For Quick Alerts
ALLOW NOTIFICATIONS  
For Daily Alerts

ಮೊಟ್ಟೆ ಬೇಯಿಸುವುದು ಹೇಗೆ?

|

ಮೊಟ್ಟೆ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದ ಬೆಳವಣೆಗೆಗೆ ಅಗತ್ಯವಾದ ಎ, ಡಿ, ಇ ವಿಟಾಮಿನ್‌ಗಳನ್ನು ಇದು ಪೂರೈಸುತ್ತದೆ. ದೇಹಕ್ಕೆ ಅಗತ್ಯವಾದ ಲ್ಯಾಕ್ಟಿನ್, ಕಬ್ಬಿಣಾಂಶ,ಸಲ್ಫರ‍್ ಮತ್ತು ಪ್ರೋಟೀನ್‌ಗಳನ್ನು ಇತರೆಲ್ಲಾ ಆಹಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತದೆ. ಬೇಯಿಸಿದ ಮೊಟ್ಟೆಯನ್ನು ಊಟಕ್ಕೆ ಪರ್ಯಾಯವಾಗಿ ಬಳಸಬಹುದು. ನೀವು ಬಯಸಿದಲ್ಲಿ ಮೆತ್ತನೆ ಹಾಗೂ ಗಟ್ಟಿಯಾಗಿ ಕೂಡ ಬೇಯಿಸಿಕೊಳ್ಳಬಹುದು.

ಮೊಟ್ಟೆ ಬೇಯಿಸುವುದು ನೀವಂದುಕೊಂಡಷ್ಟು ಸುಲಭವಲ್ಲ. ಇದೊಂದು ಕಲೆ. ಎಷ್ಟೋ ಜನ ನೀರಿಟ್ಟರಾಯ್ತು... ಒಲೆ ಹೊತ್ತಿಸಿದರಾಯ್ತು... ಮೊಟ್ಟೆಯನ್ನು ಆ ನೀರಿನಲ್ಲಿಟ್ಟು ಐದೋ ಹತ್ತೋ ನಿಮಿಷಕ್ಕೆ ಇಳಿಸಿ, ತಣಿಸಿಕೊಂಡು ತಿನ್ನಬಹುದೆಂದು ಅಂದುಕೊಳ್ಳುತ್ತಾರೆ. ಆದರೆ ಎಣಿಸಿಕೊಂಡಷ್ಟು ಸುಲಭವಲ್ಲ ಮೊಟ್ಟೆ ಬೇಯಿಸುವುದು ಎಂಬುದು ನೆನಪಿರಲಿ.

How To Boil Eggs

ಮೊಟ್ಟೆ ಬೇಯಿಸುವ ಹಂತಗಳು:

ಮೊದಲು ನಿಮಗೆ ಯಾವ ತರದ ಬೇಯಿಸಿದ ಮೊಟ್ಟೆ ಬೇಕೆಂಬುದನ್ನು ಖಚಿತ ಮಾಡಿಕೊಳ್ಳಿ. ಕೆಲವರು ಮೃದುವಾಗಿ ಬೇಯಿಸಿದ ಮೊಟ್ಟೆಯನ್ನು ಇಷ್ಟ ಪಡುತ್ತಾರೆ. ಇನ್ನು ಕೆಲವರಿಗೆ ಬೇಯಿಸಿದ ಗಟ್ಟಿ ಮೊಟ್ಟೆಗಳೆಂದರೆ ಪ್ರೀತಿ. ಒಮ್ಮೊಮ್ಮೆಯಂತೂ ಮನೆಯಲ್ಲಿರುವ ಒಬ್ಬೊಬ್ಬರಿಗೂ ಒಂದೊಂದು ತರದ ಮೊಟ್ಟೆಗಳು ಬೇಕು. ಇಂಥ ಸಂದರ್ಭದಲ್ಲಿ ಪ್ರಯೋಗಕ್ಕೇ ತುಂಬಾ ಸಮಯ ಹಿಡಿಯುತ್ತದೆ. ಇಲ್ಲಿವೆ ಇಂಥ ನಿಮ್ಮಿಚ್ಚೆಯಂತೆ ಮೊಟ್ಟೆ ಬೇಯಿಸಿಕೊಳ್ಳುವ ಕೆಲವು ಸುಲಭ ಹಂತಗಳು.

1. ನಿಮ್ಮ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ. ಹಲವು ಶತಮಾನಗಳಷ್ಟು ಹಿಂದಿನಿಂದಲೂ ವಿವಿಧ ರೀತಿಯಲ್ಲಿ ಮೊಟ್ಟೆ ಬೇಯಿಸುವ ಬಗ್ಗೆ ಪ್ರಯೋಗಗಳು ನಡೆಯುತ್ತಲೇ ಬಂದಿವೆ. ಹಲವು ಪ್ರಯತ್ನ, ಹಲವು ತಪ್ಪುಗಳ ಮೂಲಕವೇ ಸಿದ್ಧಿಸಿದ ಕಲೆ ಇದು. ಈಗಾಗಲೇ ನೀವು ಯಾವುದೋ ವಿಧಾನಕ್ಕೆ ಅಂಟಿಕೊಂಡಿದ್ದರೆ ಈ ಟಿಪ್ಸುಗಳನ್ನೂ ಒಮ್ಮೆ ಪ್ರಯತ್ನಿಸಿ. ಪ್ರತಿಯೊಂದು ವಿಧಾನದಲ್ಲಿ ಬೇಯಿಸಿದಾಗಲೂ, ಅದರಲ್ಲಿರುವ ಭಿನ್ನತೆಯನ್ನು ಅರಿತುಕೊಳ್ಳಿ. ಮತ್ತು ಪ್ರತೀ ಸಲವೂ ನೀವು ಬಯಸಿದ ಫಲಿತಾಂಶವನ್ನು ಪಡೆಯಿರಿ.

ನಿಮ್ಮ ಬಳಿ ಸಮಯ ಕಡಿಮೆ ಇದ್ದ ಸಂದರ್ಭದಲ್ಲಿ ಮೊಟ್ಟೆಯನ್ನು ಮೃದುವಾಗಿ ಬೇಯಿಸುವುದು ಸೂಕ್ತ ಅಂತ ನಿಮಗನ್ನಿಸಬಹುದು. ಮೊಟ್ಟೆಯ ಬಿಳಿಯ ಭಾಗ ಮತ್ತು ಸೃವಿಸುವ ಲೋಳೆ ಬೆರಳಿಗೆ ಅಂಟಿಕೊಳ್ಳದಷ್ಟು ಗಟ್ಟಿಯಾದರೆ ಸಾಕು.

ಗಟ್ಟಿಯಾಗಿ ಮೊಟ್ಟೆ ಬೇಯಿಸುವ ಯೋಚನೆ ಮನಸ್ಸಿನಲ್ಲಿ ಇದ್ದರೆ, ಮೊಟ್ಟೆಯನ್ನು ೧೨ ನಿಮಿಷಕ್ಕಿಂತ ಹೆಚ್ಚು ಬೇಯಿಸಲು ಹೋಗಬೇಡಿ. ಏಕೆಂದರೆ ಇದು ಸಮಸ್ಯೆಯಾದೀತು. ಮೊಟ್ಟೆಯ ಬಿಳಿ ಭಾಗ ಜಿಗುಟಾಗಬಹುದು ಅಥವಾ ಹೊತ್ತಿ ಕರುಕಲಾಗಿ ಹಾಳಾಗಬಹುದು.

ನೀವು ಸಿದ್ಧಪಡಿಸಿದ ಮೊಟ್ಟೆಯ ಆಹಾರ ಹೊತ್ತಿ ಕರುಕಲಾದರೆ ಅದನ್ನು ಮರುಬಳಕೆಗೆ ಸಿದ್ಧಪಡಿಸಲು (ವಿಶೇಷ ಭಕ್ಷ್ಯ ಸಿದ್ಧಪಡಿಸಲು ಮೊಟ್ಟೆಯನ್ನು ಗಟ್ಟಿಯಾಗಿ ಬೇಯಿಸಲು ಮುಂದಾದಾಗ) ತಣ್ಣನೆ ನೀರಿಗೆ ಸಣ್ಣ ಉರಿ ಬೆಂಕಿ ನೀಡಿ ನಿಧಾನವಾಗಿ ನೀರು ಕಾಯುವಂತೆ ಮಾಡಿಕೊಂಡು ಹಂತ ಹಂತವಾಗಿ ಬೇಯಿಸಬೇಕು. ಎಲ್ಲಿಯವರೆಗೂ ಇದರ ಬೇಯುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆಯೋ ಅಲ್ಲಿಯವರೆಗೆ ಈ ಕಾರ್ಯಕ್ಕೆ ಮರದ ಸೌಟು (ಸ್ಪೂನ್‌) ಬಳಸುವುದು ಉತ್ತಮ. ಇದರಿಂದ ಅಂಟಿಕೊಳ್ಳುವ ಸಮಸ್ಯೆ ಇಲ್ಲದಾಗುವುದನ್ನು ಗಮನಿಸಬಹುದು.

ಎಲ್ಲಾ ಸಂದರ್ಭದಲ್ಲಿ ಮೊಟ್ಟೆಯನ್ನ ನೀರಿನಲ್ಲಿಯೇ ಬೇಯಿಸುವಂತೆ ಸಲಹೆ ನೀಡಲಾಗುತ್ತದೆ. ಇದರ ನಿಜಾರ್ಥವೇನೆಂದರೆ ಮೊಟ್ಟೆ ನೀರಲ್ಲಿ ಉತ್ತಮವಾಗಿ ತೇಲುತ್ತದೆ, ಬೇಯುತ್ತದೆ. ಪದೇ ಪದೇ ಬೇಯಿಸುವುದರಿಂದ ಮೊಟ್ಟೆ ಜಿಗುಟು ಅಥವಾ ಗಡುಸಾಗುತ್ತದೆ. ಹೆಚ್ಚು ಉಷ್ಣತೆಯಲ್ಲಿ ಮೊಟ್ಟೆಯನ್ನು ಬೇಯಿಸಿದರೆ ಪ್ರೋಟೀನ್‌ ಸತ್ವ ಕಡಿಮೆಯಾಗಿ ಬಿಡುತ್ತದೆ. ಅಲ್ಲದೇ ಮೊಟ್ಟೆ ಬಿಸಿಯಲ್ಲಿ ಕರಗಿಹೋಗುವ ಸಾಧ್ಯತೆ ಹೆಚ್ಚು. ಇದರಿಂದ ನಿಧಾನವಾಗಿ ಬೇಯಿಸುವ ವಿಧಾನವೇ ಅತ್ಯಂತ ಸೂಕ್ತ ಬೇಯಿಸುವ ವಿಧಾನ ಅನ್ನಿಸಿಕೊಂಡಿದೆ. ಕಡಿಮೆ ಉಷ್ಣತೆಯಲ್ಲಿ ಆಹಾರ ಬೇಯಿಸುವುದು ಸೂಕ್ತ.

೩. ಮೊಟ್ಟೆ ಸಿದ್ಧಪಡಿಸುವುದು: ಮೊಟ್ಟೆಯನ್ನು ಶೀತ ಪ್ರದೇಶದಲ್ಲಿ ಎಷ್ಟು ದಿನ ಬೇಕಾದರೂ ಇರಿಸಬಹುದು. ಹೆಚ್ಚು ಅವಧಿ ಇದು ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಬಿರುಕು ಕಾಣಿಸಿಕೊಂಡಂತೆ ಅನಿಸಿದರೂ, ಇದು ಬೇರ್ಪಡುವುದಿಲ್ಲ. ಪಾಕ ತಜ್ಞ ರೋಸ್‌ ಎಲಿಯೋಟ್‌ ನೀಡುವ ಸಲಹೆಯೇನೆಂದರೆ ಮೊಟ್ಟೆಯ ಗೋಲಾಕಾರ ಭಾಗದ ಕೊನೆಭಾಗದ ಕಡೆಯಿಂದ ಬೇಯಿಸುವುದು ಉತ್ತಮ. ಅವರ ಪ್ರಕಾರ, ಬೇಯಿಸುವ ಸಂದರ್ಭದಲ್ಲಿ ಮೊಟ್ಟೆಯೊಳಗಿನ ಗಾಳಿ ಸರಾಗವಾಗಿ ಹೊರಹೋಗುತ್ತದೆ. ಇದರಿಂದ ಮೊಟ್ಟೆ ಸ್ಫೋಟಗೊಳ್ಳುವ ಅಥವಾ ಬಿರುಕು ಬಿಡುವ ಸಾಧ್ಯತೆ ಕಡಿಮೆ. ಅಲ್ಲದೇ ಬೇಯಿಸಿ ಬಿಡಿಸಿಟ್ಟ ಮೊಟ್ಟೆಯನ್ನು ಕೂಡ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಬಹುದಾಗಿದೆ. ಅಲ್ಲದೇ ಇದನ್ನು ಹಾಗೆಯೇ ಕೂಡ ಬಳಸಬಹುದು. ಪರ್ಯಾಯವಾಗಿ ಇದನ್ನು ಸಾಮಾನ್ಯ ಉಷ್ಣಾಂಶದಲ್ಲಿ ತೆರೆದ ಸ್ಥಿತಿಯಲ್ಲಿಯೇ ಕೋಣೆಯಲ್ಲಿಯೂ ಇಡಬಹುದು. ಇವು ಫ್ರೆಶ್‌ ಆಗಿಯೇ ಇರುತ್ತವೆ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಮೊಟ್ಟೆಯೇನಾದರೂ ಬಿರುಕು ಬಿಟ್ಟಿದ್ದರೆ, ಅದರಿಂದ ಮೊಟ್ಟೆಯ ಸಾರ ಸೋರುತ್ತಿದ್ದರೆ, ಅದರ ಮೇಲೆ ಒಂದೆರಡು ಹನಿ ವಿನೇಗರ್‌ ಚಿಮುಕಿಸಿ. ತಕ್ಷಣ ಸೋರಿಕೆ ನಿಂತು ಹೋಗುತ್ತದೆ. ಬಿರುಕು ಬಿಟ್ಟ ಮೊಟ್ಟೆಯನ್ನು ಅಲ್ಯೂಮಿನಿಯಮ್‌ ಪೇಪರ್‌ನಲ್ಲಿ ಸುತ್ತಿ ಪಾತ್ರೆಯಲ್ಲಿ ಹಾಕಿ ಬೇಯಿಸಬಹುದು.

3. ಬಿಸಿಯಾದ ಮೊಟ್ಟೆಯನ್ನು ತೆಗೆಯುವಾಗ ಎಚ್ಚರವಹಿಸಿ: ಛೇದವಿರುವ ಸೌಟು (ಸ್ಪೂನ್‌) ಇದಕ್ಕಾಗಿ ಬಳಸಿ. ಕುದಿಯುತ್ತಿರುವ ನೀರಿನಿಂದ ಮೊಟ್ಟೆಯನ್ನು ಮಾತ್ರ ಆಚೆ ತರಲು ಇದು ಸಹಕಾರಿಯಾಗುತ್ತದೆ.

ಎಚ್ಚರಿಕೆ

ಕುದಿಯುತ್ತಿರುವ ನೀರಿನಲ್ಲಿ ಬೇಯಿಸಿದ ಮೊಟ್ಟೆಯನ್ನು ತಕ್ಷಣ ತೆಗೆಯಬೇಕು. ಹಾಗೆಯೇ ಪಾತ್ರೆಯಲ್ಲಿ ಬಿಡುವುದರಿಂದ ಮೊಟ್ಟೆ ನಿಗಧಿಗಿಂತ ಹೆಚ್ಚು ಬೆಂದು ಮೊಟ್ಟೆಯ ಬಿಳಿ ಅಂಶ ಜಿಗುಟಾಗಿ, ಒಣಗಿ ನಾರುವ ಸಾಧ್ಯತೆ ಇರುತ್ತದೆ.

ಕುದಿಯುವ ನೀರಿನಲ್ಲಿ ೧೫ ನಿಮಿಷಕ್ಕಿಂತ ಹೆಚ್ಚು ಹೊತ್ತು ಮೊಟ್ಟೆಯನ್ನು ಇಟ್ಟರೆ ಮೊಟ್ಟೆ ಹೊತ್ತಿ ಕರಕಲಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಕೆಟ್ಟ ವಾಸನೆ ಉಂಟು ಮಾಡುತ್ತದೆ.

ಅಗತ್ಯಕ್ಕಿಂತ ಹೆಚ್ಚು ವಿನೇಗರ್‌ ಬಳಸುವುದರಿಂದ ಮೊಟ್ಟೆ ಕೆಟ್ಟ ವಾಸನೆ ಬೀರಬಹುದು. ರುಚಿಯೂ ವಿನೇಗರ್‌ದು ಉಂಟಾಗುವ ಸಾಧ್ಯತೆ ಇದೆ. ಕೆಲವೇ ಕಲವು ಹನಿಗಳನ್ನು ಬಳಸುವುದು ಸೂಕ್ತ.

ಬಳಸಿದ ನಂತರ ಮೊಟ್ಟೆಯ ಹೊರ ಕವಚವನ್ನು ಡಸ್ಟ್‌ಬಿನ್‌ನಲ್ಲಿ ಹಾಕುವುದು ಸೂಕ್ತ. ನೀರು ಹರಿದು ಹೋಗುವ ಸಿಂಕ್‌, ಡ್ರೈನೇಜ್‌ ಪ್ಐಪ್‌ಗೆ ಎಸೆಯುವುದು ಒಳ್ಳೆಯದಲ್ಲ. ಇದರಿಂದ ಹರಿಯುವ ನೀರು ಕಟ್ಟಿ ಹೋಗಬಹುದು. ನಾನಾ ರೀತಿಯ ಸಮಸ್ಯೆ ಸೃಷ್ಟಿಯಾಗಬಹುದು. ಈ ಬಗ್ಗೆ ಎಚ್ಚರ ವಹಿಸಿದಷ್ಟೂ ಉತ್ತಮ. ಒಳಚರಂಡಿ ಪೈಪ್‌ಗೆ ಮೊಟ್ಟೆಯ ಚೂರು ಸೇರದಂತೆ ನೋಡಿಕೊಳ್ಳಿ.

English summary

How To Boil Eggs | Tips For Cooking | ಮೊಟ್ಟೆಯ್ನನು ಬೇಯಿಸುವುದು ಹೇಗೆ? | ಅಡುಗೆಗೆ ಕೆಲ ಸಲಹೆಗಳು

Boiling an egg sounds like the simplest of tasks, but even cooking experts disagree on the best method. There is a step to boil an egg.
X
Desktop Bottom Promotion