For Quick Alerts
ALLOW NOTIFICATIONS  
For Daily Alerts

ರುಚಿಯಾದ ಬದನೆಕಾಯಿ ಚಟ್ನಿಯ ತಯಾರಿ ವಿಧಾನ

|

ಇಂದಿನ ಬೆಲೆ ಏರಿಕೆಯ ಜೀವನದಲ್ಲಿ ಸ್ವಾದಿಷ್ಟ ಊಟವನ್ನು ಸವಿಯುವುದನ್ನು ಬಿಟ್ಟು ಆರೋಗ್ಯಕರ ಪದಾರ್ಥಗಳನ್ನು ಸೇವಿಸುವುದೂ ಕೂಡ ದುಸ್ತರವಾಗಿದೆ. ಆದರೂ ಹೊಟ್ಟೆ ತಾಳ ಹಾಕುವಾಗ ಏನಾದರೂ ಸಿದ್ಧಪಡಿಸಲೇಬೇಕು, ಅಲ್ಲದೆ ಕಡಿಮೆ ಸಮಯದಲ್ಲಿ ರುಚಿಯಾಗಿರುವುದನ್ನು ತಯಾರಿಸುವುದೆಂದರೆ ಇಂದಿನ ಒತ್ತಡ ಜೀವನದಲ್ಲಿ ತುಸು ಕಷ್ಟವೇ.

ಆದರೂ ನಿಮಗೆ ಸರಳವಾಗಿ ಸುಲಭವಾಗಿ ನಾವು ಇಲ್ಲಿ ನೀಡಿರುವ ಖಾದ್ಯವನ್ನು ತಯಾರಿಸಬಹುದು. ನಿಮ್ಮ ಸಮಯವನ್ನು ಉಳಿತಾಯ ಮಾಡುವುದರ ಜೊತೆಗೆ ಇದು ನಿಮ್ಮ ಮಧ್ಯಾಹ್ನದ ಊಟ ಹಾಗೂ ಬೆಳಗಿನ ತಿಂಡಿಯ ಸವಿಯನ್ನು ಹೆಚ್ಚಿಸುವುದೂ ಸುಳ್ಳಲ್ಲ. ಬದನೆಕಾಯಿಂದ ತಯಾರಿಸಬಹುದಾದ ಈ ಸರಳ ಚಟ್ನಿಯು ನಿಮಗೆ ಆರೋಗ್ಯವನ್ನು ಒದಗಿಸುವುದಲ್ಲದೆ ಬಾಯಿಗೆ ರುಚಿಯನ್ನೂ ನೀಡುತ್ತದೆ.

ಕೇವಲ ಕೆಲವೇ ನಿಮಿಷದಲ್ಲಿ ಬದನೆಕಾಯಿ ಚಟ್ನಿಯನ್ನು ತಯಾರಿಬಹುದು. ಇದನ್ನು ಬೇಯಿಸಿ ಮಾಡುವುದರಿಂದ ಹಾಳಾಗುವ ಸಂಭವ ಕೂಡ ಕಡಿಮೆಯೇ. ಹಾಗಿದ್ದರೆ ನಿಮ್ಮ ಬಾಯಿಯ ಸ್ವಾದವನ್ನು ಹೆಚ್ಚಿಸುವ ಈ ಚಟ್ನಿ ವಿಧಾನದತ್ತ ಕಣ್ಣು ಹರಿಸಿ ಮತ್ತು ತಯಾರಿಸಿ.

Mouthwatering Brinjal Chutney Recipe

ಗರಿಗರಿ ದೋಸೆಯೊಂದಿಗೆ ರುಚಿಯಾದ ಬಟಾಣಿ ಚಟ್ನಿ

*ಪ್ರಮಾಣ: 3
*ಸಿದ್ಧತಾ ಸಮಯ:
15 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ:
10 ನಿಮಿಷಗಳು

ಬೇಕಾಗುವ ಸಾಮಾಗ್ರಿ:
*ಸಣ್ಣ ಬದನೆಕಾಯಿ - 4
*ಕಡಲೆ ಕಾಳು 2 - ಚಮಚ
*ಹಸಿಮೆಣಸು-2
*ಕೊತ್ತಂಬರಿ ಸೊಪ್ಪು -1/2 ಕಪ್
*ತುರಿದ ತೆಂಗಿನ ಕಾಯಿ 1-2 ಚಮಚ
*ಬೆಳ್ಳುಳ್ಳಿ ಎಸಳು- 2
*ಉಪ್ಪು ರುಚಿಗೆ ತಕ್ಕಷ್ಟು
*ಎಣ್ಣೆ 1 ಚಮಚ
*ಸಾಸಿವೆ 1/2 ಚಮಚ
*ಕರಿಬೇವಿನೆಲೆ 2-3 ಎಸಳು

ಮಾಡುವ ವಿಧಾನ
* ಒಂದು ಕಪ್ ನೀರನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕುದಿಸಿ. ಇದಕ್ಕೆ ತುಂಡರಿಸಿದ ಬದನೆ ಮತ್ತು ಬೆಳ್ಳುಳ್ಳಿಯನ್ನು ಹಾಕಿ. ಚೆನ್ನಾಗಿ ಬೇಯಿಸಿಕೊಳ್ಳಿ. ಇದನ್ನು ನೀರಿನಿಂದ ತೆಗೆದು ತಣ್ಣಗಾಗುವರೆಗೆ ಸ್ವಲ್ಪ ಹೊತ್ತು ಕಾಯಿರಿ.
* ಬೆಂದ ಬದನೆಕಾಯಿ, ಬೆಳ್ಳುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಹುರಿದ ಕಡಲೆಕಾಳು, ಉಪ್ಪು ಮತ್ತು ತೆಂಗಿನ ತುರಿಯನ್ನು ಮಿಕ್ಸರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಬದನೆ ಬೇಯಿಸಿದ ನೀರನ್ನು ರುಬ್ಬುವಾಗ ಬಳಸಿ.
* ತದನಂತರ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಳ್ಳಿ ಇದಕ್ಕೆ ಸಾಸಿವೆಯನ್ನು ಹಾಕಿ. ಇದು ಸಿಡಿಯುತ್ತಿದ್ದಂತೆ ಕರಿ ಬೇವಿನ ಎಲೆಯನ್ನು ಹಾಕಿ ಒಗ್ಗರಣೆ ಸಿದ್ಧಪಡಿಸಿಕೊಳ್ಳಿ. ನಂತರ ಚಟ್ನಿಗೆ ಈ ಒಗ್ಗರಣೆಯನ್ನು ಸೇರಿಸಿ. ರೊಟ್ಟಿಯೊಂದಿಗೆ ಸವಿಯಲು ಬದನೆ ಚಟ್ನಿ ಹೇಳಿ ಮಾಡಿಸಿದ ಖಾದ್ಯವಾಗಿದೆ.

English summary

Mouthwatering Brinjal Chutney Recipe

Brinjal Chutney, a spicy and tempting condiment made from brinjal, onion, garlic and tamarind with many other spices, is indispensable south Indian relish.
Story first published: Tuesday, August 5, 2014, 15:05 [IST]
X
Desktop Bottom Promotion