For Quick Alerts
ALLOW NOTIFICATIONS  
For Daily Alerts

ಸಾಸಿವೆ, ಪಾಲಾಕ್ ಸೊಪ್ಪಿನ ಚಟ್ನಿ

|

ಸರ್ಸೋನ್ ಕ ಸಾಗಾ ಅನ್ನುವ ಚಟ್ನಿ ಪಂಜಾಬ್ ನಲ್ಲಿ ತುಂಬಾ ಫೇಮಸ್. ಪಂಜಾಬಿ ಹೋಟೆಲ್ ಗಳಿಗೆ ಹೋದರೆ ರೊಟ್ಟಿ ಜೊತೆ ಸವಿಯಲು ಈ ಚಟ್ನಿಯನ್ನು ಕೊಡುತ್ತಾರೆ.

ಈ ಚಟ್ನಿಯನ್ನು ನಾವು ಮಾಡುವಂತಹ ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ಚಪಾತಿ ಜೊತೆ ತಿನ್ನಲೂ ರುಚಿಯಾಗಿರುತ್ತದೆ. ಈ ಚಟ್ನಿಯ ರುಚಿ ಸವಿಯಬೇಕೆಂದು ಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

Sarson Ka Saag Recipe

ಬೇಕಾಗುವ ಸಾಮಾಗ್ರಿಗಳು
ಸಾಸಿವೆ ಸೊಪ್ಪಿನ ಕಟ್ಟು 5
ಪಾಲಾಕ್ ಸೊಪ್ಪು 1 ಕಟ್ಟು
ಈರುಳ್ಳಿ 2
ಹಸಿ ಮೆಣಸಿನಕಾಯಿ 2-3
ಶುಂಠಿ ಪೀಸ್
ಬೆಳ್ಳುಳ್ಳಿ ಎಸಳು 5-6
ಅರಿಶಿಣ ಪುಡಿ 1 ಚಮಚ
ಜೀರಿಗೆ 1 ಚಮಚ
ಕಡಲೆ ಹಿಟ್ಟು 1 ಚಮಚ
ರುಚಿಗೆ ತಕ್ಕ ಉಪ್ಪು
ತುಪ್ಪ 2 ಚಮಚ

ತಯಾರಿಸುವ ವಿಧಾನ:

* ಸಾಸಿವೆ ಮತ್ತು ಪಾಲಾಕ್ ಸೊಪ್ಪನ್ನು ಸ್ವಚ್ಛ ಮಾಡಿ ತೊಳೆಯಿರಿ. ನಂತರ ಚಿಕ್ಕದಾಗಿ ಕತ್ತರಿಸಿ.

* ಈಗ ಪ್ಯಾನ್ ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ, ಅದರಲ್ಲಿ ಜೀರಿಗೆ ಹಾಕಿ, ನಂತರ ಶುಂಠಿ ಮತ್ತು ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಹಾಕಿ 1 ನಿಮಿಷ ಫ್ರೈ ಮಾಡಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

* ಈಗ ಸಾಸಿವೆ ಮತ್ತು ಪಾಲಾಕ್ ಸೊಪ್ಪನ್ನು ಪ್ಯಾನ್ ಗೆ ಹಾಕಿ, ಅರಿಶಿಣ ಮತ್ತು ಉಪ್ಪನ್ನು ಹಾಕಿ 5 ನಿಮಿಷ ಫ್ರೈ ಮಾಡಿ.

* ನಂತರ ಉರಿಯಿಂದ ಇಳಿಸಿ ತಣ್ಣಗಾಗಲು ಇಡಿ. ಬಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

* ಈಗ ಪ್ಯಾನ್ ಅನ್ನು 1 ಚಮಚ ತುಪ್ಪ ಹಾಕಿ ಬಿಸಿ ಮಾಡಿ, ಸಾಸಿವೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಮಾಡುವಾಗ ರುಬ್ಬಿದ ಚಟ್ನಿಯನ್ನು ಹಾಕಿ 2-3 ನಿಮಿಷ ಕುದಿಸಿದರೆ ಸಾಸಿವೆ ಸೊಪ್ಪಿನ ಚಟ್ನಿ ರೆಡಿ.

English summary

Sarson Ka Saag Recipe

Sarson ka saag is the mustard leaves which are found abundantly in Punjab. This dish is a rich and delicious preparation. Two kinds of greens are used to prepare this recipe- mustard leaves and spinach leaves.
X
Desktop Bottom Promotion