For Quick Alerts
ALLOW NOTIFICATIONS  
For Daily Alerts

ಬಾಯಲ್ಲಿ ನೀರೂರಿಸುವ ಟೊಮೇಟೊ ಚಟ್ನಿ

By Manohar.V
|

ಭಾರತೀಯ ಶೈಲಿಯಲ್ಲಿ ನಾವು ಹಲವಾರು ರೀತಿಯ ತರಕಾರಿ ಚಟ್ನಿಯನ್ನು ಮಾಡುತ್ತೇವೆ. ಅಲ್ಲದೆ ಭಾರತೀಯರ ಅಡುಗೆಯಲ್ಲಿ ಚಟ್ನಿಗೆ ಅದರದೇ ಆದ ಸ್ಥಾನಮಾನವಿದೆ. ಕೆಲವೊಂದು ಅಡುಗೆ ಪರಿಣಿತರ ಕೈಚಳಕದಿಂದಾಗಿ ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ ಇಂತಹ ಸ್ವಾದಿಷ್ಟವಾದ ಹಾಗೂ ರುಚಿಕರವಾಗಿರುವ ಟೊಮೆಟೊ ಚಟ್ನಿ ಬಾಯಲ್ಲಿ ನೀರೂರಿಸುವಂತಿರುತ್ತದೆ.

ಭಾರತೀಯ ಶೈಲಿಯಲ್ಲಿ ಮಾಡಲಾಗುವ ಇಂತಹ ಹುಳಿ ಹಾಗೂ ಸಿಹಿ ಮಿಶ್ರಿತ ಸ್ವಾದಿಷ್ಟ ಹಾಗೂ ರುಚಿಕರವಾಗಿರುವ ಟೊಮೆಟೊ ಚಟ್ನಿಯನ್ನು ಚಪಾತಿ, ದೋಸೆ, ಬ್ರೆಡ್ ಸ್ಲೈಸ್ ಅಥವ ಅನ್ನದೊಂದಿಗೆ ಇದನ್ನು ಬಡಿಸಿಕೊಂಡು ತಿನ್ನಲು ರುಚಿಕರವಾಗಿರುತ್ತದೆ.

Lip smacking Tomato chutney Recipe

ನಾವಿಂದು ಟೊಮೊಟೊ ಬಳಸಿಕೊಂಡು ಸರಳವಾಗಿ ಮಾಡಬಹುದಾದ ಸಿಹಿ ಹಾಗೂ ಹುಳಿ ಸಿಂಪಲ್ ಚಟ್ನಿಯ ಬಗ್ಗೆ ನಿಮಗೆ ಹೇಳಿಕೊಡುತ್ತೇವೆ. ಇದನ್ನು ಬಹಳ ಸುಲಭವಾಗಿ ಮತ್ತು ಬಹಳ ಬೇಗ ಮಾಡಿಬಿಡಬಹುದು.

ಬೇಕಾಗುವ ಸಾಮಗ್ರಿಗಳು:

ಟೊಮೆಟೊ - 3 ರಿಂದ 4

ಈರುಳ್ಳಿ - ಎರಡು ( ತುಂಡು ಮಾಡಲಾಗಿರುವ)

ಬೆಳ್ಳುಳ್ಳಿ - ಹತ್ತು ಎಸಳು

ಒಣಮೆಣಸಿನಕಾಯಿ - ರುಚಿಗೆ ತಕ್ಕಷ್ಟು

ಹುಣಸೆಹಣ್ಣು - ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಕೊತ್ತುಂಬರಿ ಸೊಪ್ಪು - ಸ್ವಲ್ಪ

ಕರಿಬೇವು - ಸ್ವಲ್ಪ

ಒಗ್ಗರಣೆಗೆ:
ಎಣ್ಣೆ - ಎರಡು/ನಾಲ್ಕು ಚಮಚ ಸಾಸಿವೆ,ಜೀರಿಗೆ,

ಉದ್ದಿನಬೇಳೆ - ಒಂದು ಚಮಚ

ತಯಾರಿಸುವ ವಿಧಾನ:

ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ,ಕಾದ ನಂತರ ಈರುಳ್ಳಿ, ಬೆಳ್ಳುಳ್ಳಿ ಮತ್ತು ಒಣಮೆಣಸಿನಕಾಯಿಗಳನ್ನು ಹಾಕಿ ಎರಡು ನಿಮಿಷ ಚೆನ್ನಾಗಿ ಹುರಿಯಿರಿ,

ಅದಕ್ಕೆ ಹೆಚ್ಚಿದ ಟಮೋಟಗಳನ್ನು ಹಾಕಿ,ಸ್ವಲ್ಪ ಮೆತ್ತಗಾಗುವಂತೆ ಬೇಯಿಸಿ, ಬೆಂದ ಮೇಲೆ ಒಲೆಯಿಂದ ಇಳಿಸಿ, ಅದರ ಜೊತೆಗೆ ಕೊತ್ತುಂಬರಿಸೊಪ್ಪು, ಕರಿಬೇವು, ಹುಣಸೆಹಣ್ಣು ಹಾಗೂ ಉಪ್ಪು ಸೇರಿಸಿ,ಮಿಕ್ಸಿಗೆ ಹಾಕಿ ಅರೆಯಿರಿ. ನೀರು ಅವಶ್ಯಕತೆ ಇಲ್ಲ, ತುಂಬಾ ನುಣ್ಣಗೆ ರುಬ್ಬಬೇಕಾಗಿಲ್ಲ.

ನಂತರ ಒಗ್ಗರಣೆ ಹಾಕಿ, ಅರೆದಿರುವ ಮಿಶ್ರಣವನ್ನು ಒಗ್ಗರಣೆಗೆ ಸೇರಿಸಿ, ಹಸಿವಾಸನೆ ಹೋಗುವವರೆಗೂ, ಸ್ವಲ್ಪ ಗಟ್ಟಿಯಾಗುವವರೆಗೂ ಚೆನ್ನಾಗಿ ಕುದಿಸಿ, ಮಧ್ಯೆ ತಿರುಗಿಸುತ್ತಿರಿ,ತಳಹತ್ತದಂತೆ ನೋಡಿಕೊಂಡು ಗಟ್ಟಿಯಾದ ನಂತರ ಇಳಿಸಿ.

ಇದು ದೋಸೆ,ಇಡ್ಲಿ,ಚಪಾತಿ ಮತ್ತು ಪಕೋಡಗಳಿಗೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ.

ಬ್ರೆಡ್ ಸ್ಲೈಸ್ ಮಧ್ಯೆ ಹಚ್ಚಿಕೊಂಡು ಟೋಸ್ಟ್ ಮಾಡಿಕೊಂಡು ಸಹ ತಿನ್ನಬಹುದು. ಟೋಸ್ಟ್ ಮಾಡದೆಯೂ ತಿನ್ನಬಹುದು.

English summary

Lip smacking Tomato chutney Recipe

Many types of chutney that are prepared in the Indian cuisine. cooking experts use their talent to prepare some lip smacking recipes using basic ingredients.
X
Desktop Bottom Promotion