For Quick Alerts
ALLOW NOTIFICATIONS  
For Daily Alerts

ಬನ್ನಿ ಬೀಟ್‌ರೂಟ್ ದೋಸೆಯ ರುಚಿ ನೋಡೋಣ...!

By Super
|

ಕೆಂಪುಬಣ್ಣ ಎಂಬ ಒಂದೇ ಕಾರಣಕ್ಕೆ ಬೀಟ್‌ರೂಟ್ ತರಕಾರಿಯನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ಈ ಕೆಂಪುಬಣ್ಣವೇ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪೂರಕವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕಬ್ಬಿಣ ಮತ್ತು ಕ್ಯಾಲ್ಸಿಯಂ ರಕ್ತ ಮತ್ತು ಮೂಳೆಗಳಿಗೆ ಉಪಯುಕ್ತವಾಗಿವೆ. ಆಹಾರತಜ್ಞರ ಪ್ರಕಾರ ವಾರಕ್ಕೊಮ್ಮೆಯಾದರೂ ನಿಮ್ಮ ಆಹಾರದಲ್ಲಿ ಬೀಟ್‌ರೂಟ್ ಇರುವುದು ಆರೋಗ್ಯಕರ! ಆದರೆ ಬಣ್ಣದ ಕಾರಣ ನಿಮ್ಮ

ಮನೆಯವರು ಬೀಟ್‌ರೂಟ್ ಪಲ್ಯವನ್ನು ಸಾರಾಸಾಗಟಾಗಿ ನಿರಾಕರಿಸಿರುವುದನ್ನು ಹಿಂದೆ ಅನುಭವಿಸಿದ್ದೀರಿ. ಈಗ ಅವರಲ್ಲಿ ಯಾರೂ ನಿರಾಕರಿಸಲು ಸಾಧ್ಯವೇ ಆಗದಂತೆ ಮಸಾಲೆ ದೋಸೆಯ ರೂಪದಲ್ಲಿ ಉಪಾಹಾರವನ್ನಾಗಿ ನೀಡಿ. ಏನಾಶ್ಚರ್ಯ, ಬೀಟ್‌ರೂಟ್ ಬೇಡ ಎಂದಿದ್ದವರು ಈಗ ಎರಡನೇ ದೋಸೆಗೆ ಬೇಡಿಕೆ ಇಡುತ್ತಿದ್ದಾರೆ!!!

ಮಸಾಲೆ ದೋಸೆ ಎಂದರೆ ಆಲುಗಡ್ಡೆಯ ಮಸಾಲೆ ಒಳಗಿದ್ದು ಸುರುಳಿ ಸುತ್ತಿರುವ ದೋಸೆ. ಬೀಟ್‌ರೂಟ್ ಮಸಾಲೆ ದೋಸೆಗೂ ಆಲುಗಡ್ಡೆ ಬೇಕು. ಆದರೆ ಆಲುಗಡ್ಡೆ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಆಲುಗಡ್ಡೆ-ಬೀಟ್‌ರೂಟ್‌ನ ಸಂಯೋಜನೆ ವಿಶಿಷ್ಟ ಅನುಭವನ್ನು ನೀಡುತ್ತದೆ. ದೋಸೆ ತೆರೆಯುವವರೆಗೂ ಕಾಣದ ಕೆಂಪು ಬಣ್ಣ ತೆರೆದಾಕ್ಷಣ ಪ್ರಜ್ವಲವಾಗಿ ಹೊಳೆಯುವ ಕಾರಣ ಮಕ್ಕಳು ಈ ದೋಸೆಯನ್ನು ತುಂಬಾ ಇಷ್ಟಪಡುತ್ತಾರೆ. ಬನ್ನಿ ಸ್ವಾದಿಷ್ಟವೂ ಬಣ್ಣದ ಕಾರಣ ವಿಶಿಷ್ಟವೂ ಆದ ಬೀಟ್‌ರೂಟ್ ಮಸಾಲೆ ದೋಸೆಯನ್ನು ತಯಾರಿಸುವುದನ್ನು ಈಗ ಕಲಿಯೋಣ: ಹಿಟ್ಟು ಕಲೆಸುವುದರಲ್ಲಿದೆ ಈ ದೋಸೆಯ ರುಚಿ

Yummy Beetroot Dosa Recipe For Breakfast

*ಪ್ರಮಾಣ: ಮೂವರಿಗೆ ಒಂದು ಹೊತ್ತಿಗಾಗುವಷ್ಟು

*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು

*ತಯಾರಿಕಾ ಸಮಯ: ಇಪ್ಪತ್ತೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

*ಬೀಟ್‌ರೂಟ್ - ಒಂದು (ಮಧ್ಯಮಗಾತ್ರ, ಚಿಕ್ಕದಾದ ಚೌಕಾಕಾರದಲ್ಲಿ ಕತ್ತರಿಸಿದ್ದು)

*ಆಲುಗಡ್ಡೆ - ಎರಡು (ಮಧ್ಯಮಗಾತ್ರ, ದೊಡ್ಡದಾಗಿ ತುಂಡಾಗಿಸಿದ್ದು)

*ಕ್ಯಾರೆಟ್ - ಒಂದು ನಯವಾಗಿ ತುರಿದದ್ದು (ಅವಶ್ಯಕತೆಗೆ ತಕ್ಕಂತೆ, ಇಲ್ಲದಿದ್ದರೂ ಸರಿ)

*ಈರುಳ್ಳಿ - ಒಂದು (ಮಧ್ಯಮಗಾತ್ರ, ಚಿಕ್ಕದಾದ ಚೌಕಾಕಾರದಲ್ಲಿ ಕತ್ತರಿಸಿದ್ದು)

*ಹಸಿಶುಂಠಿ ಪೇಸ್ಟ್ - ಒಂದು ಚಿಕ್ಕ ಚಮಚ

*ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ

*ಹಸಿಮೆಣಸು - ಎರಡು (ಉದ್ದಕ್ಕೆ ಸೀಳಿದ್ದು)

*ಕೆಂಪು ಮೆಣಸಿನ ಪುಡಿ : ಅರ್ಧ ಚಿಕ್ಕ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಒಂದು ಚಮಚ)

*ಅರಿಶಿನ ಪುಡಿ: ಕಾಲು ಚಿಕ್ಕ ಚಮಚ

*ಉಪ್ಪು: ರುಚಿಗನುಸಾರ

*ಉದ್ದಿನ ಬೇಳೆ - ಅರ್ಧ ಚಿಕ್ಕ ಚಮಚ

*ಸಾ಼ಸಿವೆ-ಕಾಲು ಚಮಚ

*ಕರಿಬೇವಿನ ಎಲೆಗಳು - ಸುಮಾರು ಒಂದು ಎಸಳು

*ಎಣ್ಣೆ - ಅಗತ್ಯಕ್ಕೆ ತಕ್ಕಂತೆ

ವಿಧಾನ:

1) ಬೀಟ್‌ರೂಟ್ ಮತ್ತು ಆಲುಗಡ್ಡೆಯನ್ನು ಅಥವಾ (ಕ್ಯಾರೆಟ್ ಇದ್ದರೆ) ಕುಕ್ಕರಿನೊಳಗೆ ಮುಳುಗುವಷ್ಟು ನೀರಿನಲ್ಲಿಟ್ಟು ಉಪ್ಪು ಹಾಕಿ ಎರಡು ಅಥವಾ ಮೂರು ಸೀಟಿ ಬರುವವರೆಗೆ ಬೇಯಿಸಿ. ಬಳಿಕ ಸೀಟಿ ತೆಗೆಯದೇ ತಣ್ಣಗಾಗಲು ಬಿಡಿ.

2) ಇತ್ತ ಇನ್ನೊಂದು ಬಾಣಲೆ ಅಥವಾ ದಪ್ಪತಳದ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಚಿಕ್ಕ ಉರಿಯಲ್ಲಿ ಬಿಸಿಮಾಡಿ. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ ಸಿಡಿಸಿ. ಬಳಿಕ ಉದ್ದಿನ ಬೇಳೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಈರುಳ್ಳಿ, ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಹಾಕಿ ಈರುಳ್ಳಿ ಬೇಯುವವರೆಗೆ ನಡುನಡುವೆ ತಿರುವಿ.

3) ಇತ್ತ ಈರುಳ್ಳಿ ಬೇಯುತ್ತಿದ್ದಂತೆ ಅತ್ತ ಕುಕ್ಕರಿನ ಮುಚ್ಚಳವನ್ನು ತಣ್ಣಗಾಗಿದ್ದರೆ (ಇಲ್ಲದಿದ್ದರೆ ತಣ್ಣೀರಿನ ಕೆಳಗೆ ಹಿಡಿದು ಒತ್ತಡ ನಿವಾರಿಸಿ) ತೆರೆದು ಒಳಗಿನ ಆಲುಗಡ್ಡೆ ಮತ್ತು ಬೀಟ್‌ರೂಟ್‌ಗಳನ್ನು ಒಂದು ಮರದ ಚಮಚ ಅಥವಾ ಸೌಟು ಉಪಯೋಗಿಸಿ ಚೆನ್ನಾಗಿ ಒತ್ತಿ ಮಿಶ್ರಣ ಮಾಡಿ. ಇದು ಹೇಗಿರಬೇಕೆಂದರೆ ಆಲುಗಡ್ಡೆ ತೀರಾ ಬಿಡಿಯಾಗಿಯೂ ಇರಬಾರದು, ತೀರಾ ಹಿಟ್ಟಿನಂತೆಯೂ ಆಗಬಾರದು. ಅದರ ನಡುವಿರಲಿ.

4) ಈರುಳ್ಳಿ ಚೆನ್ನಾಗಿ ಬೆಂದ ಬಳಿಕ ಜಜ್ಜಿದ ಆಲುಗಡ್ಡೆ ಮತ್ತು ಬೀಟ್‌ರೂಟ್ ಮಿಶ್ರಣವನ್ನು ಸೇರಿಸಿ.

5) ಇನ್ನು ಇದರ ಮೇಲೆ ಬೆರಳುಗಳಿಂದ ಮೆಣಸಿನ ಪುಡಿ, ಅರಿಸಿನ ಪುಡಿ, ಕರಿಬೇವಿನ ಎಲೆ ಮತ್ತು ಕೊಂಚ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

6) ಇದಕ್ಕೆ ಕಾಲು ಕಪ್ ನೀರು ಹಾಕಿ ಸುಮಾರು ಮೂರು ನಿಮಿಷಗಳವರೆಗೆ ನಡುನಡುವೆ ತಿರುವುತ್ತಾ ನೀರು ಪೂರ್ಣವಾಗಿ ಇಂಗುವವರೆಗೂ ಬೇಯಿಸಿ.

7) ಬಳಿಕ ಉರಿ ನಂದಿಸಿ ಮುಚ್ಚಳ ಹಾಕಿ ಬದಿಯಲ್ಲಿಡಿ.

8) ಸಿದ್ಧಪಡಿಸಿದ್ದ ದೋಸೆಹಿಟ್ಟನ್ನು ಕಾವಲಿಯ ಮೇಲೆ ತೆಳುವಾಗಿ ಹರಡಿ. ದೋಸೆ ಅರ್ಧ ಬೆಂದ ಬಳಿಕ ಕೊಂಚ ಎಣ್ಣೆಯನ್ನು ಮೇಲಿನಿಂದ ಸವರಿ (ಬೆಣ್ಣೆ ಆದರೆ ಇನ್ನೂ ಉತ್ತಮ) ನಡುವೆ ಒಂದೊ ದೊಡ್ಡ ಚಮಚದಷ್ಟು ಗಾತ್ರದ ಮಸಾಲೆಯನ್ನು ಹಾಕಿ ದೋಸೆ ಬೆಂದ ಬಳಿಕ ಎರಡೂ ಬದಿಗಳ ಅಂಚುಗಳು ಮಸಾಲೆಯ ಮೇಲೆ ಬರುವಂತೆ ಮಡಚಿ ಇಡಿಯ ದೋಸೆಯನ್ನು ತಟ್ಟೆಯ ಮೇಲೆ ಅನಾಮತ್ತಾಗಿ ಉಲ್ಟಾ ಮಾಡಿ.

9) ಬಿಸಿಬಿಸಿಯಿರುವಂತೆಯೇ ತೆಂಗಿನ ತುರಿಯ ಚಟ್ನಿಯೊಂದಿಗೆ ಮಕ್ಕಳಿಗೆ ಬಡಿಸಿ, ಇನ್ನೂ ಒಂದು ಬೇಕು ಎಂಬ ಬೇಡಿಕೆಯನ್ನು ನಿರೀಕ್ಷಿಸಿ. ಕೆಲವು

ಸಲಹೆಗಳು

1) ಮಸಾಲೆ ದೋಸೆಯ ಒಳಗೆ ಮಸಾಲೆ ಇಡುವ ಮೊದಲು ಕಾಯಿತುರಿ, ಅರಿಶಿನ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಹುಳಿ, ಉಪ್ಪು ಸೇರಿಸಿ ಕಡೆದ ಹಸಿ ಮಸಾಲೆಯನ್ನು ಒಂದು ಚಮಚದಷ್ಟು ಸವರಿದ ಬಳಿಕ ಬೆಣ್ಣೆ ಹಚ್ಚಿ ಅದರ ಮೇಲೆ ಮಸಾಲೆಯಿರಿಸಿ ಬಡಿಸಿದರೆ ಅತಿಥಿಗಳಿಗೆ ಈ ಸ್ವಾದ ಬಹುಕಾಲ ನೆನಪಿರುತ್ತದೆ.

2) ಮಸಾಲೆ ದೋಸೆಗೆ ಕಾಯಿತುರಿ, ಹಸಿಮೆಣಸು ಮತ್ತು ಪುದಿನಾ ಎಲೆಗಳ ಚಟ್ನಿಯೂ ಅತಿ ಸೂಕ್ತವಾಗಿದೆ.

3) ಒಂದು ವೇಳೆ ನಿಮ್ಮ ಮನೆಯಲ್ಲಿ ದೊಡ್ಡ ಗಾತ್ರದ ದೋಸೆಕಾವಲಿ ಇಲ್ಲದಿದ್ದರೆ ಚಿಕ್ಕ ಕಾವಲಿಯಲ್ಲಿಯೇ ದೋಸೆ ಮಾಡಿ ತ್ರಿಕೋನಾಕಾರದಲ್ಲಿ ಮಡಚಿ. ಚಿಕ್ಕದಾದರೂ ರುಚಿಯಲ್ಲಿ ದೊಡ್ಡದಾಗಿರುವ ಈ ದೋಸೆಯನ್ನು ಮಕ್ಕಳು ತುಂಬಾ ಇಷ್ಟಪಡುತ್ತಾರೆ.

4) ಬೀಟ್‌ರೂಟ್ ಬೇಯಿಸುವಾಗ ಒಂದು ಚಿಕ್ಕ ತುಂಡು ಹೂಕೋಸನ್ನೂ ಸೇರಿಸಿ ಬೇಯಿಸಿ ಬಳಿಕ ಜಜ್ಜಿ ಮಾಡಿದ ಮಸಾಲೆ ಹೆಚ್ಚು ರುಚಿಕರ ಮಾತ್ರವಲ್ಲ ಇದೇನಿರಬಹುದು ಎಂದು ಅತಿಥಿಗಳನ್ನು ಕುತೂಹಲದ ಘಟ್ಟಕ್ಕೆ ಇಳಿಸುತ್ತದೆ.

English summary

Yummy Beetroot Dosa Recipe For Breakfast

Beetroot is one of the most important veggies you must consume at least once in a week. Rich in iron and calcium, this important vegetable can now be turned into something yummy for breakfast. Indians love to add colour to their meals, and beetroot is one such healthy veggies which will give your plate a rise in look.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more