For Quick Alerts
ALLOW NOTIFICATIONS  
For Daily Alerts

ಆಹ್ಲಾದಕರ ಟೊಮೆಟೊ ಹಣ್ಣಿನ ಶರಬತ್ತು

By * ಕುಮುದಾ ಶಂಕರ್, ಸೌದಿ ಅರೇಬಿಯಾ
|
Tomato juice recipe
ಬೇಸಿಗೆಯಲ್ಲಿ ಬಸವಳಿದು ಬಂದ ಅತಿಥಿಗಳಿಗೆ ಏನು ಕೊಡುತ್ತೀರಿ? ಮಜ್ಜಿಗೆ, ನಿಂಬೆಹಣ್ಣಿನ ಶರಬತ್ತು, ಮೊಸಂಬಿ ಜ್ಯೂಸು, ಕ್ಯಾರೆಟ್ ಜ್ಯೂಸ್... ಕೊಡುವುದು ವಾಡಿಕೆ. ಇವೆಲ್ಲವೂ ತಣ್ಣನೆಯ ಅನುಭವ ನೀಡುತ್ತವೆಯಾದರೂ, ವಿಟಮಿನ್ ಸಿ ಹೆಚ್ಚಾಗಿರುವ ಟೊಮೆಟೊ ಹಣ್ಣಿನಿಂದ ತಯಾಸಿರಿದ ಶರಬತ್ತು, ದೇಹಕ್ಕೆ ತಂಪು, ಮನಸ್ಸಿಗೆ ಆಹ್ಲಾದ ನೀಡುತ್ತದೆ ಮತ್ತು ತಕ್ಷಣ ಆಯಾಸವನ್ನು ನಿವಾರಿಸುತ್ತದೆ. ಮಾಡುವುದು ಸುಲಭ, ಕುಡಿಯುವುದು ಇನ್ನೂ ಸುಲಭ.

ಬೇಕಾಗುವ ಸಾಮಗ್ರಿಗಳು :

ಟೊಮೆಟೊ ಹಣ್ಣುಗಳು
ನೀರು
ಚಿಟಿಕೆ ಉಪ್ಪು
ಸಕ್ಕರೆ ರುಚಿಗೆ
ಏಲಕ್ಕಿ ಪುಡಿ ಸ್ವಲ್ಪ
ಜೇನುತುಪ್ಪ- ಅರ್ಧ ಚಮಚ

ತಯಾರಿಸುವ ವಿಧಾನ :

* ನೀರಿಗೆ ಟೊಮೆಟೊ ಹಣ್ಣು, ಸಕ್ಕರೆ, ಉಪ್ಪು, ಜೇನುತುಪ್ಪ ಮತು ಏಲಕ್ಕಿ ಪುಡಿಯನ್ನು ಸೇರಿಸಿ, ಚೆನ್ನಾಗಿ ರುಬ್ಬಿಕೊಂಡು ಅದನ್ನು ಸೋಸಿದರೆ, ಟೊಮೆಟೊ ಶರಬತ್ತು/ಪಾನೀಯ ತಯಾರಾಗುತ್ತದೆ.

* ತಣ್ಣಗೆ ಇಷ್ಟಪಡುವವರು ತಣ್ಣನೆಯ ನೀರು ಬಳಸಿ ಅಥವಾ ಐಸ್ ಕ್ಯುಬ್ಸ್ ಹಾಕಿ. ಇದು ಆರೋಗ್ಯಕ್ಕೆ ಹಿತಕರ ಮತ್ತು ತಂಪು ಹಾಗೂ ಬಾಯಾರಿಕೆಗಳನ್ನು ನಿವಾರಿಸುತ್ತದೆ. ದಣಿವು ಆರಿಸುತ್ತದೆ. ತಯಾರಿಸುವುದು ಸಹ ಸುಲಭ. ಅಲ್ಲದೇ ಎಲ್ಲಾ ಸಾಮಗ್ರಿಗಳು ಮನೆಯಲ್ಲಿ ಇದ್ದೇ ಇರುತ್ತವೆ.

* ಇದಕ್ಕೆ ಸ್ವಲ್ಪ ಕಾಳುಮೆಣಸಿನ ಪುಡಿ ಬೆರೆಸಿ ಕುಡಿದರೆ ಇನ್ನೂ ರುಚಿಯಾಗಿರುತ್ತದೆ. ಟೊಮೆಟೊದಲ್ಲಿ ಶಕ್ತಿವರ್ಧಕ ಅಂಶ ಹೆಚ್ಚಾಗಿರುವುದರಿಂದ ಇದು ಆರೋಗ್ಯಕ್ಕೆ ಮತ್ತು ದೇಹಕ್ಕೂ ಒಳ್ಳೆಯದು.

ಆರೋಗ್ಯದ ಮೇಲೆ ಪರಿಣಾಮ

* ಇದರಲ್ಲಿ ಕ್ಯಾನ್ಸರ್ ತಡೆಯುವ ಶಕ್ತಿಯಿದೆ.
* ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ.
* ಜೀರ್ಣ ಶಕ್ತಿ ವರ್ಧಿಸುತ್ತದೆ, ಮಲಬದ್ಧತೆ ನಿವಾರಿಸುತ್ತದೆ.
* ಆಯಾಸವನ್ನು ನಿವಾರಿಸುತ್ತದೆ.
* ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
* ಗರ್ಭಿಣಿಯರು ಟೊಮೆಟೊ ಜ್ಯೂಸನ್ನು ಆಗಾಗ ಹೀರುತ್ತಿದ್ದರೆ ಮಗುವಿನ ಬೆಳವಣಿಗೆಗೆ ಉತ್ತಮ. [ಕೃಪೆ : ಅಡುಗೆ ಸವಿರುಚಿ]

English summary

Tomato juice recipe | Health benefits of tomato | Summer drinks | ಟೊಮೆಟೊ ಹಣ್ಣಿನ ಶರಬತ್ತು

Tomato juice recipe by Kumuda Shankar, Saudi Arabia. There are many health benefits of tomato juice. It reduces blood pressure and increases appetite and immunity power. Women should drink this during pregnancy.
Story first published: Saturday, May 7, 2011, 17:13 [IST]
X
Desktop Bottom Promotion