For Quick Alerts
ALLOW NOTIFICATIONS  
For Daily Alerts

ಖಾರ ಪ್ರಿಯರಿಗಾಗಿ ಚಿಕನ್ ಚಿಲ್ಲಿ ರೆಸಿಪಿ

|

ಚಿಕನ್ ನಲ್ಲಿ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಆದ್ದರಿಂದಲೇ ಚಿಕನ್ ರುಚಿ ಒಮ್ಮೆ ನೋಡಿದವರು ಅದನ್ನು ತಿನ್ನುವುದನ್ನು ಬಿಡುವುದು ತುಂಬಾ ಕಡಿಮೆ. ಚಿಕನ್ ಅನ್ನು ನಮಗೆ ಇಷ್ಟ ಬಂದ ರುಚಿಯಲ್ಲಿ ತಯಾರಿಸಬಹುದು. ಮನೆಯಲ್ಲಿ ತಯಾರಿಸುವುದಾದರೆ ಚಿಕನ್ ತಂದೂರಿಯಂತಹ ಅಡುಗೆ ಸ್ವಲ್ಪ ಶ್ರಮ ಅನ್ನಿಸಬಹುದು. ಆದರೆ ಚಿಕನ್ ರೋಸ್ಟ್, ಚಿಕನ್ ಚಿಲ್ಲಿ, ಗ್ರೇವಿ ಚಿಕನ್ ಇಂತಹ ಪದಾರ್ಥಗಳನ್ನು ಸುಲಭವಾಗಿ ತಯಾರಿಸಬಹುದು.

ಮಾಂಸಾಹಾರ ತಿನ್ನುವವರಲ್ಲಿ ಹೆಚ್ಚಿನವರು ಅಡುಗೆ ಖಾರವಾಗಿರುವುದನ್ನು ಇಷ್ಟಪಡುತ್ತಾರೆ. ಖಾರವಾಗಿ ಮಾಡಿದ ಅಡುಗೆಯನ್ನು ತಿನ್ನಲು ತುಂಬಾ ರುಚಿ ಅನ್ನಿಸುವುದು. ಖಾರದ ಅಡುಗೆ ಬಯಸುವ ಚಿಕನ್ ಪ್ರಿಯರಿಗಾಗಿ ಚಿಕನ್ ಚಿಲ್ಲಿ ರೆಸಿಪಿ ನೀಡಲಾಗಿದೆ. ಅಲ್ಲದೆ ಈ ಅಡುಗೆಯನ್ನು ಸುಲಭವಾಗಿ ತಯಾರಿಸಬಹುದಾಗಿದೆ.

Chicken Chilli

ಬೇಕಾಗುವ ಸಾಮಾಗ್ರಿಗಳು:

* 1 ಕೆಜಿ ಕೋಳಿ ( ಬೋನ್ ಲೆಸ್ )
* 6 ಚಮಚ ಎಣ್ಣೆ
* 3-5 ಈರುಳ್ಳಿ
* 12-15 ಹಸಿಮೆಣಸಿನಕಾಯಿ
* 4 ಚಮಚ ಬೆಳ್ಳುಳ್ಳಿ - ಶುಂಠಿ ಪೇಸ್ಟ್
* ಸ್ವಲ್ಪ ಕರಿಬೇವಿನ ಎಲೆ
* 1/4 ಚಮಚ ಅರಿಶಿಣ ಪುಡಿ
* 2 ಚಮಚ ಕೊತ್ತಂಬರಿ ಪುಡಿ
* 2 ಚಮಚ ಮೆಣಸಿನ ಪುಡಿ
* 2 ಚಮಚ ನಿಂಬೆ ಹಣ್ಣಿನ ರಸ
* ಸ್ವಲ್ಪ ಕೊತ್ತಂಬರಿ ಸೊಪ್ಪು
* ರುಚಿಗೆ ಉಪ್ಪು

ತಯಾರಿಸುವ ವಿಧಾನ:

1. ಚಿಕನ್ ಅನ್ನು ಸಾಧಾರಣ ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ತೊಳೆಯಬೇಕು.

2. ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಉದ್ದುದ್ದವಾಗಿ ಕತ್ತರಿಸಿಟ್ಟುಕೊಳ್ಳಬೇಕು.

3. ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಬೇಕು

4. ಈಗ ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಈರುಳ್ಳಿ, ಕರಿಬೇವಿನ ಎಲೆ, ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು.

5.
ನಂತರ ಅರಿಶಿಣ ಮತ್ತು ಕೊತ್ತಬರಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಈಗ ಚಿಕನ್ ಅನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ 2-3 ನಿಮಿಷ ಬಿಸಿ ಮಾಡಿ, ನಂತರ ರುಚಿಗೆ ತಕ್ಕ ಉಪ್ಪು ಹಾಗೂ 1/4 ಗ್ಲಾಸ್ ನೀರು ಹಾಕಿ ಬೇಯಿಸಬೇಕು. ಆಗಾಗ ಸೌಟ್ ನಿಂದ ತಿರುಗಿಸುತ್ತಾ ಇರಬೇಕು. ನೀರು ಸಂಪೂರ್ಣ ಬತ್ತುವವರೆಗೆ ಬೇಯಿಸಬೇಕು.

6. ಬೆಂದ ನಂತರ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಉರಿಯಿಂದ ಇಳಿಸುವ ಮೊದಲು ಉಪ್ಪು ನೋಡಬೇಕು.

7. ಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ ನೀರು ಇಂಗುವ ವರೆಗೂ ಕೆದಕಿ.

8. ನಂತರ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹಣ್ಣಿನ ರಸವನ್ನು ಹಾಕಿ ಬೇಯಿಸಿ.

ಬೆಂದ ಮೇಲೆ ಉಪ್ಪು ರುಚಿಗೆ ತಕ್ಕ ಇದೆಯೇ ಎಂದು ನೋಡಿ ನಂತರ ಉರಿಯಿಂದ ಇಳಿಸಿ. ಇದು ಖಾರವಾಗಿದ್ದು, ಬಿಸಿ-ಬಿಸಿಯಾಗಿ ತಿನ್ನಲು ತುಂಬಾ ರುಚಿಯಾಗಿರುತ್ತದೆ.

English summary

Chicken Chili Recipe | Variety Of Non Veg Recipe | ಚಿಕನ್ ಚಿಲ್ಲಿ ರೆಸಿಪಿ | ಅನೇಕ ಬಗೆಯ ಮಾಂಸಾಹಾರದ ಅಡುಗೆ

You can prepare variety of food from chicken like chicken roast, chicken gravy... so on. Most of the non vegetarian would like to eat spicy food. Here is a spicy chicken chili recipe.
Story first published: Saturday, June 2, 2012, 13:22 [IST]
X
Desktop Bottom Promotion