For Quick Alerts
ALLOW NOTIFICATIONS  
For Daily Alerts

ಪೇರಳೆ ಹಣ್ಣು ಮತ್ತು ಒಣದ್ರಾಕ್ಷಿಯ ಚಟ್ನಿ

By Neha Mathur
|

ಪಿಯರ್ಸ್ ಮತ್ತು ಒಣದ್ರಾಕ್ಷಿ ಹಾಕಿ ಮಾಡುವ ಚಟ್ನಿಯ ರುಚಿ ನೋಡಿದ್ದೀರಾ? ಇಲ್ಲ ಅಂದರೆ ಒಮ್ಮೆ ನೋಡಿಯೇ ಬಿಡಿ. ಇದನ್ನು ಬ್ರೆಡ್ ಜೊತೆ ತಿನ್ನ ಬಹುದು, ಏನಾದರೂ ಗ್ರಿಲ್ಡ್ ಮಾಡಿದರೆ ಅದರ ಜೊತೆ ತಿನ್ನಬಹುದು, ಚೀಸ್ ಜೊತೆ ತಿನ್ನಬಹುದು, ಅಷ್ಟೇ ಏಕೆ ಅನ್ನದ ಜೊತೆ ಕಲೆಸಿಕೊಂಡು ತಿನ್ನಲು ಸೂಪರ್ ಆಗಿರುತ್ತದೆ.

ಈ ಚಟ್ನಿ ಮಾಡಿದರೆ 4 ವಾರಗಳ ಇಡಬಹುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಾಗ್ರಿಗಳು
ಪಿಯರ್ಸ್ ಅಥವಾ ಪೇರು ಹಣ್ಣು (Pears)
ಸಕ್ಕರೆ 1 ಕಪ್
ಬಿಳಿ ವಿನಿಗರ್ 1 ಕಪ್
Balsamic ವಿನಿಗರ್ 4 ಚಮಚ
ಈರುಳ್ಳಿ 1 ಕಪ್
ಶುಂಠಿ ( ಸ್ವಲ್ಪ)
3 ಬೆಳ್ಳುಳ್ಳಿ(ಚೆನ್ನಾಗಿ ತುರಿದಿದ್ದು)
ಖಾರದ ಪುಡಿ 1 ಚಮಚ
ಒಣದ್ರಾಕ್ಷಿ ಅರ್ಧ ಕಪ್
ಲವಂಗ 1-0-12
ಚಕ್ಕೆ(ಒಂದು ಇಂಚಿನಷ್ಟು ದೊಡ್ಡದಿರುವ ಪೀಸ್ 4-5)
ಉಪ್ಪು 2 ಚಮಚ

ಸ್ಟೆಪ್ 1

ಸ್ಟೆಪ್ 1

ದೊಡ್ಡ ಪಾತ್ರೆಗೆ ಬಿಳಿ ವಿನೆಗರ್ ಮತ್ತು ಸಕ್ಕರೆ ಹಾಕಿ.

ಅದನ್ನು ಉರಿ ಮೇಲೆ ಕುದಿಸಿ.

ಸ್ಟೆಪ್ 2

ಸ್ಟೆಪ್ 2

ನಂತರ ಉಳಿದ ಸಾಮಾಗ್ರಿಗಳನ್ನು ಹಾಕಿ, ಕಡಿಮೆ ಉರಿಯಲ್ಲಿ ಒಂದು ಗಂಟೆ ಬೇಯಿಸಿ(ಮಿಶ್ರಣ ಬೆಂದು ಚೆನ್ನಾಗಿ ಮಿಕ್ಸ್ ಆಗುವವರೆಗೆ).

ಸ್ಟೆಪ್ 3

ಸ್ಟೆಪ್ 3

ನಂತರ ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ.

ಸ್ಟೆಪ್ 4

ಸ್ಟೆಪ್ 4

ನಂತರ ಅದನ್ನು ಶುದ್ಧೀಕರಿಸಿದ ಜಾರ್ ನಲ್ಲಿ ಹಾಕಿ ಮುಚ್ಚಳವಾಗಿ ಬಿಗಿಯಾಗಿ ಹಾಕಿಡಿ, ಬೇಕಾದಾಗ ಬಳಸಿ.

ಚಟ್ನಿ ರೆಡಿ

ಚಟ್ನಿ ರೆಡಿ

ಈ ಚಟ್ನಿ 3-4 ವಾರಗಳ ಕಾಲ ಇಟ್ಟು ತಿನ್ನಬಹುದು.

English summary

Pear And Raisin Chutney Recipe

Pear chutney chutney is so versatile, you can pair it with crackers or cheese or use as a topping for your grilled meat or lick it just like that. We even like to mix a little with our daily rice and lentil.
 
X
Desktop Bottom Promotion