For Quick Alerts
ALLOW NOTIFICATIONS  
For Daily Alerts

ನಾಲಿಗೆಯ ರುಚಿ ತಣಿಸುವ ರುಚಿಕರವಾದ ಈರುಳ್ಳಿ ಚಟ್ನಿ ರೆಸಿಪಿ

|

ಭಾರತೀಯ ಅಡುಗೆಗಳಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಕೊತ್ತಂಬರಿಯಿಂದ ಹಿಡಿದು ಬೆಳ್ಳುಳ್ಳಿಯವರೆಗೆ ಹಲವನ್ನು ಬಳಸಿ ಚಟ್ನಿಯನ್ನು ತಯಾರಿಸಲಾಗುತ್ತದೆ. ಅಡುಗೆ ಪರಿಣಿತರ ಪ್ರತಿಭೆಯಿಂದಾಗಿ ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ ಈ ಚಟ್ನಿ ಬಾಯಲ್ಲಿ ನೀರೂರಿಸುವಂತಿರುತ್ತದೆ.

ಭಾರತೀಯ ಅಡುಗೆಯಲ್ಲಿ ಚಟ್ನಿಯು ಬಲು ಪ್ರಸಿದ್ಧ. ಎಲೆಯಂಚಿಗೆ ಬಡಿಸುವ ಪಲ್ಯ, ಕೋಸಂಬರಿ, ಗೊಜ್ಜಿನೊಂದಿಗೆ ಚಟ್ನಿಗೆ ಕೂಡ ವಿಶೇಷ ಸ್ಥಾನವಿದೆ. ಚಪಾತಿ, ದೋಸೆ, ರೊಟ್ಟಿ ಅಥವ ಅನ್ನದೊಂದಿಗೆ ಇದನ್ನು ಬಡಿಸಿಕೊಂಡು ತಿನ್ನಲು ರುಚಿಕರವಾಗಿರುತ್ತದೆ. ಸಿಹಿ ಮತ್ತು ಖಾರ ಎರಡೂ ಬಗೆಯ ಚಟ್ನಿಗಳನ್ನು ಮಾಡಲಾಗುತ್ತದೆ.

ನಾಲಿಗೆಯ ರುಚಿ ತಣಿಸುವ ವಿಭಿನ್ನ ರುಚಿಯ ಚಟ್ನಿಯನ್ನು ಸವಿಯಲು ನಿಮಗೆ ಅನಿಸುವುದಿಲ್ಲವೇ? ಹಾಗಾದರೆ ಇನ್ನೇಕೆ ತಡ ಬನ್ನಿ ಇಂದು ಬೋಲ್ಡ್ ಸ್ಕೈ ನಿಮಗಾಗಿ ದೋಸೆ, ಇಡ್ಲಿ ಇಲ್ಲವೇ ಚಪಾತಿಯೊಡನೆ ಒಳ್ಳೆಯ ಕಾಂಬಿನೇಷನ್ ಆಗಿರುವ ಈರುಳ್ಳಿ ಚಟ್ನಿ ಮಾಡುವ ವಿಧಾನವನ್ನು ನಿಮ್ಮ ಮುಂದಿಡುತ್ತಿದೆ.

Tasty Onion Chutney recipe

ಬಾಯಿಯಲ್ಲಿ ನೀರೂರಿಸುವ ಕೊತ್ತಂಬರಿ ಸೊಪ್ಪಿನ ಚಟ್ನಿ!

ಬೇಕಾಗುವ ಸಾಮಗ್ರಿಗಳು:
1 ಈರುಳ್ಳಿ
1/2 ಕಪ್ ತೆಂಗಿನತುರಿ
ಹಸಿಮೆಣಸು 2 - 3
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ : ಎಣ್ಣೆ, ಸಾಸಿವೆ

ಸಮ್ಮರ್ ಸ್ಪೆಶಲ್ ರುಚಿಯಾದ ಮಾವಿನ ಕಾಯಿ ಚಟ್ನಿ

ಮಾಡುವ ವಿಧಾನ:
*ಈರುಳ್ಳಿಯನ್ನು ಸಿಪ್ಪೆ ತೆಗೆಯದೆ ಸಮನಾಗಿ ಎರಡು ಭಾಗಗಳಾಗಿ ಕತ್ತರಿಸಿಕೊಳ್ಳಿ.
*ಇದಕ್ಕೆ ಒಗ್ಗರಣೆ ಸೌಟು ಇದ್ದರೆ ಅನುಕೂಲ. ಒಗ್ಗರಣೆ ಸೌಟಿನಲ್ಲಿ ಒಂದು ಚಮಚ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಈರುಳ್ಳಿ, ಹಸಿಮೆಣಸು (ಇಡಿಯಾಗೇ ಹಾಕಿ) ಹಾಕಿ ಒಂದು ಪ್ಲೇಟ್ ಮುಚ್ಚಿ ಬೇಯಲು ಬಿಡಿ. 3 - 4 ನಿಮಿಷ ಬೇಯಿಸಿ.
*ಒಮ್ಮೆ ಈರುಳ್ಳಿ ಚೂರುಗಳನ್ನು ಮಗುಚಿ ಪುನಃ ನಾಲ್ಕೈದು ನಿಮಿಷ ಬೇಯಿಸಿ.
*ಈರುಳ್ಳಿ ಚೂರುಗಳು ಸ್ವಲ್ಪ ತಣ್ಣಗಾದ ಅವುಗಳ ಮೇಲಿನ ಸಿಪ್ಪೆ ತೆಗೆದುಬಿಡಿ.
*ನಂತರ ಹಸಿಮೆಣಸು ಮತ್ತು ಈರುಳ್ಳಿ ಚೂರುಗಳನ್ನು ತೆಂಗಿನ ತುರಿಯೊಡನೆ ತರಿಯಾಗಿ ರುಬ್ಬಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
*ಎಣ್ಣೆ, ಸಾಸಿವೆಯ ಒಗ್ಗರಣೆ ಮಾಡಿ, ದೋಸೆ ಇಲ್ಲವೇ ಇಡ್ಲಿಯೊಡನೆ ಸರ್ವ್ ಮಾಡಿ.

X
Desktop Bottom Promotion