For Quick Alerts
ALLOW NOTIFICATIONS  
For Daily Alerts

ಗರಿಗರಿ ದೋಸೆಯೊಂದಿಗೆ ರುಚಿಯಾದ ಬಟಾಣಿ ಚಟ್ನಿ

|

ಹೆಚ್ಚಿನವರ ಪ್ರಕಾರ ಬೆಳಗಿನ ಉಪಹಾರ ಎನ್ನುವುದು ಅತೀ ಮುಖ್ಯವಾದ ಆಹಾರವಾಗಿದೆ! ಆರೋಗ್ಯಯುತ ಬೆಳಗಿನ ಉಪಹಾರವನ್ನು ಸೇವಿಸಲು ಆ ಉಪಹಾರ ರುಚಿಯಾಗಿರಬೇಕು ಮತ್ತು ಸಮೃದ್ಧ ಸಾಮಾಗ್ರಿಗಳಿಂದ ಕೂಡಿರಬೇಕು ಎಂದು ನಾವು ಬಯಸುತ್ತೇವೆ.

ಹೆಚ್ಚಿನ ಭಾರತೀಯ ಮನೆಗಳಲ್ಲಿ, ಇಡ್ಲಿ ಮತ್ತು ದೋಸೆಯನ್ನೇ ನಾವು ಹೆಚ್ಚಾಗಿ ಕಾಣುತ್ತೇವೆ, ಬೆಳಗಿನ ಉಪಹಾರದಲ್ಲಿ ಅತಿ ಮುಖ್ಯವಾಗಿ ನಾವು ಭಾರತೀಯರು ಇಡ್ಲಿ ದೋಸೆಯನ್ನೇ ತಯಾರಿಸುತ್ತೇವೆ ಇದರೊಂದಿಗೆ ರುಚಿಕರವಾದ ಚಟ್ನಿಯನ್ನು ಕೂಡ ನೆಚ್ಚಿಕೊಳ್ಳಲು ತಯಾರಿಸುವುದು ಸಾಮಾನ್ಯ.

Green Peas Chutney For Plain Dosa

ದೋಸೆ ಅಥವಾ ಇಡ್ಲಿಯ ಸವಿಯನ್ನು ಹೆಚ್ಚಿಸಲು ಮತ್ತು ನಿಮ್ಮ ಉಪಹಾರವನ್ನು ಇನ್ನಷ್ಟು ಸೊಗಸಾಗಿಸಲು ನಾವಿಂದು ಹಸಿರು ಬಟಾಣಿ ಚಟ್ನಿಯೊಂದಿಗೆ ಬರುತ್ತಿದ್ದೇವೆ. ಈ ಬಟಾಣಿ ಚಟ್ನಿಯಂತೂ ರುಚಿಯಾಗಿದ್ದು ನೀವು ಸೇವಿಸುವ ತಿಂಡಿಯ ಸ್ವಾದವನ್ನು ದುಪ್ಪಟ್ಟುಗೊಳಿಸುವುದರಲ್ಲಿ ಎರಡು ಮಾತಿಲ್ಲ. ಹಾಗಿದ್ದರೆ ಮತ್ತೇಕೆ ತಡ? ನಾವಿಲ್ಲಿ ನೀಡಿರುವ ಹಸಿರು ಬಟಾಣಿ ಚಟ್ನಿಯ ಸರಳ ವಿಧಾನದತ್ತ ಗಮನ ಹರಿಸಿ ಮತ್ತು ಸ್ವಾದಿಷ್ಟ ಚಟ್ನಿಯನ್ನು ತಯಾರಿಸಿ.

ಪ್ರಮಾಣ: 3
*ಸಿದ್ಧತಾ ಸಮಯ: 20 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಪುದೀನಾ ಸಾಸ್ ಹೆಚ್ಚಿಸುವುದು ತಿಂಡಿಯ ರುಚಿ

ಸಾಮಾಗ್ರಿಗಳು
*ಹಸಿರು ಬಟಾಣಿ - 1 ಕಪ್
*ತುರಿದ ತೆಂಗಿನ ತುರಿ - 1 ಕಪ್
*ಕತ್ತರಿಸಿದ ಈರುಳ್ಳಿ - 1 ಮಧ್ಯಮ ಗಾತ್ರದ್ದು
*ಸೀಳಿದ ಹಸಿಮೆಣಸು - 2 ಸಣ್ಣದು
*ಕತ್ತರಿಸಿದ ಶುಂಠಿ - 1 ಚಮಚ
*ಕತ್ತರಿಸಿದ ಬೆಳ್ಳುಳ್ಳಿ - 1 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ನೀರು - ಬೇಕಾದಷ್ಟು
*ಎಣ್ಣೆ - 2 ಚಮಚ

ಮಾಡುವ ವಿಧಾನ
1. ಮೊದಲು ಬಟಾಣಿಯಿಂದ ನೀರನ್ನು ತೆಗೆದು ಅದನ್ನು ಬಸಿದು ಪಕ್ಕದಲ್ಲಿಡಿ.
2. ಪಾತ್ರೆಯಲ್ಲಿ 2 ಚಮಚ ಎಣ್ಣೆಯನ್ನು ಬಿಸಿ ಮಾಡಿ, ಇದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಮತ್ತು ಅದು ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಹುರಿಯಿರಿ.
3. ಹಸಿಮೆಣಸು, ತುರಿದ ತೆಂಗಿನ ತುರಿ, ಶುಂಠಿ, ಬೆಳ್ಳುಳ್ಳಿಯನ್ನು ಸೇರಿಸಿ ಮತ್ತು ಇದೆಲ್ಲಾ ಸಾಮಾಗ್ರಿಗಳನ್ನು ಮೂರು ನಿಮಿಷಗಳ ಕಾಲ ಮಂದ ಉರಿಯಲ್ಲಿ ಬೇಯಿಸಿಕೊಳ್ಳಿ.
4. ಇದು ಬೆಂದಾಗ ಹಸಿ ಬಟಾಣಿಯನ್ನು ಸೇರಿಸಿ. ಸ್ವಲ್ಪ ಉಪ್ಪನ್ನು ಚಿಮುಕಿಸಿ ಮತ್ತು ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
5. ತುರಿದ ಕೊಬ್ಬರಿಯನ್ನು ಪಾತ್ರೆಗೆ ಹಾಕಿ ಈಗ ಚೆನ್ನಾಗಿ ಕಲಸಿಕೊಳ್ಳಿ. ಪಾತ್ರೆಯನ್ನು ಮುಚ್ಚಿ ಮತ್ತು ಬಟಾಣಿ ಬೇಯುವವರೆಗೆ ಇದನ್ನು ಹಾಗೆಯೇ ಬಿಡಿ.
6. ಪೂರ್ತಿ ಆದ ನಂತರ, ಬಟಾಣಿ ತಳ್ಳಗಾಗಲು ಬಿಡಿ. ನಂತರ ಮಿಕ್ಸಿಯಲ್ಲಿ ಇದನ್ನು ನುಣ್ಣಗೆ ರುಬ್ಬಿಕೊಳ್ಳಿ ಅಗತ್ಯವಿದ್ದಲ್ಲಿ ಸ್ವಲ್ಪ ನೀರನ್ನು ಹಾಕಿ.

ನಿಮ್ಮ ಬಟಾಣಿ ಚಟ್ನಿ ಸವಿಯಲು ಸಿದ್ಧವಾಗಿದೆ. ಸಾದಾ ದೋಸೆ ಅಥವಾ ಇಡ್ಲಿಯೊಂದಿಗೆ ಇದನ್ನು ನಿಮಗೆ ಸವಿಯಬಹುದಾಗಿದೆ.

English summary

Green Peas Chutney For Plain Dosa

The green peas chutney is ideally paired with plain dosa. Since there is no masala in the dosa, the green peas chutney acts a substitute in taste. Here is the green peas chutney recipe to try out this morning for breakfast.
X
Desktop Bottom Promotion