಿ ಈ ಖಾದ್ಯ ಜನಪ್ರಿಯವಾಗಿದೆ. ಮೀನು ಸಾರು- ಮಂಗಳೂರು ಶೈಲಿಯ ಅಡುಗೆ

ಆಂಧ್ರ ಪ್ರದೇಶ - ದಮ್ ಬಿರಿಯಾನಿ
ಸಸ್ಯಾಹಾರ ಊಟದಲ್ಲಿ ಹುರಿಗಡ್ಲೆಯ ಪುಡಿಯನ್ನು ಬೆರೆಸಿ ತಿನ್ನುವ ಆಂಧ್ರದ ಜನರಿಗೆ ಮಾಂಸಾಹಾರದಲ್ಲಿ ದಂ ಬಿರಿಯಾನಿಯೇ ಇಷ್ಟ. ದಂ ಎಂದು ಏಕೆ ಕರೆಯಲಾಗುತ್ತದೆ ಎಂದರೆ ಅಕ್ಕಿಯನ್ನು ಮುಕ್ಕಾಲು ಪಾಲು ನೀರಿನಲ್ಲಿ ಬೇಯಿಸಿ ಇತರ ಮಸಾಲೆಯೊಂದಿಗೆ ಉಳಿದ ಕಾಲು ಭಾಗವನ್ನು ಕೇವಲ ಹಬೆಯಲ್ಲಿ ಕೆಲವು ಘಂಟೆಗಳ ಕಾಲ ಅತಿ ಚಿಕ್ಕ ಉರಿಯಲ್ಲಿ ಬೇಯಿಸಲಾಗುತ್ತದೆ. ಈ ಅವಧಿಯಲ್ಲಿ ಅಕ್ಕಿ ಮಸಾಲೆಯ ರುಚಿಯನ್ನು ಹೀರಿಕೊಂಡು ಪೂರ್ಣವಾಗಿ ಬೆಂದಿರುತ್ತದೆ. ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬ ಒಂದೇ ಕಾರಣಕ್ಕೆ ಇದನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ತಯಾರಿಸಲಾಗುತ್ತದೆ. ಈ ಈದ್ ಕೂಡಾ ಅಂತಹ ಒಂದು ವಿಶೇಷ ಸಂದರ್ಭವಾಗಿದೆ.ಘಂ ಎನ್ನುತ್ತೆ ಹೈದರಾಬಾದ್ ದಮ್ ಬಿರಿಯಾನಿ

ಕೇರಳದ ಮಲಬಾರ್ ಶೈಲಿಯ ಚಿಕನ್ ಕರಿ
ಹತ್ತು ಹಲವು ಮಸಾಲೆ ಸಾಮಾಗ್ರಿಗಳನ್ನು ಕುಟ್ಟಿ ಹುರಿದು ಪುಡಿಮಾಡಿ ಅರೆದು ತಯಾರಿಸಿದ ವಿಶೇಷ ಮಸಾಲೆಯನ್ನು, ಈ ಚಿಕನ್ ರೆಸಿಪಿಯಲ್ಲಿ ಬಳಸುವುದರಿಂದ ಇದರ ಸ್ವಾದ ಇನ್ನಷ್ಟು ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಈ ಮಸಾಲೆ ಬಳಸಿ ತಯಾರಿಸಿದ ಕೋಳಿಸಾರು ಹಾಗೇ ಕೈ ಮೇಲೆ ಸುರಿದುಕೊಂಡು ನೆಕ್ಕುವಷ್ಟು ರುಚಿಯಾಗಿರುತ್ತದೆ. ಹಾಗಾದರೆ ಇನ್ನೇಕೆ ತಡ? ಶುರು ಹಚ್ಚಿಕೊಳ್ಳಿ!ಕೇರಳದ ಮಲಬಾರ್ ಶೈಲಿಯ ಚಿಕನ್ ಕರಿ ರೆಸಿಪಿ

ದೆಹಲಿ - ಮೊಘಲಾಯಿ ಬಿರಿಯಾನಿ
ಹಿಂದಿನ ಮೊಘಲ್ ಮಹಾರಾಜರು ವಿಶೇಷ ಸಂದರ್ಭದಲ್ಲಿ ಸೇವಿಸುತ್ತಿದ್ದ ಬಿರಿಯಾನಿಯಾಗಿದ್ದರಿಂದಲೇ ಮೊಘಲಾಯಿ ಎಂಬ ವಿಶೇಷಣವನ್ನು ಪಡೆದ ಈ ಬಿರಿಯಾನಿ ನಿಜವಾಗಿಯೂ ರುಚಿಕರವಾಗಿದ್ದು ಅತಿಥಿಗಳಿಗೆ ವಿಶೇಷ ಸತ್ಕಾರ ಪಡೆದ ಅನುಭವವಾಗುತ್ತದೆ. ಈದ್ ನ ಸಂಭ್ರವಮನ್ನು ಖಂಡಿತವಾಗಿಯೂ ಈ ಖಾದ್ಯ ಹೆಚ್ಚಿಸಲಿದೆ. ರಂಜಾನ್ ಗೆ ಮುಘಲೈ ಬಿರಿಯಾನಿ ಇಲ್ಲಿದೆ

ಗ್ರೀನ್ ಚಿಲ್ಲಿ ಚಿಕನ್ ರೆಸಿಪಿ
ಗ್ರೀನ್ ಚಿಲ್ಲಿ ಚಿಕನ್ ರೆಸಿಪಿ, ಹೆಸರೇ ಸೂಚಿಸುವಂತೆ, ಈ ರೆಸಿಪಿಯನ್ನು ತುಂಬಾ ಹಸಿ ಮೆಣಸಿನಕಾಯಿಗಳನ್ನು ಬಳಸಲಾಗುತ್ತದೆ. ಅಪ್ಯಾಯಮಾನವಾದ ಹಸಿ ಮೆಣಸಿನಕಾಯಿಗಳ ಸುವಾಸನೆಯು ಈ ಗ್ರೀನ್ ಚಿಲ್ಲಿ ಚಿಕನ್ ಖಾದ್ಯವನ್ನು ಮೋಡಿ ಮಾಡುವ ಸ್ವಾದಕ್ಕೆ ತೆಗೆದುಕೊಂಡು ಹೋಗುತ್ತದೆ, ಇದೇ ಈ ಚಿಕನ್ ರೆಸಿಪಿಯ ವಿಶೇಷತೆ. ರಂಜಾನ್ ಹಬ್ಬದ ಸ್ಪೆಷಲ್: ಗ್ರೀನ್ ಚಿಲ್ಲಿ ಚಿಕನ್ ರೆಸಿಪಿ



Click it and Unblock the Notifications
