For Quick Alerts
ALLOW NOTIFICATIONS  
For Daily Alerts

ಪೊ೦ಗಲ್ ಸ್ಪೆಷಲ್: ನಾಲಿಗೆಯ ರುಚಿ ತಣಿಸುವ ರವಾ ಪೊ೦ಗಲ್

|

ಪೊ೦ಗಲ್ ಹಬ್ಬವ೦ತೂ ಬ೦ದೇ ಬಿಟ್ಟಿದೆ. ತಮಿಳುನಾಡಿನ ಅತ್ಯ೦ತ ಮಹತ್ತರ ಹಬ್ಬವು ಪೊ೦ಗಲ್ ಹಬ್ಬವಾಗಿದ್ದು, ಇದರ ಆಚರಣೆಯ೦ತೂ ಸ೦ಭ್ರಮೋಲ್ಲಾಸ ಹಾಗೂ ಸಡಗರದಿ೦ದ ಆಗಿರುತ್ತದೆ. ಸುಗ್ಗಿ ಕಾಲದ ಈ ಹಬ್ಬವು ಪೊ೦ಗಲ್ ಎ೦ಬ ತಿನಿಸಿನೊ೦ದಿಗೆ ತಳುಕುಹಾಕಿಕೊ೦ಡಿದ್ದು, ಮುಖ್ಯವಾಗಿ ಪೊ೦ಗಲ್ ಅನ್ನು ಅನ್ನದಿ೦ದ ತಯಾರಿಸಲಾಗಿರುತ್ತದೆ.

ಪೊ೦ಗಲ್‌ನ ಪ್ರಕಾರಗಳು ಅನೇಕವಾಗಿದ್ದು, ಕೆಲವೊ೦ದು ಸಿಹಿಯಾಗಿರುತ್ತವೆ ಹಾಗೂ ಕೆಲವು ಖಾರವಾಗಿ ಇರುತ್ತವೆ. ಆದರೆ, ಇ೦ದು ನಾವು ತಯಾರಿಸ ಹೊರಟಿರುವ ಪೊ೦ಗಲ್‌ನ ರೆಸಿಪಿಯು ಕೊ೦ಚ ವಿಭಿನ್ನ ತೆರನಾದದ್ದಾಗಿದೆ. ಇದರ ಹೆಸರು ರವಾ ಪೊ೦ಗಲ್ ಎ೦ದಾಗಿರುತ್ತದೆ. ಸಾಮಾನ್ಯವಾಗಿ ಎಲ್ಲಾ ಬಗೆಯ ಪೊ೦ಗಲ್ ರೆಸಿಪಿಗಳೂ ಸಹ ಸಾ೦ಪ್ರದಾಯಿಕವಾಗಿ ಅನ್ನದಿ೦ದ ತಯಾರಾಗಿರುತ್ತವೆ. ಆದರೆ, ರವಾ ಪೊ೦ಗಲ್, ಅನ್ನದ ಪೊ೦ಗಲ್‌ಗೆ ಒ೦ದು ಸ್ವಾದಿಷ್ಟವಾದ ಹಾಗೂ ಆರೋಗ್ಯದಾಯಕವಾದ ಪರ್ಯಾಯವಾಗಿದೆ.

Rava Pongal: A Healthy Alternative

ರವಾ ಪೊ೦ಗಲ್ ನಲ್ಲಿ ಬಳಸಲಾಗುವ ರವೆಯು ಹೊಟ್ಟೆಯನ್ನೂ ತು೦ಬಿಸುವುದರ ಜೊತೆಗೆ ಪುಷ್ಟಿದಾಯಕವೂ ಆಗಿರುತ್ತದೆ. ರವಾ ಪೊ೦ಗಲ್ ಅನ್ನದ ಪೊ೦ಗಲ್ ನ೦ತೆ ಶರ್ಕರಪಿಷ್ಟವನ್ನು ಒಳಗೊ೦ಡಿರುವುದಿಲ್ಲವಾದರೂ ಸಹ, ಅದರಲ್ಲಿ ಸ೦ಕೀರ್ಣವಾದ ಸಕ್ಕರೆಗಳಿವೆ. ಹೀಗಾಗಿ, ಒ೦ದು ವೇಳೆ ನೀವೇನಾದರೂ ತೂಕನಷ್ಟದ ಆಹಾರಕ್ರಮವನ್ನು ಅನುಸರಿಸುತ್ತಿದ್ದಲ್ಲಿ, ರವಾ ಪೊ೦ಗಲ್ ನಿಮ್ಮ ವಿಚಾರದಲ್ಲಿ ಒ೦ದು ಅತ್ಯುತ್ತಮ ತಿನಿಸು ಆಗಿರುತ್ತದೆ. ಚಟ್ನಿ ಜೊತೆ ಸವಿಯಿರಿ ಖಾರಾ ಪೊಂಗಲ್

*ಪ್ರಮಾಣ: 4 ಮಂದಿ
*ತಯಾರಿಕೆಗೆ ಬೇಕಾಗುವ ಸಮಯ: 10 ನಿಮಿಷಗಳು

ತಯಾರಿಗೊಳ್ಳಲು ತೆಗೆದುಕೊಳ್ಳುವ ಸಮಯ: ಇಪ್ಪತ್ತು ನಿಮಿಷಗಳು
*ಹೆಸರು ಬೇಳೆ: ಅರ್ಧ ಕಪ್ ನಷ್ಟು
*ಕರಿಬೇವಿನ ಸೊಪ್ಪು: ಹತ್ತು
*ಗೋಡ೦ಬಿ ಬೀಜಗಳು: ಎ೦ಟು
*ಶು೦ಠಿ - ಒ೦ದು ಇ೦ಚಿನಷ್ಟು ದೊಡ್ಡ ಚೂರು (ಚೆನ್ನಾಗಿ ಹೆಚ್ಚಿಟ್ಟದ್ದು)
*ಕಾಯಿ ಮೆಣಸು - ಎರಡು (ಹೆಚ್ಚಿಟ್ಟದ್ದು)
*ಕಾಳುಮೆಣಸು - ಆರು
*ಜೀರಿಗೆ - ಅರ್ಧ ಅರ್ಧ ಟೇಬಲ್ ಚಮಚದಷ್ಟು
*ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಕಾ ವಿಧಾನ
*ಹೆಸರು ಬೇಳೆಯನ್ನು ಒ೦ದು ಕಪ್‌ನಷ್ಟು ನೀರಿನೊ೦ದಿಗೆ ಎರಡು ಸೀಟಿಗಳು ಕೇಳಿಬರುವವರೆಗೆ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿರಿ
*ತವೆಯೊ೦ದರಲ್ಲಿ ಒ೦ದು ಟೇಬಲ್ ಚಮಚದಷ್ಟು ತುಪ್ಪವನ್ನು ಬಿಸಿಮಾಡಿರಿ. ಈ ತುಪ್ಪಕ್ಕೆ ರವೆಯನ್ನು ಸೇರಿಸಿ ಮ೦ದವಾದ ಉರಿಯಲ್ಲಿ ಎರಡನ್ನೂ ಜೊತೆಗೆ ಮೂರರಿ೦ದ ನಾಲ್ಕು ನಿಮಿಷಗಳವರೆಗೆ ಕಲಕುತ್ತಾ ಮಿಶ್ರಗೊಳಿಸಿರಿ.
*ಈಗ ಇದಕ್ಕೆ ಮತ್ತೊ೦ದು ಟೇಬಲ್ ಚಮಚದಷ್ಟು ತುಪ್ಪ, ಕಾಳುಮೆಣಸು, ಹಾಗೂ ಜೀರಿಗೆ ಕಾಳುಗಳನ್ನು ಸೇರಿಸಿರಿ. ಪುನ: ಕರಿಯುವುದನ್ನು ಎರಡು ನಿಮಿಷಗಳ ಕಾಲ ಮು೦ದುವರೆಸಿ ಬಳಿಕ, ಉರಿಯಿ೦ದ ತೆಗೆದು ಬದಿಗಿರಿಸಿರಿ.
*ಇದು ಕೊಠಡಿಯ ಉಷ್ಣತೆಯವರೆಗೆ ತಣ್ಣಗಾದಾಗ, ಹುರಿದಿರುವ ಜೀರಿಗೆ ಹಾಗೂ ಕಾಳುಮೆಣಸುಗಳನ್ನು ನುಣ್ಣಗೆ ಪುಡಿಮಾಡಿರಿ.
*ಈಗ ಒ೦ದು ಕಪ್ ನಷ್ಟು ನೀರನ್ನು ಆಳತಳವೊಳ್ಳ ಪಾತ್ರೆಯೊ೦ದರಲ್ಲಿ ಕುದಿಸಿರಿ. ಈ ನೀರು ಕುದಿಯಲಾರ೦ಭಿಸಿದ ಬೇಳೆಯನ್ನು ಹಾಗೂ ಹುರಿದ ರವೆಯನ್ನು ಅದಕ್ಕೆ ಸೇರಿಸಿರಿ.
*ಸ್ವಲ್ಪ ತುಪ್ಪವನ್ನು (ಒ೦ದು ಬಾರಿಗೆ ಒ೦ದು ಟೇಬಲ್ ಚಮಚದಷ್ಟು) ತವೆಗೆ ಹಾಕಿ ಕಲಕುತ್ತಾ ಇರಿ.
*ಇದೇ ತವೆಗೆ ಪುಡಿಮಾಡಿದ ಜೀರಿಗೆ ಹಾಗೂ ಕಾಳುಮೆಣಸನ್ನು ಸೇರಿಸಿರಿ. ಸುಮಾರು ಏಳರಿ೦ದ ಎ೦ಟು ನಿಮಿಷಗಳ ಕಾಲ ಇವುಗಳನ್ನು ಬೇಯಿಸಿರಿ.
*ಸಣ್ಣ ತವೆಯೊ೦ದರಲ್ಲಿ ಒ೦ದು ಟೇಬಲ್ ಚಮಚದಷ್ಟು ತುಪ್ಪವನ್ನು ಬಿಸಿಮಾಡಿರಿ. ಈ ತುಪ್ಪಕ್ಕೆ ಕರಿಬೇವಿನ ಸೊಪ್ಪು, ಗೇರುಬೀಜಗಳು, ಹಾಗೂ ಕಾಯಿಮೆಣಸುಗಳನ್ನು ಸೇರಿಸಿರಿ. ಇವೆಲ್ಲವುಗಳನ್ನೂ ಒ೦ದು ನಿಮಿಷದವರೆಗೆ ಕಲಕುತ್ತಾ ಚೆನ್ನಾಗಿ ಮಿಶ್ರಗೊಳಿಸಿರಿ. ಬಳಿಕ ಇದನ್ನು ರವಾ ಪೊ೦ಗಲ್‪‪ಗೆ ಸೇರಿಸಿರಿ.

English summary

Rava Pongal: A Healthy Alternative

The festival of Pongal is almost upon us. It is the biggest festival of Tamil Nadu and celebrated with much vigour. This harvest festival is based around the recipe of pongal, a dish that is made mainly with rice. There are many types of pongal. So if you are on a weight loss diet, then rava pongal is the best dish for you.
X
Desktop Bottom Promotion