For Quick Alerts
ALLOW NOTIFICATIONS  
For Daily Alerts

ವೀಡಿಯೋ ಮೂಲಕ ಲಿಂಬೆ ಜ್ಯೂಸ್ ಅನ್ನು ಆಸ್ವಾದಿಸಿ

|

ಬೇಸಿಗೆ ಬಿಸಿಯನ್ನು ತಣಿಸಲು ನೆರವಾಗುವುದು ತಂಪು ಡಿಶ್‌ಗಳು ಮಾತ್ರ. ತಂಪಾದ ಪಾನೀಯಗಳು ನಮಗೆ ದೇಹದ ಉರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಮತ್ತು ತಂಪು ನೀಡುತ್ತದೆ. ಇಲ್ಲಿ ನಾವು ನೀಡಿರುವ ಒಂದು ಸುಲಭವಾದ ಜ್ಯೂಸ್ ಆಗಿದೆ ಲಿಂಬೆ ಜ್ಯೂಸ್. ಸಾಮಾನ್ಯವಾಗಿ ಇದನ್ನು ಮನೆಯಲ್ಲಿ ಎಲ್ಲರೂ ತಯಾರಿಸುತ್ತಾರೆ

ಆದರೆ ಈ ಜ್ಯೂಸ್ ಅನ್ನು ತಯಾರಿಸುವಾಗ ಅತೀ ಮುಖ್ಯವಾದ ಒಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದು ಹೇಗೆ ಎಂಬುದನ್ನು ಈ ವೀಡಿಯೋದ ಮೂಲಕ ನಾವು ನಿಮಗೆ ತಿಳಿಸಿಕೊಡುತ್ತೇವೆ. ಈ ಜ್ಯೂಸ್ ಅನ್ನು ತಯಾರಿಸಿ ನಿಮ್ಮ ಮಕ್ಕಳಿಗೆ ನೀಡಿ ಮತ್ತು ಅವರು ಪಡುವ ಖುಷಿಯನ್ನು ನೋಡಿ ನೀವೂ ಮೈ ಮರೆಯಿರಿ.

ಬೆಳಗ್ಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

Nimbu Pani Recipe With Video

ಪ್ರಮಾಣ: 4
ಸಿದ್ಧತಾ ಸಮಯ: 5 ನಿಮಿಷಗಳು

ಸಾಮಾಗ್ರಿಗಳು:
*ಲಿಂಬೆ - 4
*ಉಪ್ಪು - 1 ಸ್ಪೂನ್
*ಸಕ್ಕರೆ - 2 ಸ್ಪೂನ್
*ಬ್ಲ್ಯಾಕ್ ಸಾಲ್ಟ್ - 1/2 ಸ್ಪೂನ್
*ಜಲ್ಜೀರಾ ಪೌಡರ್ - 1/2 ಸ್ಪೂನ್
*ಸೋಡಾ ಪೌಡರ್ - 1 ಸ್ಪೂನ್
*ಐಸ್ - 4-6 ತುಂಡುಗಳು
*ನೀರು - 4-5 ಗ್ಲಾಸು

ಲೆಮನ್ ಜ್ಯೂಸ್ ಹೀಗೆ ಮಾಡಿದರೆ ರುಚಿ ಹೆಚ್ಚು

ಮಾಡುವ ವಿಧಾನ:
1.ಲಿಂಬೆಯನ್ನು ಎರಡು ಭಾಗಗಳನ್ನಾಗಿ ಮಾಡಿಕೊಳ್ಳಿ. ಸಣ್ಣ ಮಕ್ಕಳಿಗೆ ಈ ಜ್ಯೂಸ್ ಅನ್ನು ನೀವು ಮಾಡುತ್ತೀರಿ ಎಂದಾದಲ್ಲಿ ಲಿಂಬೆಯ ಬೀಜವನ್ನು ತೆಗೆಯಿರಿ.

2.ದೊಡ್ಡ ಜಾರ್ ನಲ್ಲಿ ಲಿಂಬೆ ರಸವನ್ನು ಹಿಂಡಿ. ಎಲ್ಲಾ ನೀರನ್ನು ಈ ಜಾರ್ ಗೆ ಸುರಿಯಿರಿ.

3.ಈ ಜಾರ್‌ಗೆ ಉಪ್ಪು ಹಾಗೂ ಸಕ್ಕರೆಯನ್ನು ಒಟ್ಟಿಗೆ ಹಾಕಿ.

4.ಚಮಚವನ್ನು ತೆಗೆದುಕೊಂಡು ಉಪ್ಪು ಹಾಗೂ ಸಕ್ಕರೆ ಮಿಶ್ರಣವನ್ನು ಚೆನ್ನಾಗಿ ಮಿಶ್ರಗೊಳಿಸಿ.

5.ಬ್ಲ್ಯಾಕ್ ಸಾಲ್ಟ್ ಅಥವಾ ಜಲ್ಜೀರಾ ಪೌಡರ್ ಅನ್ನು ರುಚಿಗೆ ಸೇರಿಸಿಕೊಳ್ಳಬಹುದು.

6.ನಿಂಬೆ ಜ್ಯೂಸ್ ಅನ್ನು ಐಸ್ ಕ್ಯೂಬ್ ಹಾಕಿ ಸರ್ವ್ ಮಾಡಿ

7. ನಿಮ್ಮ ಮಕ್ಕಳು ಫ್ರೋತ್ ಬೇಕೆಂದು ಬಯಸಿದಲ್ಲಿ, ತಿನ್ನುವ ಸೋಡಾವನ್ನು ಅದಕ್ಕೆ ಸೇರಿಸಬಹುದು ಹಾಗೂ ಇದನ್ನು ಲಿಂಬೆ ಸೋಡಾ ಆಗಿ ಇದನ್ನು ನೀವು ಅವರಿಗೆ ನೀಡಬಹುದು.

8.ಈ ಬೇಸಿಗೆಗೆ ತಂಪಾದ ಲಿಂಬೆ ಜ್ಯೂಸ್ ಅನ್ನು ಕುಡಿಯಿರಿ ಏಕೆಂದರೆ ಇದು ವಿಟಮಿನ್ ಸಿ ಯನ್ನು ಹಾಗೂ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.
<center><iframe width="100%" height="417" src="//www.youtube.com/embed/zzfXV_Up07w" frameborder="0" allowfullscreen></iframe></center>

Story first published: Wednesday, April 30, 2014, 10:31 [IST]
X
Desktop Bottom Promotion