For Quick Alerts
ALLOW NOTIFICATIONS  
For Daily Alerts

ಬಾದಾಮಿ ಕುಲ್ಫಿ ಮಾಡುವುದು ಬ್ರಹ್ಮವಿದ್ಯೆಯಲ್ಲ

|
Badam-Kulifi Recipe
ಬಿಸಿಲಿರಲಿ ಮಳೆಯಿರಲಿ ಕುಲ್ಫಿ ಕಂಡ ತಕ್ಷಣ ತಿನ್ನಬೇಕೆಂದು ಅನಿಸುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟ ಪಟ್ಟು ತಿನ್ನುವ ಈ ಕುಲ್ಫಿಯನ್ನು ಮನೆಯಲ್ಲಿಯೆ ತಯಾರಿಸಬಹುದು. ರುಚಿಕರವಾದ ಬಾದಾಮಿ ಕುಲ್ಫಿ ಇಷ್ಟಪಡುವವರಿಗೆ ಅದನ್ನು ಸುಲಭವಾಗಿ ತಯಾರಿಸುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* 3 ಲೀಟರ್ ಹಾಲು
* 3/4 ಕಪ್ ಸಕ್ಕರೆ
* 1/2 ಕಪ್ ಹುರಿದ ಬಾದಾಮಿ
* ಏಲಕ್ಕಿ ಪುಡಿ

ತಯಾರಿಸುವ ವಿಧಾನ:
1. 3 ಲೀಟರ್ ಹಾಲು ಒಂದೂವರೆ ಲೀಟರ್ ಆಗುವಷ್ಟು ಹೊತ್ತು ಕುದಿಸಬೇಕು.
2. ಈಗ ಗಟ್ಟಿಯಾದ ಹಾಲಿಗೆ ಬಾದಾಮಿ, ಸಕ್ಕರೆ, ಏಲಕ್ಕಿ ಹಾಕಿ ತಿರುಗಿಸಬೇಕು.
3. ಕುಲ್ಫಿ ಮೌಲ್ಡ್ ನಲ್ಲಿ ಈ ದ್ರಾವಣವನ್ನು ಹಾಕಿ 6-7 ಗಂಟೆ ಫ್ರಿಜ್ ನಲ್ಲಿಟ್ಟರೆ ರುಚಿಕರವಾದ ಬಾದಮಿ ಕುಲ್ಫಿ ರೆಡಿ.

English summary

Badam-Kulifi Recipe | Icecream Recipe | ಬಾದಾಮಿ ಕುಲ್ಫಿ ರೆಸಿಪಿ | ಐಸ್ ಕ್ರೀಮ್ ರೆಸಿಪಿ

Today, we introduce the all time favourite “badam kulfi recipe” that is relished by kids and the aged in summer.
Story first published: Wednesday, February 22, 2012, 18:06 [IST]
X
Desktop Bottom Promotion