For Quick Alerts
ALLOW NOTIFICATIONS  
For Daily Alerts

ದೊಣ್ಣ ವೆುಣಸಿನಕಾಯಿ ತೊಕ್ಕು... ಹಾ!

By Super
|

ತರಕಾರಿಗಳೆಂಬ ಸ್ವರಗಳನ್ನು ಬಳಸಿಕೊಂಡು ನೆಂಜಿಕೆಗೆ ವ್ಯಂಜನ ತಯಾರಿಸುವ ಪಾಕಕಲೆ ನಿಮಗೆ ಒಲಿಯಲಿ. ಹ್ಯಾವ್‌ ಎ ಗ್ರೇಟ್‌ ಟೈಮ್‌!

  • ಶಾಸ್ತ್ರಿ ಎನ್‌. ಪ್ರಸಾದ್‌

ಬೇಕಾಗುವ ಪದಾರ್ಥಗಳು

ಹಸಿರಾಗಿರುವ ದೊಣ್ಣೆ ಮೆಣಸಿನಕಾಯಿ- 2 (ದೊಡ್ಡ ಸೈಜಿನವು)
ಅರಿಶಿನಪುಡಿಯ ಪೇಸ್ಟು- 1 ಟೀ ಚಮಚ
ಧನಿಯಾ- 2 ಟೀ ಚಮಚ
ಕಡಲೆ ಬೇಳೆ- 2 ಟೀ ಚಮಚ
ಕೆಂಪು ಒಣ ಮೆಣಸಿನಕಾಯಿ- 1 (ದೊಡ್ಡದು)
ಮೆಂತ್ಯ- 1 ಟೀ ಚಮಚ
ಸಾಸಿವೆ- 1 ಟೀ ಚಮಚ
ಇಂಗು- ಅರ್ಧ ಟೀ ಚಮಚ
ಎಣ್ಣೆ- ಒಂದು ಟೇಬಲ್‌ ಚಮಚ
ಮೆಣಸಿನ ಪುಡಿ- 1 ಟೀ ಚಮಚ ಅಥವಾ ರುಚಿಗೆ ತಕ್ಕಷ್ಟು
ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ಬೀಜ ತೆಗೆದು, ದೊಣ್ಣೆ ಮೆಣಸಿನಕಾಯಿಗಳನ್ನು ತುರಿಯಿರಿ. ತುರಿಯನ್ನು ಸ್ವಲ್ಪ ಎಣ್ಣೆ ಸವರಿದ ಬಾಣಲೆಯಲ್ಲಿ ಬಾಡಿಸಿ. ತುರಿ ಮೃದುವಾಗುತ್ತದೆ. ಅರಿಶಿನದ ಪೇಸ್ಟಿನೊಟ್ಟಿಗೆ ದೊಣ್ಣೆ ಮೆಣಸಿನಕಾಯಿ ತುರಿಯನ್ನು ರುಬ್ಬಿಕೊಳ್ಳಿ- ಮಿಕ್ಸಿಯಲ್ಲಿ ರುಬ್ಬುವುದಕ್ಕಿಂತ ಒರಳಲ್ಲಿ ರುಬ್ಬಿದರೆ ರುಚಿ ಹೆಚ್ಚು. ಮೃದು ಪೇಸ್ಟಿನ ರೂಪಕ್ಕೆ ಬರುವವರೆಗೆ ರುಬ್ಬಿಕೊಂಡು, ಸಣ್ಣ ಬಟ್ಟಲಿಗೆ ತುಂಬಿಸಿಡಿ.

ಕಡಲೆಬೇಳೆ, ಮೆಂತ್ಯ, ಧನಿಯಾ, ಒಣ ಮೆಣಸಿನಕಾಯಿ, ಇಂಗು- ಎಲ್ಲವನ್ನು ಸಣ್ಮ ಬಾಣಲೆಯಲ್ಲಿ ಎಣ್ಣೆಯಿಲ್ಲದೆ ಹದವಾಗಿ ಹುರಿಯಿರಿ. ನಂತರ ಇವನ್ನೆಲ್ಲ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ. ಎಣ್ಣೆಯನ್ನು ಕಾಯಿಸಿ, ಸಾಸಿವೆ ಹಾಕಿ. ಸಾಸಿವೆ ಚಿಟಿಗುಟ್ಟಲಿ. ಆಮೇಲೆ ದೊಣ್ಣೆ ಮೆಣಸಿನಕಾಯಿ ಪೇಸ್ಟನ್ನು ಅದಕ್ಕೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು- ಮೆಣಸಿನ ಪುಡಿ ಹಾಕಿ. ಮಿಕ್ಸಿಗೆ ಹಾಕಿಟ್ಟುಕೊಂಡ ಪುಡಿಯನ್ನೂ ಸೇರಿಸಿ. ಚೆನ್ನಾಗಿ ಬೆರೆಸಿ.

ಇಷ್ಟು ಪ್ರಮಾಣದ ತೊಕ್ಕು ಮೂವರ ನಾಲಗೆ ರುಚಿ ತಣಿಸಬಲ್ಲದು. ಇಡ್ಲಿ, ದೋಸೆಯ ಜೊತೆಗೆ ಈ ತೊಕ್ಕು ಬಲು ರುಚಿ.

X
Desktop Bottom Promotion