For Quick Alerts
ALLOW NOTIFICATIONS  
For Daily Alerts

ರುಚಿಕರವಾದ ಚಾಕಲೇಟ್ ಐಸ್ ಕ್ರೀಮ್ ರೆಸಿಪಿ

|

ಐಸ್‌ಕ್ರೀಮ್‌ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಪುಟಾಣಿಗಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಪ್ರೀತಿ ಗಳಿಸಿದ ಶೀತಲ ತಿನಿಸಿದು. ಬಿರು ಬೇಸಿಗೆಯಲ್ಲಿ ಎಲ್ಲರೂ ಐಸ್ ಕ್ರೀಮ್‌ನ ಮೊರೆ ಹೋಗುವುದು ಸಾಮಾನ್ಯ.

ಹಾಗಾಗಿ ದಿನ ನಿತ್ಯ ವಿಶೇಷ ರುಚಿಗೆ ಹಾತೊರೆಯುವ ನಮ್ಮ ನಾಲಿಗೆಗೆ ಹೊಸ ಪ್ರಯೋಗದ ಅವಶ್ಯಕತೆ ಇದೆ ಎಂದು ನಿಮಗೆ ಅನಿಸುವುದಿಲ್ಲವೇ? ಇದಕ್ಕಾಗಿ ಇಂದು ಬೋಲ್ಡ್ ಸ್ಕೈ ನಿಮಗಾಗಿ ಮನೆಯೆಲ್ಲಿ ಸುಲಭವಾಗಿ ಮಾಡಬಹುದಾದ ಚಾಕಲೇಟ್ ಐಸ್ ಕ್ರೀಮ್ ರೆಸಿಪಿಯನ್ನು ನಿಮ್ಮ ಮುಂದಿಡುತ್ತಿದೆ.

ಬೇಸಿಗೆಗೆ ಸವಿ ರುಚಿಯಾದ ಚಾಕಲೇಟ್ ಕುಲ್ಫಿ ರೆಸಿಪಿ!

Yummy Chocolate Ice cream Recipe: Summer Treat

ಬೇಕಾಗುವ ಸಾಮಗ್ರಿಗಳು:
*ಹಾಲು 1 ಲೀಟರ್,
*ಸಕ್ಕರೆ 175 ಗ್ರಾಂ
*ಹಾಲಿನ ಕೆನೆ ಅಥವಾ ಫ್ರೆಶ್ ಕ್ರೀಂ 100ಗ್ರಾಂ
*ಮೆಕ್ಕೆ ಜೋಳದ ಹಿಟ್ಟು 3 ಚಮಚ
*ಗ್ಲೂಕೋಸ್ 1 ಚಮಚ
*ವೆನಿಲಾ ಎಸೆನ್ಸ್ ಅರ್ಧ ಚಮಚ
*ಕೋಕೋ ಪುಡಿ ಎರಡು ಚಮಚ
*ತುರಿದ ಕುಕ್ಕಿಂಗ್ ಚಾಕಲೇಟ್ ನಾಲ್ಕು ಚಮಚ(30ಗ್ರಾಂ)

ಮಾಡುವ ವಿಧಾನ:

1.ಒಂದು ಪಾತ್ರೆಯಲ್ಲಿ ಕೋಕೋಪುಡಿ, ಜೋಳದ ಹಿಟ್ಟನ್ನು ಮತ್ತು 1/4 ಲೋಟ ಹಾಲನ್ನು ಹಾಕಿ ಗಂಟುಗಳು ಬಾರದಂತೆ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಪಕ್ಕದಲ್ಲಿಡಿ.

2. ಸಣ್ಣ ಉರಿಯಲ್ಲಿ ತಳಪಾಯವಿರುವ ಪಾತ್ರೆಯಲ್ಲಿ ಸಕ್ಕರೆ ಮತ್ತು ಹಾಲನ್ನು ಕಡಿಮೆ ಶಾಖದಲ್ಲಿ ಹತ್ತು ನಿಮಿಷ ಕುದಿಸಿ.

3. ಇದೀಗ ಹಾಲಿಗೆ ಗ್ಲೂಕೋಸ್ ಬೆರೆಸಿಕೊಳ್ಳಿ ಮತ್ತು ಇನ್ನೊಂದು 5 ನಿಮಿಷಗಳ ಕಾಲ ಕುದಿಸಿ ಹಾಗೂ ಒಲೆಯ ಮೇಲಿಂದ ಇಳಿಸಿ ಪೂರ್ತಿ ತಣ್ಣಗಾಗಲು ಬಿಡಿ.

4. ಹಾಲಿನ ಕೆನೆಯೊಂದಿಗೆ ವೆನಿಲಾ ಎಸೆನ್ಸ್ ಅನ್ನು ಮಿಶ್ರಣ ಮಾಡಿಕೊಳ್ಳಿ

5. ಇನ್ನು ಈ ಮಿಶ್ರಣ ಎಲ್ಲವನ್ನೂ ಬೇರೆ ಪಾತ್ರೆಗೆ ಹಾಕಿ ಫ್ರಿಡ್ಜ್‪‌ನಲ್ಲಿ ಒಂದು ಗಂಟೆ ಇಡಿ.

6. ನಂತರ ನೊರೆಯಂತೆ ಮಾಡಿಕೊಳ್ಳಲು ಮಿಕ್ಸರ್‌ನಲ್ಲಿ ಗ್ರೈಂಡ್ ಮಾಡಿಕೊಳ್ಳಿ. ಮೋಲ್ಡ್‌ಗಳಿಗೆ ಇದನ್ನು ಸುರಿಯಿರಿ ಮತ್ತು 2 ಗಂಟೆಗಳ ಕಾಲ ಅದನ್ನು ಫ್ರಿಡ್ಜ್‪‌ನಲ್ಲಿ ಇಡಿ.

7. ಕುಕ್ಕಿಂಗ್ ಚಾಕಲೇಟನ್ನು ತಯಾರಾದ ಐಸ್ಕ್ರೀಮ್ ಮೇಲೆ ಜೋಡಿಸಿ, ಮತ್ತೆ ಅರ್ಧ ಗಂಟೆ ಫ್ರಿಡ್ಜ್‪‌ನಲ್ಲಿ ಇಟ್ಟು ತೆಗೆಯಿರಿ.

ರುಚಿಕರವಾದ ಚಾಕಲೇಟ್ ಐಸ್ ಕ್ರೀಮ್ ರೆಸಿಪಿ ಸವಿಯಲು ರೆಡಿ!

Story first published: Tuesday, April 29, 2014, 14:32 [IST]
X
Desktop Bottom Promotion