For Quick Alerts
ALLOW NOTIFICATIONS  
For Daily Alerts

ಟೊಮೆಟೊದಲ್ಲಿರುವ ಆಮ್ಲವನ್ನು ಕಡಿಮೆ ಮಾಡುವುದು ಹೇಗೆ?

By ಲೇಖಕ
|

ಟೊಮೆಟೊ ನಿಮ್ಮ ಇಷ್ಟದ ತಿನಿಸುಗಳಿಗೆ ಅದ್ಭುತವಾದ ಸ್ವಾದ ಮತ್ತು ಪೋಷಕಾಂಶಗಳನ್ನು ನೀಡುತ್ತದೆ. ಟೊಮೆಟೊದಲ್ಲಿರುವ ಆಮ್ಲ ಅಥವಾ ಹುಳಿಯ ಅಂಶವನ್ನು ಕಡಿಮೆಗೊಳಿಸಿದರೆ ಸ್ವಾದ ಮತ್ತಷ್ಟು ಮೃದುವಾಗುತ್ತದೆ ಮತ್ತು ಅಲ್ಸರ್ ಗಳಿಂದ ಬಳಲುತ್ತಿರುವವರು, ಆಮ್ಲೀಯ(ಹುಳಿಯ) ಪದಾರ್ಥ ತಿನ್ನಲು ಕಷ್ಟವಾದವರು ಆರಾಮವಾಗಿ ಊಟವನ್ನು ಸವಿಯಬಹುದು.

How to Reduce Acid in Tomato Dishes

ಹಂತಗಳು:

1. ಟೊಮೆಟೊ ಹಣ್ಣಿನ ಮೇಲಿನ ಸಿಪ್ಪೆಯನ್ನು ತೆಗೆಯಿರಿ (ಆಯ್ಕೆ ನಿಮ್ಮದೇ). ತಾಜಾ ಟೊಮೆಟೊಗಳನ್ನು ಕುದಿಯುವ ನೀರಿನಲ್ಲಿ ಕೆಲವು ನಿಮಿಷ ಇಟ್ಟು ಕಳೆಗುಂದುವಂತೆ ಮಾಡಿ. ಮುದುಡಿದ ಟೊಮೆಟೊಗಳನ್ನು ಬಿಸಿ ನೀರಿನಿಂದ ಸಟ್ಟುಗದಲ್ಲಿ ತೆಗೆದು ತಂಪಾದ ನೀರು ತುಂಬಿದ ತಟ್ಟೆಯಲ್ಲಿ ಹಾಕಿ. ಸಡಿಲವಾದ ಸಿಪ್ಪೆಯನ್ನು ಸುಲಿಯಿರಿ.

2. ಟೊಮೆಟೊ ಹಣ್ಣುಗಳನ್ನು ಭಾಗಗಳಾಗಿ ಕತ್ತರಿಸಿ.

3. ಇವುಗಳನ್ನು ಒಂದು ಹರಿವಾಣದಲ್ಲಿಟ್ಟು ಮಧ್ಯಮ ಬಿಸಿಯಲ್ಲಿ ಸುಮಾರು 15 ನಿಮಿಷಗಳ ಕಾಲ ಹಾಗೆಯೇ ಇಡಿ. ಟೊಮೆಟೊ ಬೆಚ್ಚಗಿದ್ದರೆ ಆಮ್ಲದ ಅಂಶ ಕಡಿಮೆಗೊಳಿಸುವ ಕೆಲಸ ಹೆಚ್ಚು ಸುಲಭ.

4. ಬಿಸಿಯಿಂದ ಹೊರ ತೆಗೆದು ಪ್ರತಿ ಆರು ಮಧ್ಯಮ ಗಾತ್ರದ ಟೊಮೆಟೊಗಳಿಗೆ ಸರಿಯಾಗಿ 1/4 ಟೀ ಚಮಚೆಯಷ್ಟು ಅಡುಗೆ ಸೋಡಾ ಹಾಕಿ ಕಲಸಿರಿ.

5. ಗುಳ್ಳೆಗಳು ಬರುವುದು ನಿಂತ ತಕ್ಷಣ, ಪದಾರ್ಥಕ್ಕೆ ಬೇಕಾದ ಸಾಂಬಾರು ಪದಾರ್ಥಗಳಿಗೆ ಸೇರಿಸಿ.

ಸಲಹೆಗಳು:

ಕ್ಯಾನ್ ಗಳಲ್ಲಿ ಮತ್ತು ಭರಣಿಗಳಲ್ಲಿ ತುಂಬಿರುವ ಟೊಮೆಟೊಗಳು ತಾಜಾ ಹಣ್ಣಾದ ಟೊಮೆಟೊಗಳಿಗಿಂತ ಹೆಚ್ಚು ಆಮ್ಲದಂಶವನ್ನು ಹೊಂದಿರುತ್ತವೆ. ಇವುಗಳನ್ನು ಸುರಕ್ಷಿತವಾಗಿಡಲು ಆಮ್ಲದ ಅಂಶ ಅತ್ಯವಶ್ಯಕ ಗುಣ.

ಕಡಿಮೆ ಮತ್ತು ಮಧ್ಯಮ ಹುಳಿಯಂಶವಿರುವ ಟೊಮೆಟೊ ವಿಧಗಳನ್ನು ಹುಡುಕಿ ತೆಗೆಯಿರಿ.

ಹಣ್ಣಾಗದ ಟೊಮೆಟೊಗಳಲ್ಲಿ ಹೆಚ್ಚಿನ ಆಮ್ಲೀಯ ಅಂಶವಿರುತ್ತದೆ. ಹೀಗಾಗಿ ಪೂರ್ತಿ ಹಣ್ಣಾದ ಟೊಮೆಟೊಗಳನ್ನೇ ಆರಿಸಿ.

ಬೇಯಿಸಿದ ಟೊಮೆಟೊಗಳನ್ನು ಗಟ್ಟಿಗೊಳಿಸಿ ನಂತರ ಉಪಯೋಗಿಸಬಹುದು.

ಪದಾರ್ಧಕ್ಕೆ ಬೂದು ಸಕ್ಕರೆ(ಬ್ರೌನ್ ಶುಗರ್) ಸೇರಿಸಿದರೂ ಹುಳಿಯ ಅಂಶ ಕಡಿಮೆಯಾಗುತ್ತದೆ.

1/4 ಟೀ ಚಮಚೆಯಷ್ಟು ನಟ್ ಮೆಗ್ ಅಥವಾ ಸಿನ್ನಮೋನ್ ಅನ್ನು ಸಾಸ್ ಅಥವಾ ಮೆಣಸಿನೊಂದಿಗೆ ಸೇರಿಸಿದರೆ ಆಮ್ಲದಂಶ ಕುಂಠಿತಗೊಳಿಸಬಹುದು.

ಅರ್ಧ ಗಂಟೆಯ ಕಾಲ ಟೊಮ್ಯಾಟೋ ಪದಾರ್ಥಕ್ಕೆ ಒಂದು ಕ್ಯಾರೇಟ್ ಅಥವಾ ಕಾಲು ಭಾಗ ಬಟಾಟೆಯನ್ನಿಟ್ಟು ನಂತರ ತೆಗೆಯಬೇಕು. ಇದನ್ನು ಹೊರತೆಗೆದಾಗ ವಿನೆಗರ್ ಅಥವಾ ಹುಳಿಯ ಅಂಶವನ್ನು ಹೀರಿಕೊಂಡು ಉಪ್ಪಿನಕಾಯಿಯ ರುಚಿ ಹೊಂದಿರುತ್ತದೆ.

ಅಥವಾ ಇದಕ್ಕೆ ಪರ್ಯಾಯವಾಗಿ 1/4 ಟೀ ಚಮಚೆಯಷ್ಟು ತುರಿದ ಕ್ಯಾರೇಟ್ ಅಥವಾ ಬಟಾಟೆಯನ್ನು ಪದಾರ್ಥಕ್ಕೆ ಸೇರಿಸಿ. ಗ್ಯಾಸ್ಟ್ರಿಕ್ ಅನ್ನು ಟೊಮ್ಯಾಟೋ ಸಾಸ್ ಗೆ ಸೇರಿಸುವುದು ಆಮ್ಲೀಯತೆ ಕಡಿಮೆ ಮಾಡಲು ಉತ್ತಮ ಉಪಾಯ. ರೈಸ್ ವೈನ್ ವಿನೇಗರ್ ನಲ್ಲಿ ಸೈರಪ್ ರೂಪಕ್ಕೆ ತಯಾರಾಗುವವರೆಗೆ ಸಕ್ಕರೆಯನ್ನು ಕರಗಿಸಿ. ಇದಕ್ಕೆ ಸಾಸ್ ಅಥವಾ ಬೇಯಿಸಿದ ಟೊಮೆಟೊ ಸೇರಿಸಿ.

ಎಚ್ಚರಿಕೆಗಳು:

ಬಿಸಿ ಟೊಮೆಟೊ ಗಳನ್ನು ಕೈ ಸುಟ್ಟುಕೊಳ್ಳದಂತೆ ಎಚ್ಚರಿಕೆಯಿಂದ ತೆಗೆಯಿರಿ.

ಲೋ ಸೋಡಿಯಂ ಪಥ್ಯದಲ್ಲಿರುವ ಮಂದಿ ಅಡುಗೆ ಸೋಡದಲ್ಲಿರುವ ಹೈ ಸೋಡಿಯಂ ಅಂಶದ ಬಗ್ಗೆ ಗಮನ ಹರಿಸಿ.

English summary

How to Reduce Acid in Tomato Dishes | ಟೊಮೆಟೊ ಭಕ್ಷ್ಯಗಳಲ್ಲಿ ಆಮ್ಲದ ಅಂಶ ಕಡಿಮೆ ಮಾಡುವುದು ಹೇಗೆ?

Tomatoes can add wonderful flavor and nutrition to your favorite recipes. However, reducing their acid content will mellow the flavor, and make the meal easier on people who have a low tolerance for acidic foods, such as those with ulcers.
X
Desktop Bottom Promotion