For Quick Alerts
ALLOW NOTIFICATIONS  
For Daily Alerts

ಮಂಗಳೂರಲ್ಲಿ ಆಹಾ ಬಿರಿಯಾನಿ ಬಾಯಲ್ ಸುರಿಯಾನಿ

By Prasad
|

ಹೈದರಾಬಾದಿ ಚಿಕನ್ ದಮ್ ಬಿರಿಯಾನಿ, ಲಖನೌವಿ ಮಟನ್ ದಮ್ ಬಿರಿಯಾನಿ, ಸಮುಂದರಿ ರತನ್ ಬಿರಿಯಾನಿ, ಮುರ್ಗ್ ಶಹಜಹಾನಿ ಬಿರಿಯಾನಿ..... ಆಹಾ ಬಿರಿಯಾನಿ ಬಾಯಲ್ ಸುರಿಯಾನಿ, ಬನ್ನೂರ್ ಕುರಿ.... ಆಹಾಹಾ ದಿಗ್ಗಜರು ಚಿತ್ರದ ಈ ಹಾಡನ್ನು ಕೇಳುತ್ತ, ಬಿರಿಯಾನಿಯ ಘಮಘಮಿಸುವ ವಾಸನೆ ಮೂಗಲ್ಲಿ ತುಂಬಿಕೊಳ್ಳುತ್ತಿದ್ದರೆ, ತಿನ್ನಲು ಮನಸಾಗದೆ ಇರುತ್ತದೆಯೆ.

ವೈವಿಧ್ಯಮಯ ಬಿರಿಯಾನಿಯ ರುಚಿಯನ್ನು ಸವಿಯುವವರಿಗೆ ಇಲ್ಲೊಂದು ಬಾಯಲ್ಲಿ ನೀರಿಳಿಸುವ ಗರಮಾಗರಂ ಸುದ್ದಿಯಿದೆ. ಮಂಗಳೂರಿನಲ್ಲಿ ಈ ಶುಕ್ರವಾರದಿಂದ ಒಂದು ವಾರದವರೆಗೆ ಕೋರಲ್ ಮಲ್ಟಿ ಕ್ಯೂಸಿನ್ ಹೋಟೆಲಿನಲ್ಲಿ ಬಿರಿಯಾನಿ ಉತ್ಸವವನ್ನು ಆಯೋಜಿಸಲಾಗಿದೆ. ಹೈದರಾಬಾದಿ, ಮಂಗಳೂರು ಮತ್ತು ಉತ್ತರ ಭಾರತದ ಸ್ವಾದಿಷ್ಟ ಬಿರಿಯಾನಿಗಳು ನಾಲಿಗೆ ರುಚಿಗೆ ದಕ್ಕಲಿವೆ.

ಬಿರಿಯಾನಿ ಮಾತ್ರವಲ್ಲ ಬಗೆಬಗೆಯ ಕಬಾಬ್‌ಗಳು ಕೂಡ ಮಾಂಸಾಹಾರಿಗಳ ಜಿಹ್ವಾಚಾಪಲ್ಯವನ್ನು ತಣಿಸಲಿವೆ. ಮುರ್ಗ್ ಜಫ್ರಾನಿ ಟಿಕ್ಕಾ, ಮುರ್ಗ್ ಪೇಶಾವರಿ, ಮಟನ್ ಗಲೌಟಿ ಕಬಾಬ್, ಮೆಹರಬಾನ್ ಖಾಸ್ ಪನೀರ್ ಟಿಕ್ಕಾ ಭೋಜ್ಯಗಳು ಖಾಸ್ ಅತಿಥಿಗಳಿಗಾಗಿ ಕಾದಿರುತ್ತವೆ.

ಇಂಥ ರುಚಿಕಟ್ಟಾದ ಬಿರಿಯಾನಿ ಮತ್ತು ಕಬಾಬ್‌ಗಳನ್ನು ತಯಾರಿಸಿ ಬಡಿಸಲು ಉತ್ತರ ಭಾರತದ ಪ್ರಸಿದ್ಧ ಬಾಣಸಿಗರೇ ಮಂಗಳೂರಿಗೆ ಬಂದಿದ್ದಾರೆ. ಮಂಗಳೂರಿನ ಓಷನ್ ಪರ್ಲ್ ಹೋಟೆಲ್ ಈ ಭೋಜನೋತ್ಸವವನ್ನು ಆಯೋಜಿಸಿದೆ. ಇನ್ನೇಕೆ ತಡ ಇಂದೇ ದಾಳಿ ಮಾಡಿ, ಬಿರಿಯಾನಿ ಕಬಾಬ್‌ಗನ್ನು ಜಮಾಯಿಸಿ.

English summary

Biriyani festival in Mangalore | Biriyani from North India | ಮಂಗಳೂರಿನಲ್ಲಿ ಬಿರಿಯಾನಿ ಉತ್ಸವ | ಆಹಾ ಬಿರಿಯಾನಿ ಬಾಯಲ್ ಸುರಿಯಾನಿ

Mangalore based hotel Ocean Pearl has organized weeklong biriyani festival in Mangalore from Friday, Feb 2. Chefs from north India are also partipating in the mouth watering event. One can taste Hyderabadi chicken dum biryani, Lucknowi mutton dum biryani, Murgh zafrani tikka recipes.
Story first published: Thursday, February 2, 2012, 15:40 [IST]
X