For Quick Alerts
ALLOW NOTIFICATIONS  
For Daily Alerts

ಚಳಿಗಾಲಕ್ಕೆ ಬೆಸ್ಟ್ ಶುಂಠಿ ಉಪ್ಪಿನಕಾಯಿ!

|

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವ ಆಹಾರ ತಿನ್ನಬೇಕು. ಶುಂಠಿ ಟೀ ಕುಡಿದರೆ ಶೀತ, ಕೆಮ್ಮು ಈ ರೀತಿಯ ಕಾಯಿಲೆಗಳು ದೂರ ಉಳಿಯುತ್ತದೆ. ಶುಂಠಿ ಹಾಕಿ ತಯಾರಿಸಿದ ಆಹಾರ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಚಳಿಗಾಲದಲ್ಲಿ ದೇಹದ ಆರೋಗ್ಯವನ್ನು ಹೆಚ್ಚಿಸುವ ಶುಂಠಿ ಉಪ್ಪಿನಕಾಯಿಯ ರೆಸಿಪಿ ನೀಡಲಾಗಿದೆ ನೋಡಿ:

ಇದನ್ನು ಮಾಡಿದರೆ ಆಹಾರದ ರುಚಿ ಹೆಚ್ಚುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

Ginger Pickle Winter Recipe

ಬೇಕಾಗುವ ಸಾಮಗ್ರಿಗಳು:
* ಶುಂಠಿ 250 ಗ್ರಾಂ
* ಮೆಂತೆ 2 ಚಮಚ
* ದೊಡ್ಡ ಜೀರಿಗೆ 2 ಚಮಚ
* ಖಾರದ ಪುಡಿ 1 ಚಮಚ ಮತ್ತು 2-3 ಚಮಚ ಹುಣಸೆ ಹಣ್ಣಿನ ರಸ
* ಇಂಗು ಚಿಟಿಕೆಯಷ್ಟು
* ಅರಿಶಿಣ ಪುಡಿ ಒಂದೂವರೆ ಚಮಚ
* ಕತ್ತರಿಸಿದ ತೆಂಗಿನಕಾಯಿ 1 ಕಪ್
* ಎಣ್ಣೆ 1 ಕಪ್
* ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಬಾಣಲೆಯನ್ನು ತೆಗದುಕೊಂಡು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಬೇಕು. ಎಣ್ಣೆ ಬಿಸಿಯಾದಾಗ ಅದಕ್ಕೆ ದೊಡ್ಡ ಜೀರಿಗೆ, ಮೆಂತೆ, ಖಾರದ ಪುಡಿ ಹಾಕಬೇಕು.

* ನಂತರ ಶುಂಠಿಯನ್ನು ಎಣ್ಣೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ 10-15 ನಿಮಿಷ ಹುರಿಯಬೇಕು.

* ಕತ್ತರಿಸಿದ ತೆಂಗಿನ ತುಂಡುಗಳನ್ನು ಸ್ವಲ್ಪ ಕಂಡು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಹುರಿಯಬೇಕು.

* ನಂತರ ಶುಂಠಿಯನ್ನು ತೆಂಗಿನಕಾಯಿಯ ಜೊತೆ ಸೇರಿಸಿ, ಇದಕ್ಕೆ ಹುಣಸೆ ಹಣ್ಣಿನ ರಸ, ಇಂಗು, ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಎರಡು ನಿಮಿಷ ಹುರಿದು ನಂತರ ಬಾಣಲೆಯನ್ನು ಉರಿಯಿಂದ ತೆಗೆದು ತಣ್ಣಗಾಗಲು ಇಡಬೇಕು.

* ತಣ್ಣಗಾದ ಮೇಲೆ ಅದನ್ನು ಬಾಟಲಿನಲ್ಲಿ ಹಾಕಿ ಮುಚ್ಚಿಡಬೇಕು. ಈ ಉಪ್ಪಿನಕಾಯಿಯನ್ನು 2 ವಾರಗಳ ಕಾಲ ಇಡಬಹುದು.

English summary

Ginger Pickle Winter Recipe | Variety Of Pickle Recipe | ಶುಂಠಿ ಉಪ್ಪಿನಕಾಯಿ ಚಳಿಗಾಲದ ರೆಸಿಪಿ | ಅನೇಕ ಬಗೆಯ ಉಪ್ಪಿನಕಾಯಿ ರೆಸಿಪಿ

This ginger recipe is very simple and can easily be prepared by you. In India we call a pickle as achar Eating ginger food is very health especially in this winter season.
X
Desktop Bottom Promotion