For Quick Alerts
ALLOW NOTIFICATIONS  
For Daily Alerts

ಚಿಕನ್ ಬರ್ಗರ್ ರೆಸಿಪಿ

|

ಚಿಕನ್ ಬರ್ಗರ್ ಅಂದರೆ ನಮ್ಮ ತಲೆಯಲ್ಲಿ ಬರುವುದು ಇಂಟರ್ ನ್ಯಾಷನಲ್ ಬ್ರ್ಯಾಂಡ್ ನ ಕೆ, ಎಫ್, ಸಿ, ಮೆಕ್ ಡೊನಾಲ್ಡ್ ಸೋ ಅಂಡ್ ಸೋ. ಆದರೆ ಮನೆಯಲ್ಲಿಯೇ ಬರ್ಗರ್ ತಯಾರಿಸಬಹುದೇ ಎಂದು ಯೋಚಿಸಿರುವುದಿಲ್ಲ ಅಲ್ಲವೇ? ನೀವು ಕೂಡ ಚಿಕನ್ ಬರ್ಗರ್ ಮಾಡಬಹುದು. ದೇಶೀ ರುಚಿಯಲ್ಲಿ ಸವಿರುಚಿಯ ಬರ್ಗರ್ ಮಾಡಬಹುದು.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Chicken Burger Recipe

ಬೇಕಾಗುವ ಸಾಮಾಗ್ರಿಗಳು
ಚಿಕನ್ ಮಿನ್ಸ್ 200 ಗ್ರಾಂ
ಬರ್ಗರ್ ಬನ್ಸ್ 4
ಈರುಳ್ಳಿ 2- ಸಾಧಾರಣ ಗಾತ್ರದ್ದು
ದೊಡ್ಡ ಗಾತ್ರದ ಈರುಳ್ಳಿ 1
ಹಸಿ ಮೆಣಸಿನಕಾಯಿ 2
ಕರಿ ಮೆಣಸಿನ ಪುಡಿ 1/4 ಚಮಚ
ಖಾರದ ಪುಡಿ ಅರ್ಧ ಚಮಚ
ಚಿಕ್ಕದಾಗಿ ಕತ್ತರಿಸಿದ ಬೆಳ್ಳುಳ್ಳಿ 1 ಚಮಚ
ಸೋಯಾ ಸಾಸ್ ಒಂದೂವರೆ ಚಮಚ
ಕೆಂಪು ಮೆಣಸಿನ ಸಾಸ್ ಮೂರುವರೆ ಚಮಚ
ಮಯೋನೈಸ್ 5 ಚಮಚ
ಮೊಟ್ಟೆ 1
ಎಣ್ಣೆ 2-3 ಚಮಚ
ರುಚಿಗೆ ತಕ್ಕ ಉಪ್ಪು
ಬೆಣ್ಣೆ 2 ಚಮಚ
ಫ್ರಿಜ್ ನಲ್ಲಿಟ್ಟ ಲೆಟ್ಯೂಸ್ ಅಥವಾ ಕ್ಯಾಬೇಜ್ (ಸ್ವಲ್ಪ)
ಚೀಸ್ ಚೂರು 4

ತಯಾರಿಸುವ ವಿಧಾನ

* ಮಿನ್ಸ್ ಮಾಡಿದ ಚಿಕನ್(ಖೀಮಾ ಚಿಕನ್) ಅನ್ನು ಬಟ್ಟಲಿಗೆ ಹಾಕಿ, ಅದಕ್ಕೆ ಈರುಳ್ಳಿ, ಹಸಿ ಮೆಣಸಿನಕಾಯಿ, ತರಿ ತರಿಯಾಗಿ ಪುಡಿ ಮಾಡಿದ ಕರಿ ಮೆಣಸು, ಖಾರದ ಪುಡಿ, ಕತ್ತರಿಸಿದ ಹಸಿ ಮೆಣಸಿನಕಾಯಿ, ಶುಂಠಿ, ಒಂದೂವರೆ ಚಮಚ ಸೋಯಾ ಸಾಸ್, ಒಂದೂವರೆ ಚಮಚ ಚಿಲ್ಲಿ ಸಾಸ್, 1 ಚಮಚ ಮಯೋನೈಸ್, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷ ಫ್ರಿಜ್ ನಲ್ಲಿ ಇಡಿ.

* ಮೊಟ್ಟೆಯನ್ನು ಚೆನ್ನಾಗಿ ಕದಡಿ.

* ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ, ಅದು ಬಿಸಿಯಾದಾಗ ಮಿಕ್ಸ್ ಮಾಡಿಟ್ಟ ಚಿಕನ್ ಅನ್ನು ಉಂಡೆ ಕಟ್ಟಿ ಅದನ್ನು ಅಂಗೈ ಅಗಲಕ್ಕೆ ವೃತ್ತಾಕಾರವಾಗಿ ತಟ್ಟಿ, ಮೊಟ್ಟೆಯಲ್ಲಿ ಅದ್ದಿ ಎಣ್ಣೆಯಲ್ಲಿ ಹಾಕಿ ಅದರ ಮೇಲೆ ವೃತ್ತಾಕಾರವಾಗಿ ಕತ್ತರಿಸಿ ಈರುಳ್ಳಿ, ಸೋಯಾ ಸಾಸ್ ಮತ್ತು ಉಳಿದ ಒಂದೂವರೆ ಚಮಚ ರೆಡ್ ಚಿಲ್ಲಿ ಸಾಸ್ ಹಾಕಿ ಬೇಯಿಸಿ, ನಂತರ ಮೆಲ್ಲನೆ ಮಗುಚಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಬೇಯಿಸಿ, ನಂತರ ಒಂದು ಪ್ಲೇಟ್ ಗೆ ಹಾಕಿ.

* ಈಗ ಬನ್ ಅನ್ನು ಎರಡು ಸಮ ಭಾಗವಾಗಿ ಕತ್ತರಿಸಿ, ಈಗ ಚಿಕನ್ ಫ್ರೈ ಮಾಡಿದ ಪ್ಯಾನ್ ಗೆ ಬೆಣ್ಣೆಯನ್ನು ಸವರಿ ಅದರಲ್ಲಿ ಬನ್ ಹಾಕಿ ಸ್ವಲ್ಪ ಟೋಸ್ಟ್ ಮಾಡಿ.

* ಬನ್ ಸ್ವಲ್ಪ ಗೋಲ್ಡನ್ ಬಣ್ಣಕ್ಕೆ ತಿರುಗುವಾಗ ಬನ್ ತೆಗೆದು ಒಂದು ಬನ್ ನ ನಲ್ಲಿ ಸ್ವಲ್ಪ ಕ್ಯಾಬೇಜ್ ಅಥವಾ ಲೆಟ್ಯೂಸೆ ಹಾಕಿ, ಅದರ ಮೇಲೆ ಫ್ರೈ ಮಾಡಿದ ಚಿಕನ್ ಇಟ್ಟು, ಈರುಳ್ಳಿ ಹಾಕಿ, ಅದರ ಮೇಲೆ ಮತ್ತೆ ಸ್ವಲ್ಪ ಲೆಟ್ಯೂಸೆ ಹಾಕಿ, ಮಯೋನೈಸ್, ಚೀಸ್ ಹಾಕಿ ಮತ್ತೊಂದು ಬನ್ ನಿಂದ ಕವರ್ ಮಾಡಿ. ಇಷ್ಟು ಮಾಡಿದರೆ ಚಿಕನ್ ಬರ್ಗರ್ ರೆಡಿ.

ಇದನ್ನು ಟೊಮೆಟೊ ಸಾಸ್ ನ ಜೊತೆ ಸವಿಯಿರಿ.

English summary

Chicken Burger Recipe

Have you ever thought to prepare to chicken burger yourself? You want to prepare Chicken Burger Here is the recipe.
X
Desktop Bottom Promotion