For Quick Alerts
ALLOW NOTIFICATIONS  
For Daily Alerts

ತಿಂಡಿ ಪೋತ ರಾಮಣ್ಣನ ಅನುಭವ ಮಂಟಪ

By * ವೈಷ್ಣವಿ ಮೂರ್ತಿ, ಬೆಂಗಳೂರು.
|
Vaishnavi Murthy, Bangalore
ತಿಂಡಿಗಳು ಯಾರಿಗಿಷ್ಟಿಲ್ಲ? ಬಿಸಿಬಿಸಿ ಜಾಮೂನು, ಖಾರಭಾತು ಕೇಸರಿಭಾತು, ದೋಸೆಗಳು, ರೊಟ್ಟಿಗಳು, ಪಾಯಸಗಳು, ಜಿಲೇಬಿ.. ಆಹಾ ಎಲ್ಲಾ ಪಟ್ಟಿ ಮಾಡಿ ನಿಮ್ಮ ಆಸೆ ಕೆರಳಿಸಿ ನಿರಾಶೆ ಮಾಡುವುದು ನನ್ನ ಇವತ್ತಿನ ಉದ್ದೇಶ ಅಲ್ಲ.

ನೀವು ಏನೇ ಹೇಳಿ, ನಾಲಗೆ ಚಪಲ ಎಷ್ಟೇ ಇದ್ರೂ ಈ ಮೈ (ಸ್ಥೂಲಕಾಯ) ಅನ್ನೋದು ಎಲ್ಲಾ ತಿಂಡಿಗಳಿಗೂ ಬ್ರೇಕ್ ಹಾಕಿಸತ್ತೆ. ಮೈ ಬಂದೋರಿಗೆ, ಟೈರು ಬಂದೋರಿಗಾಗಿ dietary foodದೇ ಬೇರೆ ದೊಡ್ಡ ಲಿಸ್ಟ್ ಇದೆ. ಅದನ್ನ ಇನ್ನೊಂದು ಸಲ ಹೇಳ್ತೀನಿ.

ಹುಡುಗಿಯರಿಗಂತೂ ನಾನು ಸ್ಲಿಮ್ ಆಗಿರಬೇಕು... ಬೇರೆ ಬೇರೆ ತರಹ ಡ್ರೆಸ್ ಮಾಡ್ಕೊಬೇಕು, ಫಿಟ್ ಆಗಿರಬೇಕು ಅಂತ ಮನಸ್ಸಿನ ಒಳಗೊಳಗೆ ಬಯಕೆ. ಹುಡುಗರಿಗಾದ್ರೆ ಬೈಸೆಪ್ಸ್ ಬೆಳಸಬೇಕು 6 ಪ್ಯಾಕ್ 8 ಪ್ಯಾಕ್ ಮಾಡ್ಕೊಬೇಕು ಅಂತ ಆಸೆ.

ಆದ್ರೆ ಇವರೆಲ್ಲ ತಮ್ಮ ನಾಲಿಗೇನ ಹೇಗೆ ತಾನೆ ಟೋನ್ ಮಾಡ್ಕೋತಾರೋ ಗೊತ್ತಿಲ್ಲ. ಹೆಲ್ತಿಯಾಗಿರಬೇಕು ನಿಜ, ಆದ್ರೆ ನಾಲಗೆಗೆ ಮೋಸ ಮಾಡಿನ? nah ಅಂತ ಕೆಲವರು ತಿಂಡಿಪೋತ ರಾಮಣ್ಣ ಆಗಿಬಿಟ್ಟಿದ್ದಾರೆ.

ಈ ತಿಂಡಿಪೋತ ರಾಮಣ್ಣ ಹೀಗೆ ಒಂದ್ಸಲ ಕಾಂಗ್ರೆಸ್ ಕಡಲೆಬೀಜ ತಿಂತಾ ಯೋಚನೆಮಾಡ್ದ. ಈ ಜನ ತಮ್ಮ ಬಾಹ್ಯ ಸೌಂದರ್ಯಕ್ಕಾಗಿ ಎಷ್ಟೆಲ್ಲಾ ಕಷ್ಟ ಪಡ್ತಾರೆ. ಆದರೆ, ಇವರಲ್ಲಿ ಎಷ್ಟು ಜನ ತಮ್ಮ ಆಂತರಿಕ ಸೌಂದರ್ಯ ಹೆಚಿಸ್ಕೊಳ್ಳಕೆ ಪ್ರಯತ್ನಪಡ್ತಿದಾರೆ ಅಂತ.

ಹೀಗೆ ಒಬ್ಬ ಹುಡುಗನ ಹತ್ರ ಹೋಗಿ ಕೇಳ್ದ. ನೀನೇನೋ 6 ಪ್ಯಾಕ್ ಮಾಡ್ಕೊಂಡು ಚೆನ್ನಾಗಿ ಕಾಣತಿದ್ಯ, ಆದ್ರೆ ನಿನ್ನ ಮನಸಿನಲ್ಲಿರೋ ಸೌಂದರ್ಯ ಎಷ್ಟು ಹೆಚ್ಚಿದೆ ಅಂತ ಹೇಳು ನೋಡೋಣ ಅಂದ.

ಆಗ ಆ ಹುಡ್ಗ ಹೇಳದ್ನಂತೆ... ನನ್ನ ಮನಸಿನಲ್ಲಿರೋ ಸೌಂದರ್ಯ ನನ್ನ ಜಿಮ್ ಗೆ ಬರ್ತಾಳೆ.. ಅವಳೂ ಸೈಜ್ 0 ಗೆ ಟ್ರೈ ಮಾಡ್ತಿದಾಳೆ ಅಂತ. ಹಾಗೆ ರಾಮಣ್ಣ ಹುಡುಕ್ತಾ ಹೋದಾಗ ಯೋಗ, ಪ್ರಾಣಾಯಾಮ ಮಾಡೋವ್ರು ಕಾಣ್ತಾರೆ. ನೀವು ಯಾಕೆ ಯೋಗ ಪ್ರಾಣಾಯಾಮ ಮಾಡ್ತಿರ ಅಂತ ಕೇಳ್ದಾಗ, ಆರೋಗ್ಯಕಾಗಿ ಸ್ವಲ್ಪಮಟ್ಟಿನ ಮನಶ್ಯಾಂತಿಗಾಗಿ ಅನ್ನೋ ಸಮಾಧಾನ ಸಿಗುವ ಉತ್ತರಗಳು ಸಿಕ್ತು.

ಇಲ್ಲಿ ಆತಂರಿಕ ಸೌಂದರ್ಯ ಎಂದರೇನು?

ಪ್ರಶ್ನೆಗೆ ಉತ್ತರ ಸಿಗಬೇಕಾದರೆ ನಾವು ರಾಮಣ್ಣ ತರಹ ಕಡ್ಲೆಕಾಯಿಬೀಜ ತಿನ್ಕೊಂಡು ಹೋಗಬೇಕಾ? ಹೀಗೆ ರಾಮಣ್ಣ ಒಬ್ಬ ಸನ್ಯಾಸಿನ ಕೇಳ್ದಾಗ... ಅಂತರ್ ಸೌಂದರ್ಯ ಹೆಚ್ಚಬೇಕಾದರೆ ನನ್ನ ಪ್ರಕಾರ ಮನುಷ್ಯ ಎಲ್ಲ ಸಾತ್ವಿಕ ಗುಣಗಳನ್ನು ಅಳವಡಿಸಿಕೊಳ್ಳಬೇಕು. ನಮ್ಮ ವೇದಾಂತಿಗಳು.. ಗುರುಗಳು ಹೇಳುವ ಹಾದಿಯಲ್ಲಿ ನಡೆಯಬೇಕು ಅಂದ್ರಂತೆ.

ನಮ್ಮ ಗುರುಗಳು ಹಾಗು ವೇದಾಂತಿಗಳು ಇನ್ನು ರಿಸರ್ಚ್ ಅಥವಾ ಅಧ್ಯಯನ ಮಾಡ್ತಾನೆ ಇದ್ದಾರೆ. ಜನರಿಗೆ ತಮ್ಮ ಆಂತರಿಕ ಸೌಂದರ್ಯವನ್ನು ಹೆಚಿಸ್ಕೊಳ್ಳೊ ಟಿಪ್ಸ್ ಕೊಡೋಕೆ. ಆಂತರಿಕ ಸೌಂದರ್ಯದ ಬಗ್ಗೆ ಈಗಷ್ಟೆ ಬಹಿರಂಗವಾಗಿರೊ ಮಾಹಿತಿ ಪ್ರಕಾರ ಒಟ್ಟು ಮೂರು ಟೈಪ್ ಜನ ಇದಾರಂತೆ.

1) ಆಂತರಿಕ ಸೌಂದರ್ಯದ ಅರಿವೇ ಇಲ್ಲದವರ ಒಂದು ವರ್ಗ.
2) ಚೂರುಪಾರು ಗೊತ್ತಿದೆ ಆದರೆ ಇನ್ನೂ ತಿಳಿಬೇಕಾಗಿರೋವ್ರ ಮತ್ತೊಂದು ವರ್ಗ.
3) ಎಲ್ಲ ತಿಳಿದು ಇನ್ನು ತಿಳಿದು ಜನರಿಗೆ ಹೇಳುವ ಪ್ರಯತ್ನ ಇನ್ನೊಂದು ವರ್ಗ.

knowledge is proud it knows so much but wisdom is humble that, it can know no more. ಎಲ್ಲರೂ ನಮ್ಮ ರಾಮಣ್ಣನವರ ವರ್ಗಕ್ಕೆ ಸೇರಿದವರೇ ಎನ್ನುವುದು ನನ್ನ ಕಲ್ಪನೆ, ಸುಮ್ಮನೆ ಭಾವನೆ.

English summary

Knowledge is proud | Windom is humble | Control over eating | ತಿಂಡಿ ಪೋತ ರಾಮಣ್ಣನ ಅನುಭವ ಮಂಟಪ

It is always good to have control over what we eat, how we appear to others. But should it be at the cost of taste buds? Nah argues munching expert Ramanna.
X
Desktop Bottom Promotion